newsfirstkannada.com

×

IPL 2025: ಮುಂಬೈ ಇಂಡಿಯನ್ಸ್​ ತಂಡದಿಂದ ರೋಹಿತ್​ ಶರ್ಮಾಗೆ ಬಿಗ್​ ಆಫರ್​!

Share :

Published September 24, 2024 at 8:33pm

Update September 24, 2024 at 8:34pm

    2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರೇಜ್​​ ಹೆಚ್ಚುತ್ತಲೇ ಇದೆ..!

    ಎಲ್ಲಾ ಐಪಿಎಲ್​​ ತಂಡಗಳಿಂದಲೂ ಮೆಗಾ ಹರಾಜಿಗೆ ಭರ್ಜರಿ ತಯಾರಿ

    ಇದರ ಮಧ್ಯೆ ಮುಂಬೈ ಇಂಡಿಯನ್ಸ್​ನಿಂದ ಹೊರಬಿತ್ತು ಬಿಗ್​ ಅಪ್ಡೇಟ್​​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರೇಜ್​​ ಹೆಚ್ಚುತ್ತಲೇ ಇದೆ. ಎಲ್ಲಾ ಐಪಿಎಲ್​ ತಂಡಗಳು ಮೆಗಾ ಹರಾಜಿಗೆ ಮುನ್ನ ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ಅನ್ನೋ ಯೋಚನೆಯಲ್ಲಿ ತೊಡಗಿವೆ. ಇದರ ಮಧ್ಯೆ ಮುಂಬೈ ಇಂಡಿಯನ್ಸ್​ ತಂಡದಿಂದ ಬಿಗ್​ ಅಪ್ಡೇಟ್​ ಒಂದು ಸಿಕ್ಕಿದೆ.

ಐದು ಬಾರಿ ಕಪ್​ ಗೆದ್ದಿರೋ ಮುಂಬೈ ಇಂಡಿಯನ್ಸ್​​ಗೆ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ. ಒಂದು ಸೀಸನ್​​ನಲ್ಲಿ ಕಪ್​ ಗೆಲ್ಲಿಸಿ, ಮತ್ತೊಂದು ಸೀಸನ್​​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಫೈನಲ್​ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಆದರೆ, ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​​ ಹೀನಾಯ ಸೋಲು ಕಂಡಿತ್ತು. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​ ಪ್ಲೇ ಆಫ್​ ಪ್ರವೇಶ ಮಾಡಲಿಲ್ಲ. ಇದರ ಮಧ್ಯೆ ಮುಂದಿನ ಸೀಸನ್​ಗೆ ಹಾರ್ದಿಕ್​ ಜಾಗಕ್ಕೆ ಮತ್ತೆ ರೋಹಿತ್​ ಶರ್ಮಾ ಅವರೇ ಕ್ಯಾಪ್ಟನ್​ ಆಗಿ ಬರಬಹುದು ಎಂದು ಮುಂಬೈ ಇಂಡಿಯನ್ಸ್​ ಮೂಲಗಳು ತಿಳಿಸಿವೆ.

ರೋಹಿತ್​ಗೆ ಮತ್ತೆ ಕ್ಯಾಪ್ಟನ್ಸಿ

2024ರ ಆವೃತ್ತಿಯಲ್ಲಿ ಮುಂಬೈ ಕಳಪೆ ಪ್ರದರ್ಶನ ನೀಡಿದೆ. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಬಹುದು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ರೋಹಿತ್ ಶರ್ಮಾ ಐದು ಐಪಿಎಲ್ ಕಪ್​ ಗೆದ್ದುಕೊಟ್ಟ ನಾಯಕ. ರೋಹಿತ್​ ನಾಯಕತ್ವ ಕಿತ್ತುಕೊಂಡು ಹಾರ್ದಿಕ್ ಪಾಂಡ್ಯಗೆ ನೀಡಿದರು. ನಾಯಕನನ್ನು ಬದಲಾಯಿಸುವುದು ದೊಡ್ಡ ನಿರ್ಧಾರ. ಆದರೆ, ಕಪ್​ಗಾಗಿ ಮುಂಬೈ ಇಂಡಿಯನ್ಸ್​​ ರೋಹಿತ್​ ಅವರನ್ನೇ ಕ್ಯಾಪ್ಟನ್​ ಮಾಡುವ ನಿರ್ಧಾರ ತಮ್ಮದು ಎಂದು ಫ್ರಾಂಚೈಸಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2025: ಮುಂಬೈ ಇಂಡಿಯನ್ಸ್​ ತಂಡದಿಂದ ರೋಹಿತ್​ ಶರ್ಮಾಗೆ ಬಿಗ್​ ಆಫರ್​!

https://newsfirstlive.com/wp-content/uploads/2024/04/Surya_Rohit.jpg

Load More