/newsfirstlive-kannada/media/post_attachments/wp-content/uploads/2025/01/Sophie-Devine.jpg)
2025ರ ಐಪಿಎಲ್​​ನಲ್ಲಿ ಆರ್​ಸಿಬಿ ಸ್ಟಾರ್​ ಆಟಗಾರ್ತಿ ಕೈಕೊಟ್ಟಿದ್ದಾರೆ. ನ್ಯೂಜಿಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸೋಫಿ ಡಿವೈನ್ ಈ ಸೀಸನ್‌ಗೆ ಲಭ್ಯವಿರಲ್ಲ ಎಂದು ಘೋಷಿಸಿದ್ದಾರೆ. ಅನಾರೋಗ್ಯದ ಕಾರಣ ಅವರು ಐಪಿಎಲ್ ಆಡುವುದಿಲ್ಲ ಎಂದು ಹೇಳಿದ್ದಾರೆ.
ಡಿವೈನ್ ನಿರ್ಧಾರದ ಹಿಂದಿನ ಕಾರಣಗಳು..!
ಸೋಫಿ ಡಿವೈನ್ ವೃತ್ತಿಪರ ಸಲಹೆಯ ಆಧಾರದ ಮೇಲೆ ಆಟದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಡಿವೈನ್ ನಿರ್ಧರಿಸಿದ್ದಾರೆ. 2024ರ WPLನಲ್ಲಿ RCB ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತ್ತು. ಆರ್​​ಸಿಬಿ ಗೆಲ್ಲುವಲ್ಲಿ ಡಿವೈನ್ ಪ್ರಮುಖ ಪಾತ್ರ ವಹಿಸಿದ್ದರು. 10 ಪಂದ್ಯಗಳಲ್ಲಿ 136 ರನ್ ಗಳಿಸಿದ್ದರು. ಜೊತೆಗೆ 6 ವಿಕೆಟ್ ಪಡೆದರು.
ಇದನ್ನೂ ಓದಿ: CM ಎಚ್ಚರಿಕೆಗೂ ಮೈಕ್ರೋಫೈನಾನ್ಸ್ ಡೋಂಟ್ ಕೇರ್.. ಸಿದ್ದು ತವರಿನಲ್ಲಿ ಜೀವ ತೆಗೆದುಕೊಂಡ ಓರ್ವ ಮಹಿಳೆ
/newsfirstlive-kannada/media/post_attachments/wp-content/uploads/2025/01/Sophie-Devine-1.jpg)
ಚಾರ್ಲಿ ಡೀನ್ ತಂಡಕ್ಕೆ ಎಂಟ್ರಿ..
ಡಿವೈನ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ಅವರ ಬದಲಿಗೆ RCB ಆಲ್ ರೌಂಡರ್ ಚಾರ್ಲಿ ಡೀನ್​​ರನ್ನು ಕರೆತಂದಿದೆ. ಡೀನ್ ಇಲ್ಲಿಯವರೆಗೆ WPLನಲ್ಲಿ ಆಡಿಲ್ಲವಾದರೂ ಇಂಗ್ಲೆಂಡ್ ಪರ 36 T20I ಗಳಲ್ಲಿ 46 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಆರ್​​ಸಿಬಿ ಫೆಬ್ರವರಿ 15 ರಂದು ಗುಜರಾತ್ ಜೈಂಟ್ಸ್ ವಿರುದ್ಧ 2025ರ ಮಹಿಳಾ ಪ್ರೀಮಿಯರ್ ಲೀಗ್ ಆಡಲಿದೆ. ವಡೋದರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬಿಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸೋಫಿ ಡಿವೈನ್, ಅಕ್ಟೋಬರ್ 2024 ರಲ್ಲಿ ಮಹಿಳೆಯರ T20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೆ ಜಯ ತಂದುಕೊಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us