IPL 2025: ಆರ್​​​ಸಿಬಿ ಕೈ ಬಿಟ್ಟ ಆಟಗಾರನಿಗೆ ಮಹತ್ವದ ಜವಾಬ್ದಾರಿ

author-image
Ganesh Nachikethu
Updated On
IPL 2025: ಆರ್​​​ಸಿಬಿ ಕೈ ಬಿಟ್ಟ ಆಟಗಾರನಿಗೆ ಮಹತ್ವದ ಜವಾಬ್ದಾರಿ
Advertisment
  • ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 18ನೇ ಸೀಸನ್!
  • ಐಪಿಎಲ್​​ 18ನೇ ಸೀಸನ್​​ಗೆ ಇನ್ನೇನು ಕೇವಲ 4 ದಿನಗಳು ಮಾತ್ರ ಬಾಕಿ
  • ಇದರ ಮಧ್ಯೆ ಆರ್​​ಸಿಬಿ ಮಾಜಿ ಆಟಗಾರನಿಗೆ ಮಹತ್ವದ ಜವಾಬ್ದಾರಿ

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 18ನೇ ಸೀಸನ್​​ಗೆ ಇನ್ನೇನು ಕೇವಲ 4 ದಿನಗಳು ಮಾತ್ರ ಬಾಕಿ ಇವೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ತಮ್ಮ ನಾಯಕರನ್ನು ಘೋಷಿಸಿವೆ. ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹೊಸ ಕ್ಯಾಪ್ಟನ್​ ಘೋಷಣೆ ಆದರು. ಅಕ್ಷರ್ ಪಟೇಲ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಇದರ ಮಧ್ಯೆ ಮತ್ತೊಂದು ಬಿಗ್​​ ಅಪ್ಡೇಟ್​ ಬಂದಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಆರ್​​​ಸಿಬಿ ತಂಡ ಕೈ ಬಿಟ್ಟ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಐಪಿಎಲ್​ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮಾಜಿ ನಾಯಕನಿಗೆ ಮೂಲ ಬೆಲೆ ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿತ್ತು. ಫಾಫ್‌ ಡುಪ್ಲೆಸಿಸ್​ ಈಗ ಡೆಲ್ಲಿ ತಂಡದ ಭಾಗವಾಗಿದ್ದಾರೆ. ಇವರಿಗೆ ಡೆಲ್ಲಿ ತಂಡದಲ್ಲಿ ದೊಡ್ಡ ಜವಾಬ್ದಾರಿ ನೀಡಿದ್ದು, ಐಪಿಎಲ್​​ ಕಪ್​ ಗೆಲ್ಲಲು ಪ್ಲಾನ್​ ಮಾಡಲಾಗಿದೆ.

ಏನಿದು ದೊಡ್ಡ ಜವಾಬ್ದಾರಿ?

ಇನ್ನು, ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿರೋ ಡೆಲ್ಲಿ ಕ್ಯಾಪಿಟಲ್ಸ್​​ ತಂಡ ವಿಭಿನ್ನ ಘೋಷಣೆ ಒಂದು ಮಾಡಿದೆ. ಈ ವಿಡಿಯೋದಲ್ಲಿ ಫಾಫ್​ ಯಾರೊಂದಿಗೋ ಫೋನ್​​ನಲ್ಲಿ ಮಾತಾಡುತ್ತಾ ನಾನು ಡೆಲ್ಲಿ ತಂಡದ ಉಪನಾಯಕ ಎಂದಿದ್ದಾರೆ. ಈ ಮೂಲಕ ತನಗೆ ನೀಡಲಾದ ಜವಾಬ್ದಾರಿಯನ್ನು ಘೋಷಿಸಿದ್ದಾರೆ.

ಕಳೆದ ವರ್ಷ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಡುಪ್ಲೆಸಿಸ್ ಅವರನ್ನು ರಿಲೀಸ್​ ಮಾಡಿತ್ತು. ಇವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಇವರಿಗೆ 40 ವರ್ಷ ಆಗಿದ್ದು, ಆನ್​ಫೀಲ್ಡ್​ನಲ್ಲಿ ಮಾತ್ರ 18 ವರ್ಷದ ಯುವಕನಂತೆ ಕಾಣುತ್ತಾರೆ.

ಫಾಫ್​ ಬಿರುಸಿನ ಬ್ಯಾಟಿಂಗ್ ಹಾಗೂ ಆಕರ್ಷಕ ಫೀಲ್ಡಿಂಗ್‌ಗೆ ಹೆಸರುವಾಸಿ. ಇವರು 2023ರ ಐಪಿಎಲ್‌ ಸೀಸನ್​ನಲ್ಲಿ 730 ರನ್​ ಸಿಡಿಸಿದ್ರು. ಬಳಿಕ ನಡೆದ 2024ರ ಐಪಿಎಲ್​ನಲ್ಲೂ 438 ರನ್‌ ಕಲೆ ಹಾಕಿದ್ದರು. ಇಷ್ಟೇ ಅಲ್ಲ ಕಳೆದ ವರ್ಷ ಬೆಂಗಳೂರು ತಂಡದ ಪರ ಅತೀ ಹೆಚ್ಚು ರನ್​ ಗಳಿಸಿದ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ:2025ರ ಐಪಿಎಲ್​​; KKR​​ ವಿರುದ್ಧ ಬಲಿಷ್ಠ RCB ತಂಡ ಕಣಕ್ಕೆ; ಯಾರಿಗೆ ಸ್ಥಾನ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment