Advertisment

ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ; ತೀರ್ಪು ವೇಳೆ ಹೈಕೋರ್ಟ್​ ಹೇಳಿದ್ದೇನು..?

author-image
Ganesh
Updated On
ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ; ತೀರ್ಪು ವೇಳೆ ಹೈಕೋರ್ಟ್​ ಹೇಳಿದ್ದೇನು..?
Advertisment
  • ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್‌
  • ಗವರ್ನರ್ ಆದೇಶ ಎತ್ತಿ ಹಿಡಿದ ಹೈಕೋರ್ಟ್‌
  • ಅಧೀನ ನ್ಯಾಯಾಲಯದ ನೀಡಿದ ಸ್ಟೇ ತೆರವು

ಬೆಂಗಳೂರು: ಮುಡಾ ಕೇಸ್​ನಲ್ಲಿ ಸಂಕಷ್ಟ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್​ನಲ್ಲಿ ಬಿಗ್ ಶಾಕ್ ಆಗಿದೆ. ರಾಜ್ಯಪಾಲರು ಪ್ರಾಸಿಕ್ಯೂಶನ್​​ಗೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಸಿಎಂಗೆ ಭಾರೀ ಹಿನ್ನಡೆ ಆಗಿದೆ.

Advertisment

ತೀರ್ಪಿನಲ್ಲಿ ಕೋರ್ಟ್ ಹೇಳಿದ್ದೇನು..?
ದೂರುದಾರರು ದೂರು ಸಲ್ಲಿಸಿದ ಬಳಿಕ ಅನುಮತಿ ಕೇಳಿದ್ದಾರೆ. ಅದರಂತೆ ರಾಜ್ಯಪಾಲರು ಇಲ್ಲಿ ವಿವೇಚನೆ ಬಳಸಿದ್ದಾರೆ. ರಾಜ್ಯಪಾಲರ ಆದೇಶದಲ್ಲಿ ಯಾವುದೇ ಲೋಪವಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನರಿದ್ದ ಏಕ ಸದಸ್ಯಪೀಠ ಅರ್ಜಿಯನ್ನು ವಜಾ ಮಾಡಿದೆ. ಆಗ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಈಗ ನೀಡಿರುವ ಸ್ಟೇ ಎರಡು ವಾರ ಮುಂದುವರೆಸಲು ಮನವಿ ಮಾಡಿಕೊಂಡರು. ಆದರೆ ಸಿದ್ದರಾಮಯ್ಯರ ಮನವಿಯನ್ನು ನ್ಯಾಯಮೂರ್ತಿ ತಿರಸ್ಕರಿಸಿದರು. ಇದೇ ವೇಳೆ ಅಧೀನ ನ್ಯಾಯಾಲಯ ನೀಡಿದ ಸ್ಟೇ ತೆರವು ಮಾಡಿತು.

publive-image

ಮೈಸೂರಿನ ಮುಡಾ ಸೈಟ್​ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಶನ್​ಗೆ ಅನುಮತಿ ನೀಡಿದ್ದರು. ಆರ್​​ಟಿಐ ಕಾರ್ಯಕರ್ತ ಹಾಗೂ ವಕೀಲ ಟಿಜೆ ಅಬ್ರಾಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ಸ್ವೀಕರಿಸಿದ್ದ ರಾಜ್ಯಪಾಲರು ಪ್ರಾಸಿಕ್ಯೂಶನ್​ಗೆ ಅನುಮತಿಸಿದ್ದರು. ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್​​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ, ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್​ ತೀರ್ಪ ಅನ್ನು ಇವತ್ತಿಗೆ ಕಾಯ್ದಿರಿಸಿತ್ತು. ಅದರಂತೆ ಹೈಕೋರ್ಟ್​​ ಸಿಎಂ ಸಿದ್ದರಾಮಯ್ಯರ ಅರ್ಜಿಯನ್ನು ವಜಾ ಮಾಡಿದೆ.

ನ್ಯಾಯಾಲಯದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ಪ್ರೊ.ರವಿಕುಮಾರ್ ವರ್ಮಾ ಅವರು ವಾದ ಮಂಡನೆ ಮಾಡಿದರು. ಇನ್ನು ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ್ದ ನ್ಯಾ.ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಪ್ರಕರಣ ತನಿಖೆ ಆಗಬೇಕು ಎಂದು ಹೇಳಿದೆ.

Advertisment

ಇದನ್ನೂ ಓದಿ:Breaking News: ಸಿಎಂ ಸಿದ್ದರಾಮಯ್ಯಗೆ ಇಲ್ಲ ರಿಲೀಫ್ -ಹೈಕೋರ್ಟ್​ನಿಂದ ಮಹತ್ವದ ತೀರ್ಪು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment