RCB ಬೌಲರ್ ಯಶ್ ದಯಾಳ್‌ಗೆ ಬಿಗ್​ ರಿಲೀಫ್‌.. ಹೈಕೋರ್ಟ್​ ಹೇಳಿರುವುದು ಏನು..?

author-image
Bheemappa
Updated On
RCB ಬೌಲರ್ ಯಶ್ ದಯಾಳ್‌ಗೆ ಬಿಗ್​ ರಿಲೀಫ್‌.. ಹೈಕೋರ್ಟ್​ ಹೇಳಿರುವುದು ಏನು..?
Advertisment
  • 5 ವರ್ಷದವರೆಗೆ ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ
  • ಯಶ್ ದಯಾಳ್ ವಿರುದ್ಧ ಜುಲೈ 6 ರಂದು ಪ್ರಕರಣ ದಾಖಲಾಗಿತ್ತು
  • RCB ಬೌಲರ್​ ಯಶ್ ದಯಾಳ್ ಸಂಕಷ್ಟದಿಂದ ಹೊರ ಬರ್ತಾರಾ?

ಅಲಹಾಬಾದ್ ಹೈಕೋರ್ಟ್​ನಿಂದ ಆರ್​ಸಿಬಿ ಆಟಗಾರ ಯಶ್ ದಯಾಳ್​​ಗೆ ರೀಲೀಫ್ ಸಿಕ್ಕಿದೆ. ರೇಪ್ ಕೇಸ್​ನಲ್ಲಿ ಯಶ್ ದಯಾಳ್ ಬಂಧಿಸದಂತೆ ಹೈಕೋರ್ಟ್ ಆದೇಶ ನೀಡಿದೆ. ಅಲಹಾಬಾದ್ ಹೈಕೋರ್ಟ್ ನಿಂದ ಯಶ್ ದಯಾಳ್​​​ಗೆ ಪೊಲೀಸರ ಬಂಧನದಿಂದ ರಕ್ಷಣೆ ಸಿಕ್ಕಿದೆ. ಹೈಕೋರ್ಟ್​ನಲ್ಲಿ ಮುಂದಿನ ವಿಚಾರಣೆವರೆಗೂ ಬಂಧನ ಮಾಡದಂತೆ ಆದೇಶ ನೀಡಲಾಗಿದೆ.

ಜುಲೈ 6 ರಂದು ಯಶ್ ದಯಾಳ್ ವಿರುದ್ಧ ಉತ್ತರ ಪ್ರದೇಶದ ನೋಯ್ಡಾದ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ರೇಪ್‌ ಕೇಸ್ ದಾಖಲಾಗಿತ್ತು. ಈ ಕೇಸ್​ನಲ್ಲಿ ಈಗ ಆರ್‌ಸಿಬಿ ಬೌಲರ್ ಯಶ್ ದಯಾಳ್​​ಗೆ ಹೈಕೋರ್ಟ್​ನಿಂದ ರಿಲೀಫ್ ಸಿಕ್ಕಿದೆ. ನಿಮ್ಮನ್ನು ಒಂದು ದಿನ, 2 ದಿನ, ಮೂರು ದಿನ ಮೂರ್ಖರನ್ನಾಗಿ ಮಾಡಬಹುದು. ಆದರೇ, 5 ವರ್ಷ ಸಾಧ್ಯವಿಲ್ಲ. ನೀವು 5 ವರ್ಷ ರಿಲೇಷನ್​ಷಿಪ್​​​ನಲ್ಲಿ ಇದ್ದೀರಿ. ನಿಮ್ಮನ್ನು 5 ವರ್ಷ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿ ಮಾಡೋರಿಗೆ ಗುಡ್​ನ್ಯೂಸ್​.. ಷೋರೂಮ್ ಉದ್ಘಾಟನೆ, ಬೆಲೆ ಎಷ್ಟು?

publive-image

ಯಶ್ ದಯಾಳ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಬಂಧ ಬೆಳೆಸಿ, ಈಗ ಮದುವೆಯಾಗದೇ ವಂಚಿಸಿದ್ದಾರೆ ಎಂದು ಯುವತಿಯೊಬ್ಬಳು ಇಂದಿರಾಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳೆದ 5 ವರ್ಷಗಳಿಂದ ನಾನು ಹಾಗೂ ಯಶ್ ದಯಾಳ್ ರಿಲೇಷನ್​ಷಿಪ್​ನಲ್ಲಿ ಇದ್ದೇವು ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಹೀಗಾಗಿ 5 ವರ್ಷದವರೆಗೂ ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಬಳಿಕ ಯಶ್ ದಯಾಳ್​​ರನ್ನು ಪೊಲೀಸರು ಬಂಧಿಸದಂತೆ, ಬಂಧನದಿಂದ ರಕ್ಷಣೆ ನೀಡಿ ಆದೇಶ ನೀಡಿದೆ.

ಸಂತ್ರಸ್ತ ಯುವತಿಯು ಈಗಾಗಲೇ ಯಶ್ ದಯಾಳ್ ವಿರುದ್ಧ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದಾಳೆ. ಈ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಳೆದ ವಾರ ಯುವತಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಯುವತಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ ಬಳಿಕ ಯಶ್ ದಯಾಳ್​ರನ್ನು ಪೊಲೀಸರು ಬಂಧಿಸುವ ಸಾಧ್ಯತೆಯೂ ಇತ್ತು. ಹೀಗಾಗಿ ಈಗ ಆರ್‌ಬಿಸಿ ಆಟಗಾರ ಯಶ್ ದಯಾಳ್, ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿ ಪೊಲೀಸ್ ಬಂಧನದಿಂದ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment