ಸೀಸನ್ 10ರ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 11ರ ಹೊಸ ಅಧ್ಯಾಯ
ಆಗಸ್ಟ್ ಶುರುವಾಗುತ್ತಿದ್ದಂತೆ ವೀಕ್ಷಕರಲ್ಲಿ ಶುರುವಾಯ್ತು ಬಿಗ್ಬಾಸ್ ಫೀವರ್
ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದೆಯಂತೆ ಬಿಗ್ಬಾಸ್
ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಅಂತಾನೇ ಬಿರುದು ಪಡೆದಿರೋ ಶೋ ಬಿಗ್ಬಾಸ್. ದೇಶದ ನಾನಾ ಭಾಷೆಗಳಲ್ಲಿ ಬಿಗ್ಬಾಸ್ ಶೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸೀಸನ್ 10ರ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 11ಗೆ ಹೊಸ ರೀತಿಯಲ್ಲಿ ತಂಡ ಪ್ಲ್ಯಾನ್ ಮಾಡ್ತಿದಿಯಂತೆ. ಸಾಕಷ್ಟು ವಿಶೇಷತೆಗಳನ್ನ ಹೊತ್ತು ತರೋದಕ್ಕೆ ಹುಮ್ಮಸ್ಸಿನಿಂದ ಸಜ್ಜಾಗ್ತಿದೆ ಸೀಸನ್ ಹನ್ನೊಂದು.
ಇದನ್ನೂ ಓದಿ: ರೀಲ್ಸ್ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್ನಿಂದ ಬಿದ್ದು ಇನ್ಸ್ಟಾ ತಾರೆ ಸಾವು
ಇದನ್ನೂ ಓದಿ: ವೀಕ್ಷಕರಿಗೆ ಗುಡ್ನ್ಯೂಸ್.. ಬಿಗ್ ಬಾಸ್ ಕನ್ನಡ ಸೀಸನ್ 11 ಶುರು ಯಾವಾಗ?
ಆಗಸ್ಟ್ ಶುರುವಾಗುತ್ತಿದ್ದ ಹಾಗೇ ಬಿಗ್ಬಾಸ್ ಫೀವರ್ ಜೋರಾಗುತ್ತೆ. ಇದಕ್ಕೆ ಕಾರಣ ಪ್ರತಿ ವರ್ಷ ಬಿಗ್ಬಾಸ್ ಸೀಸನ್ 11 ಅಕ್ಟೋಬರ್ ಮೊದಲ ವಾರದಲ್ಲಿ ಲಾಂಚ್ ಆಗುತ್ತೆ. ಹೀಗಾಗಿ ಒಂದೆರಡು ತಿಂಗಳು ಮುಂಚೆಯಿಂದನೇ ಶೋ ಬಗ್ಗೆ ಕುತೂಹಲದ ಕಣ್ಣು ಅರಳೋದು ಸಹಜ. ಈ ಬಾರಿ ಕೂಡ ಗುಸುಗುಸು ಶುರುವಾಗಿದೆ. ಮೂಲಗಳ ಪ್ರಕಾರ ಬಿಗ್ಬಾಸ್ಗೆ ತಯಾರಿ ನಡಿತಿರೋದು ಸತ್ಯ. ಗಿಚ್ಚಿಗಿಲಿಗಿಲಿ ಸೀಸನ್ 3 ಕೂಡ ಶುರುವಾಗಿ ಅದಾಗಲೇ ನಾಲ್ಕು ತಿಂಗಳು ಕಳೆದಿವೆ. ಸದ್ಯದಲ್ಲೇ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗ್ತಿದಿಯಂತೆ. ಗಿಚ್ಚಿಗಿಲಿಗಿಲಿ ಮುಕ್ತಾಯದ ನಂತರ ಬಿಗ್ಬಾಸ್ ಶುರುವಾಗಲಿದೆ. ಕಳೆದ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಿಂದ ಬಿಗ್ಬಾಸ್ ಮನೆಯನ್ನು ದೊಡ್ಡ ಆಲದ ಮರದ ಹತ್ತಿರ ಶಿಫ್ಟ್ ಮಾಡಲಾಗಿತ್ತು.
ಸೀಸನ್ 10 ಯಾವ ಮಟ್ಟಿಗೆ ಯಶಸ್ಸನ್ನ ಕಂಡಿತು, ಎಷ್ಟು ವಿವಾದಗಳನ್ನ ಮೈ ಮೇಲೆ ಎಳಿದುಕೊಂಡಿತು ಅನ್ನೋದು ಈಗ ಇತಿಹಾಸ. ಇಂದಿಗೂ ಅದೇ ವಿಚಾರಗಳು ಚರ್ಚೆ ಆಗ್ತಾನೆ ಇರ್ತಾವೆ. ಈಗ ಸೀಸನ್ 11ರ ಹೊಸ ಅಧ್ಯಾಯ ಕೂಡ ಅದೇ ಮನೆಯಲ್ಲಿ ಶುರುವಾಗಲಿದೆಯಂತೆ. ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದೆಯಂತೆ ಬಿಗ್ಬಾಸ್ ತಂಡ. ಈಗಾಗಲೇ ಬಿಗ್ಬಾಸ್ ಸಖತ್ ತಯಾರಿ ಆರಂಭಿಸಿದ್ದು, ಸ್ಪರ್ಧಿಗಳ ಲಿಸ್ಟ್ ರೆಡಿ ಆಗ್ತಿದೆಯಂತೆ. ಈ ಬಾರಿಯೂ ಕಿಚ್ಚ ಸುದೀಪ್ ಅವರ ಹೊಸ್ಟಿಂಗ್ ಕೂಡ ಮುಂದುವರೆಯಲಿದೆ. ಕಿಚ್ಚನ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರೋದಕ್ಕೆ ರೆಡಿಯಾಗ್ತಿದ್ದು, ಸಿನಿಮಾ ಶೂಟಿಂಗ್ನಿಂದ ಕೊಂಚ ರಿಲ್ಯಾಕ್ಸ್ ಆದ ತಕ್ಷಣ ಕಿಚ್ಚನ ಜೊತೆ ಬಿಗ್ ಬಾಸ್ ಕತೆ ವೀಕ್ಷಕರ ಮುಂದೆ ಬರಲಿದೆಯಂತೆ. ಒಟ್ಟಿನಲ್ಲಿ ಬಿಗ್ಬಾಸ್ ಬಿಗ್ ಬ್ಯಾಂಗ್ ಮಾಡೋದ್ರಲ್ಲಂತೂ ಡೌಟ್ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ