/newsfirstlive-kannada/media/post_attachments/wp-content/uploads/2025/05/PRAMODA-DEVI.jpg)
ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆ ಆಗಿದೆ. ಮೈಸೂರು ರಾಜಮನೆತನಕ್ಕೆ ಈ ಕೂಡಲೇ 3 ಸಾವಿರ ಕೋಟಿಯ ಟಿಡಿಆರ್ (Transferable Development Rights) ನೀಡುವಂತೆ ಸೂಚಿಸಿದೆ.
ಮಹತ್ವದ ವಿಚಾರಣೆಯಲ್ಲಿ ಇವತ್ತು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಬೆಂಗಳೂರು ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ 3400 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (TDR) ಅನ್ನು ಮೈಸೂರಿನ ರಾಜವಂಶಸ್ಥರಿಗೆ ನೀಡಬೇಕು ಎಂದು ಆದೇಶ ನೀಡಿದೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ವಿಟ್ಟು ಐಶ್ವರ್ಯ ರೈ ಹೊಸ ಲುಕ್.. ಇದರ ಅರ್ಥ ಏನು?
ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಅರಮನೆ ಮೈದಾನದ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಇದೇ ವಿಚಾರಕ್ಕೆ ಹಿಂದೆ ವಿಚಾರಣೆ ನಡೆಸಿದ್ದ ಕೋರ್ಟ್, ಒಂದು ವಾರದ ಒಳಗಾಗಿ ಟಿಡಿಆರ್ ಠೇವಣಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್ನ ಆದೇಶದಂತೆ ಸರ್ಕಾರ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ನಲ್ಲಿ 3400 ಕೋಟಿ ಹಣವನ್ನು ಇಟ್ಟಿತ್ತು. ಇದಕ್ಕೆ ರಾಜಮನೆತನದ ಪರ ವಕೀಲರು ವಿರೋಧಿಸಿದ್ದರು.
ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ, ಟಿಡಿಆರ್ ಅನ್ನು ಮೈಸೂರು ರಾಜಮನೆತನಕ್ಕೆ ನಿಡಬಾರದು ಅಂತಾ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಟಿಡಿಆರ್ ಮೈಸೂರು ರಾಜಮನೆತನಕ್ಕೆ ನೀಡುವಂತೆ ಮಹತ್ವದ ಆದೇಶ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ಅಲ್ಲವೇ ಅಲ್ಲ.. RCBಗೆ ಅಸಲಿ ವಿಲನ್ ಯಾರು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ