/newsfirstlive-kannada/media/post_attachments/wp-content/uploads/2025/01/Cm-Siddaramaiah-On-Case-Census.jpg)
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ ಪಾರ್ವತಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ ಜಾರಿಗೊಳಿಸಿರುವ ಸಮನ್ಸ್‌ಗೆ ಇಂದು ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ED (ಜಾರಿ ನಿರ್ದೇಶನಾಲಯ) ಜಾರಿ ಮಾಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಹೈಕೋರ್ಟ್ ಇ.ಡಿ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ್ದು ಫೆಬ್ರವರಿ 10ನೇ ತಾರೀಖಿಗೆ ವಿಚಾರಣೆಯನ್ನು ಮುಂದೂಡಲಾಗಿದೆ.
ಹೈಕೋರ್ಟ್‌ನಲ್ಲಿ ವಾದ ಹೇಗಿತ್ತು?
ಹೈಕೋರ್ಟ್‌ನಲ್ಲಿ ಇ.ಡಿ ಪರವಾಗಿ ಅರವಿಂದ ಕಾಮತ್ ಅವರು ಹಾಜರಾಗಿದ್ದು, ಸಚಿವ ಭೈರತಿ ಸುರೇಶ್ ಪರವಾಗಿ ಸಿ.ವಿ ನಾಗೇಶ್ ವಾದ ಮಂಡಿಸಿದರು.
ನಾನು ಈ ಪ್ರಕರಣದಲ್ಲಿ ಆರೋಪಿ ಅಲ್ಲ. ಆದರೂ ಕೂಡ ಇಡಿ ಸಮನ್ಸ್ ನೀಡಿದೆ. ನಾಳೆಯಿಂದಲೇ ಸುರೇಶ್ ಮಗನ ಮದುವೆ ಕಾರ್ಯಕ್ರಮ ಶುರುವಾಗುತ್ತಾ ಇದೆ. ನಾಳೆಯೇ ಬರಲು ನೋಟಿಸ್ ನೀಡಿದ್ದಾರೆ. ನಟೇಶ್ ಅವರಿಗೂ ಇಡಿ ಸಮನ್ಸ್ ನೀಡಿದ್ದು, ಇಂದು ಮಧ್ಯಾಹ್ನ ಮತ್ತೊಂದು ಪೀಠದಲ್ಲಿ ರದ್ದು ಮಾಡಿ ಆದೇಶ ಬಂದಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ದಾದಾಗಿರಿ ವಿರುದ್ಧ ಹೊಸ ಅಸ್ತ್ರ; ಕಾಗ್ನಿಜಬಲ್ ಅಫೆನ್ಸ್ ಅಂದರೆ ಏನು..?
ಇದೇ ವೇಳೆ ಇ.ಡಿ ಪರವಾಗಿ ಅರವಿಂದ ಕಾಮತ್ ಅವರು ವಾದ ಮಂಡಿಸಿದರು. ಆ ಪೀಠದಲ್ಲಿ ಯಾವ ಆಧಾರದ ಮೇಲೆ ರದ್ದು ಮಾಡಿದೆ ಗೊತ್ತಿಲ್ಲ. ಸಮನ್ಸ್ ನೀಡುವ ಅಧಿಕಾರ ಇ.ಡಿಗೆ ಇದೆ. ತನಿಖೆ ಮಾಡುವಾಗ ಯಾರಿಗೆ ಬೇಕಾದರೂ ನೋಟಿಸ್ ನೀಡಬಹುದು.
ಸಿಎಂ ಪತ್ನಿ ಪರವಾಗಿ ಸಂದೇಶ್ ಚೌಟಾ ವಾದ ಮಂಡಿಸಿದ್ದು, ಸಮನ್ಸ್‌ಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಜಡ್ಜ್ ಆದೇಶವೇನು?
ಈ ಅರ್ಜಿ ವಿಚಾರಣೆ ನಡೆಯಲಿ ಯಾಕೆ ಆತುರ. ಯಾಕೆ ಇಷ್ಟೊಂದು ತುರ್ತು? ಮುಡಾ ಪ್ರಕರಣದಲ್ಲಿ ಆದೇಶ ಕಾಯ್ದಿರಿಸಲಾಗಿದೆ. ವಿಶೇಷ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದೂಡಲಾಗಿದೆ. ಈ ನ್ಯಾಯಾಲಯದ ಪ್ರಕ್ರಿಯೆಗೆ ಯಾತನೆಯಾಗುವುದು ಬೇಕಿಲ್ಲ. ಮುಂದಿನ ಆದೇಶದ ತನಕ ವಿಚಾರಣೆಗೆ ಹಾಜರಾಗುವ ಅಗತ್ಯ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ