/newsfirstlive-kannada/media/post_attachments/wp-content/uploads/2025/04/prem6.jpg)
ಸ್ಯಾಂಡಲ್ವುಡ್ ನಟ ನೆನಪಿರಲಿ ಪ್ರೇಮ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಹುಟ್ಟು ಹಬ್ಬದ ಖುಷಿಯಲ್ಲಿದ್ದ ನಟ ನೆನಪಿರಲಿ ಪ್ರೇಮ್ ವಿರುದ್ಧ ನಿರ್ಮಾಪಕಿ, ನಿರ್ದೇಶಕಿ ಮತ್ತು ನಟಿ ಶೃತಿ ನಾಯ್ಡು ಗರಂ ಆಗಿದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..
ನಟ ಪ್ರೇಮ್ ಅವರು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗನ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ, ಯುವ ಪ್ರತಿಭೆ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆ್ಯಕ್ಷನ್ ಕಟ್ ಹೇಳುತ್ತಿರೋ ‘ಸ್ಪಾರ್ಕ್’ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಇಂದು ಪ್ರೇಮ್ ಬರ್ತ್‌ಡೇ ಹಿನ್ನೆಲೆಯಲ್ಲಿ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
ಆದ್ರೆ ಇದೀಗ ಹುಟ್ಟು ಹಬ್ಬದ ದಿನವೇ ನಟ ಪ್ರೇಮ್ ವಿರುದ್ಧ ಆರೋಪ ಕೇಳಿ ಬಂದಿದೆ. ಅಲ್ಲದೇ ನಟ ಪ್ರೇಮ್‌ಗೆ ಕಾನೂನು ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಅನುಮತಿ ಇಲ್ಲದೇ ರಮೇಶ್ ಇಂದಿರಾ ಫೋಟೋವನ್ನು ಚಿತ್ರತಂಡ ಬಳಸಿದೆ. ಅಲ್ಲದೇ ಪೋಸ್ಟರ್‌ನಲ್ಲಿ ರಮೇಶ್ ಇಂದಿರಾ ಭೀಮ ಚಿತ್ರಕ್ಕೆ ತೆಗೆಸಿದ್ದ ಫೋಟೊ ಹಿಡಿದು ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಸ್ಪಾರ್ಕ್ ಸಿನಿಮಾ ತಂಡದ ವಿರುದ್ಧ ಶೃತಿ ನಾಯ್ಡು ಬೇಸರ ಹೊರ ಹಾಕಿದ್ದಾರೆ.
View this post on Instagram
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಈ ಚಿತ್ರ ತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪತ್ರಿಕೆಯ ಕಟ್ಟಿಂಗ್‌ನಲ್ಲಿರುವ ಈ ಚಿತ್ರವನ್ನು ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು. ಅದರಲ್ಲಿರೋ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ