/newsfirstlive-kannada/media/post_attachments/wp-content/uploads/2024/10/IPL-2024.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಇದೆ. ಕಳೆದ ಸೀಸನ್ ಐಪಿಎಲ್ ಆಟವನ್ನು ಜನ ಮೊಬೈಲ್ನಲ್ಲೇ ನೋಡುತ್ತಾ ಕಾಲ ಕಳೆದರು. ಅದು ಸಂಪೂರ್ಣ ಫ್ರೀ ಆಗಿತ್ತು. ಆದರೀಗ, ಅಭಿಮಾನಿಗಳ ಜೇಬಿಗೆ ಈಗ ಕತ್ತರಿ ಬಿದ್ದಿದೆ.
ಫ್ಯಾನ್ಸ್ಗೆ ಬಿಗ್ ಶಾಕ್
ಜಿಯೋ ಮತ್ತು ಹಾಟ್ ಸ್ಟಾರ್ ಈಗ ಒಂದೇ. ಈ ಎರಡೂ ಫ್ಲಾಟ್ ಫಾರ್ಮ್‌ಗಳು ವಿಲೀನ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದು ಈಗ ಜಿಯೋ ಹಾಟ್‌ಸ್ಟಾರ್ ಆಗಿ ಮಾರ್ಪಟ್ಟಿವೆ. ಇಂದಿನಿಂದಲೇ ಈ ಸೇವೆ ಆರಂಭವಾಗಿದ್ದು, 50 ಕೋಟಿಗೂ ಹೆಚ್ಚು ಬಳಕೆದಾರರು ಇದ್ದಾರೆ. ಹಾಗಾಗಿ ಇನ್ಮುಂದೆ ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ. ಇದು ಈಗ ಫ್ಯಾನ್ಸ್ಗೆ ಶಾಕಿಂಗ್ ವಿಚಾರ.
ಕೈಗೆಟಕುವ ದರಗಳಲ್ಲಿ ಪ್ಲಾನ್
ಈ ಹಿಂದೆ ಜಿಯೋ ಸಿನೇಮಾದಲ್ಲಿ ಉಚಿತವಾಗಿ ಐಪಿಎಲ್ ಬರುತ್ತಿತ್ತು. ಇನ್ಮುಂದೆ ಈ ಮೆಗಾ ಲೀಗ್ ನೋಡಲು ದುಡ್ಡು ನೀಡಬೇಕು. ಬಳಕೆದಾರ ಅನುಕೂಲತಗೆ ತಕ್ಕಂತೆ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಈ ಯೋಜನೆ 149 ರೂಪಾಯಿಯಿಂದ ಶುರುವಾಗುತ್ತದೆ ಎಂದು ತಿಳಿದು ಬಂದಿದೆ.
ಜಾಹಿರಾತಿನ ಕಿರಿಕಿರಿ ಇಲ್ಲದೆ ಐಪಿಎಲ್ ನೋಡಲು 499 ರೂ. ಪ್ಲಾನ್ ರೀಚಾರ್ಜ್ ಮಾಡಿಸಬೇಕು. ಇದು ಅಭಿಮಾನಿಗಳಿಗೆ ಆಘಾತ ತಂದಿದೆ. ರಿಲಯನ್ಸ್ ಹಾಗೂ ಡಿಸ್ನಿ ದೇಶದಲ್ಲಿ 100ಕ್ಕೂ ಹೆಚ್ಚು ಡಿಜಿಟಲ್ ಫ್ಲಾಟ್ ಫಾರ್ಮ್‌ಗಳನ್ನು ನಿರ್ವಹಿಸುತ್ತವೆ. ಜಿಯೋ ಹಾಟಸ್ಟಾರ್ ವೇದಿಕೆಯಲ್ಲಿ ಐಪಿಎಲ್ ನೋಡಬಹುದು.
ಇದನ್ನೂ ಓದಿ:ಕಠಿಣದಲ್ಲಿ ಅತೀ ಕಠಿಣ.. ಆರ್ಸಿಬಿ ನಾಯಕ ರಜತ್ಗೆ ಎದುರಾಗಿದೆ 5 ಬಿಗ್ ಚಾಲೆಂಜ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್