/newsfirstlive-kannada/media/post_attachments/wp-content/uploads/2025/06/CHINNASWAMY-1-1.jpg)
ಕಾಲ್ತುಳಿತ ಕೇಸ್ನ ಕಪ್ ಚುಕ್ಕೆ ಆರ್ಸಿಬಿಗೆ ಸರ್ಕಾರಕ್ಕೆ ಎಷ್ಟು ಹಿನ್ನಡೆಯುಂಟು ಮಾಡಿದ್ಯೋ, ಇಲ್ವೋ ಗೊತ್ತಿಲ್ಲ. ಕೆಎಸ್ಸಿಎಗೆ ಮಾತ್ರ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಚಿನ್ನಸ್ವಾಮಿಯ ಮೈದಾನದಲ್ಲಿ ನಡೀಬೇಕಿದ್ದ ಮಹತ್ವದ ಪಂದ್ಯಗಳು ಬೆಂಗಳೂರಿಂದ ಹೊರಗೆ ಶಿಫ್ಟ್ ಆಗಿವೆ.
ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್ಸಿಎಗೆ ಬರೆ
ಚಿನ್ನಸ್ವಾಮಿಯ ಸ್ಟೇಡಿಯಂ ಬಳಿಕ ಕಾಲ್ತುಳಿತ ಪ್ರಕರಣದಲ್ಲಿ ಸರಿ, ತಪ್ಪುಗಳ ಚರ್ಚೆ ನಡೀತಿದೆ. ಈ ವಿಚಾರದಲ್ಲಿ ಒಂದು ವರ್ಗ ಕೆಎಸ್ಸಿಎ ಮೇಲೆ ಗೂಬೆ ಕೂರಿಸ್ತಿದ್ರೆ, ಮತ್ತೊಂದು ವರ್ಗ ರಾಜ್ಯ ಸರ್ಕಾರದ ನಡೆಯ ಬಗ್ಗೆಯೇ ಪ್ರಶ್ನಿಸ್ತಿದೆ. ಇನ್ನೊಂದು ವರ್ಗ ಆರ್ಸಿಬಿಯತ್ತ ಕೈ ತೋರಿಸ್ತಿದೆ. ಈ ಪ್ರಕರಣದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ಕೆಎಸ್ಸಿಎ ಕಾರ್ಯದರ್ಶಿ ಶಂಕರ್, ಖಂಜಾಚಿ ಜೈರಾಮ್ ರಾಜೀನಾಮೆ ಸಹ ನೀಡಿದ್ದಾಗಿದೆ. ಇದೆಲ್ಲದರ ಮಧ್ಯೆ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ಕಾಲ್ತುಳಿತ ದುರಂತಕ್ಕೂ ಮುನ್ನ ಭಾರತ ಎ ಹಾಗೂ ಸೌತ್ ಆಫ್ರಿಕಾ ಎ ನಡುವಿನ 3 ಏಕದಿನ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ವೇದಿಕೆಯಾಗಿತ್ತು. ನವೆಂಬರ್ 13ರಿಂದ ನವೆಂಬರ್ 16ರ ತನಕ ಈ ಸರಣಿ ನಡೆಯಬೇಕಿತ್ತು. ಈ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿಯಿಂದ ಗುಜರಾತ್ನ ರಾಜಕೋಟ್ಗೆ ಶಿಫ್ಟ್ ಆಗಿದೆ.
ಕಾಲ್ತುಳಿತ ಪ್ರಕರಣವೇ ಪಂದ್ಯಗಳ ಸ್ಥಳಾಂತರಕ್ಕೆ ಕಾರಣ?
ಒಂದ್ಕಡೆ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಬಿಸಿಯ ನಡುವೆಯೇ ಚಿನ್ನಸ್ವಾಮಿಯ ಪಂದ್ಯಗಳ ಸ್ಥಳಾಂತರ ನಡಿತಿದೆ. ಇದಕ್ಕೆ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗ್ತಿದೆ. ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಇದಕ್ಕೆ ಬೇರೆಯದ್ದೇ ವ್ಯಾಖ್ಯಾನ ನೀಡಿದ್ದಾರೆ.
ಇದನ್ನೂ ಓದಿ: ಆಟವಾಡುತ್ತಿದ್ದಾಗ ಕರೆಂಟ್ ಶಾಕ್; ಬೆಸ್ಕಾಂ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕಿ ದುರಂತ
ಅದಕ್ಕೂ ಇದಕ್ಕೂ ಸಂಬಂಧ ಇಲ್ಲ!
ಕಾಲ್ತುಳಿತ ಪ್ರಕರಣಕ್ಕೂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಪಂದ್ಯಗಳ ಸ್ಥಳಾಂತರಕ್ಕೂ ಸಂಬಂಧ ಇಲ್ಲ. ಈ ಪ್ರಕರಣ ನಡೆದ ಸಮಯದಲ್ಲೇ ಕಾರಣಕ್ಕೆ ಸಂಬಂಧ ಕಲ್ಪಿಸಲಾಗ್ತಿದೆ. ಅಷ್ಟೇ ಹೊರತು ಪಂದ್ಯಗಳ ಸ್ಥಳಾಂತರಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ-ರಘುರಾಮ್ ಭಟ್, KSCA ಅಧ್ಯಕ್ಷ
ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಕರಿಛಾಯೆ..?
ಭಾರತ ಎ, ಸೌತ್ ಆಫ್ರಿಕಾ ಎ ನಡುವಿನ ಪಂದ್ಯಗಳು ಮಾತ್ರವಲ್ಲ. ಇದೇ ವರ್ಷ ಭಾರತ ಹಾಗೂ ಶ್ರೀಲಂಕಾ ಸಹಯೋಗದಲ್ಲಿ ಮಹಿಳಾ ಟಿ-20 ವಿಶ್ವಕಪ್ ನಡೆಯಲಿದೆ. 12 ವರ್ಷಗಳ ಬಳಿಕ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಚಿನ್ನಸ್ವಾಮಿಯೇ ವೇದಿಕೆಯಾಗಿದೆ. ಉದ್ಘಟನಾ ಪಂದ್ಯಕ್ಕೆ ಮಾತ್ರವಲ್ಲ. ಅಕ್ಟೋಬರ್ 30ರಂದು ನಡೆಯಲಿರುವ ಸೆಮಿಫೈನಲ್-2 ಹಾಗೂ ಫೈನಲ್ ಪಂದ್ಯವೂ ಚಿನ್ನಸ್ವಾಮಿಯಲ್ಲೇ ಆಯೋಜಿಸಲಾಗಿದೆ. ಆದ್ರೀಗ ಕಾಲ್ತುಳಿತದ ಪ್ರಕರಣದಿಂದ ಈ ಪಂದ್ಯಗಳು ಸಹ ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ವಲಯದಲ್ಲಿ ಚರ್ಚೆಗಳು ನಡೆದಿವೆ.
ಶಾಂತಾ ರಂಗಸ್ವಾಮಿ ಬೇಸರ
50 ವರ್ಷಗಳಿಂದ ಅಭಿಮಾನಿಗಳಿಗೆ ಸಂತಸ ನೀಡಿದ ಕ್ರೀಡಾಂಗಣದಲ್ಲಿ ದುರಂತ ನಡೆದಿದ್ದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಿಳಾ ವಿಶ್ವಕಪ್ ಪಂದ್ಯಗಳನ್ನ ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಿದರೆ, ಅದು ರಾಜ್ಯ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗುತ್ತದೆ-ಶಾಂತ ರಂಗಸ್ವಾಮಿ, ಮಾಜಿ ಕ್ರಿಕೆಟರ್
18 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಖುಷಿ, 18 ಗಂಟೆಯೂ ಉಳಿಯಲಿಲ್ಲ. ಸಂಭ್ರಮವನ್ನ ಸೂತಕ ಆವರಿಸಿತು. ಕರ್ನಾಟಕ ಕ್ರಿಕೆಟ್ಗೂ ಈ ಒಂದು ಘಟನೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ದಿನದಿಂದ ದಿನಕ್ಕೆ ಈ ಪ್ರಕರಣದ ಸುತ್ತು ಒಂದಲ್ಲ ಒಂದು ಬೆಳವಣಿಗೆಗಳು ನಡೀತಾನೇ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಮ್ಯಾಚ್ ಶಿಫ್ಟ್ ಆಗೋ ಹಂತಕ್ಕೂ ತಲುಪಿದ್ದಾಗಿದೆ. ಇದರ ನಡುವೆ ಸ್ಟೇಡಿಯಂನೇ ಶಿಫ್ಟ್ ಮಾಡ್ತೀವಿ ಅಂತಾ ಸರ್ಕಾರ ಹೇಳ್ತಿದೆ. ಇದೆಲ್ಲಾ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್ನ್ಯೂಸ್.. ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಕೊಟ್ಟ ಸ್ಪಷ್ಟನೆ ಏನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ