ಡ್ರೋನ್ ಪ್ರತಾಪ್‌ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ.. ಜೈಲು ಸೇರಿದ್ರೂ ರಿಲೀಫ್​ ಸಿಗೋ ಚಾನ್ಸೇ ಇಲ್ಲ!

author-image
admin
Updated On
ಡ್ರೋನ್ ಪ್ರತಾಪ್‌ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ.. ಜೈಲು ಸೇರಿದ್ರೂ ರಿಲೀಫ್​ ಸಿಗೋ ಚಾನ್ಸೇ ಇಲ್ಲ!
Advertisment
  • ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್​ಗೆ ನ್ಯಾಯಾಂಗ ಬಂಧನ
  • ಮಧುಗಿರಿ ಜೈಲು ಪಾಲಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್
  • ಕೃಷಿ ಹೊಂಡಕ್ಕೆ ತೆರಳಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್​ಗೆ ರವಾನೆ

ತುಮಕೂರು: ಸುಮ್ಮನಿರಲಾರದೆ ಇರುವೆ ಬಿಟ್ಕೊಂಡ್ರು ಅನ್ನೋ ಹಾಗಾಗಿದೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್​ ಪ್ರತಾಪ್​ ಕಥೆ. ಸೋಡಿಯಂ ಸ್ಫೋಟಿಸಿ ಅದನ್ನ ಅಪ್ಲೋಡ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೀವ್ಸ್​ ಹೆಚ್ಚಿಸಿಕೊಳ್ಳೋಕೆ ಹೋಗಿ ಈಗ ಕಂಬಿ ಎಣಿಸೋ ಹಾಗಾಗಿದೆ.

ಸೋಡಿಯಂ ಸ್ಫೋಟ ಕೇಸ್​​ನಲ್ಲಿ ಡ್ರೋನ್ ಪ್ರತಾಪ್​​ ಜೈಲುಪಾಲು
ನ್ಯಾಯಾಂಗ ಬಂಧನ ಹಿನ್ನೆಲೆ ಮಧುಗಿರಿ ಜೈಲು ಸೇರಿದ ಪ್ರತಾಪ್
ಸೋಡಿಯಂ ಸ್ಫೋಟ ಕೇಸ್​​ನಲ್ಲಿ ಡ್ರೋನ್ ಪ್ರತಾಪ್​​ ಜೈಲು ಪಾಲಾಗಿದ್ದಾರೆ. ತುಮಕೂರಿನ ಮಧುಗಿರಿ ಜೆಎಂಎಫ್​ಸಿ ಕೋರ್ಟ್​ ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್​ಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

publive-image

ಇವತ್ತು ಪ್ರತಾಪ್​​ರನ್ನ ಮಿಡಿಗೇಶಿ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದ್ದು, ಡ್ರೋನ್​ ಪ್ರತಾಪ್​ ಮಧುಗಿರಿ ಜೈಲು ಹಕ್ಕಿ ಆಗಿದ್ದಾರೆ.

ಸ್ಫೋಟದ ವರದಿ ನೀಡಲು ಸೂಚಿಸಿದ ಸಿಎಂ ಕಚೇರಿ
ವರದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ
ಜೈಲು ಪಾಲಾಗಿರೋ ಡ್ರೋನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಖುದ್ದು ಸಿಎಂ ಕಚೇರಿ ಸ್ಫೋಟದ ವರದಿ ನೀಡುವಂತೆ ವರದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ, ಅಧಿಕಾರಿಗಳು ಮಧುಗಿರಿ ಸಿಪಿಐ ಕಚೇರಿಗೆ ಆಗಮಿಸಿದ ಡ್ರೋನ್ ಪ್ರತಾಪ್ ಕೇಸ್ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಕೃಷಿ ಹೊಂಡಕ್ಕೆ ತೆರಳಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್​ಗೆ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕೇಸ್​ಗೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಮೆರಾ ಮ್ಯಾನ್ ವಿನಯ್, ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್​ ಅವರನ್ನ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್‌ಗಾಗಿ ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ: ಭಿಕ್ಷುಕರಿಗೆ ಅಯ್ಯೋ ಅಂದ್ರೆ ಬೀಳುತ್ತೆ ಕೇಸ್.. ದುಡ್ಡು ಕೊಟ್ರೆ ಬರ್ತಾರೆ ಪೊಲೀಸ್‌; ಕಾರಣ ಏನು ಗೊತ್ತಾ? 

ಡ್ರೋನ್​ ಪ್ರತಾಪ್​ ಜೈಲಲ್ಲಿ ಈಗ ಏನೋ ಮಾಡೋಲು ಹೋಗಿ ಇನ್ನೇನೋ ಆಗೋಯ್ತು ಅಂತ ಹಾಡು ಹೇಳುವಂತೆ ಆಗಿರೋದಂತೂ ಸುಳ್ಳಲ್ಲ. ಡ್ರೋನ್ ಪ್ರತಾಪ್​ಗೆ ಪ್ರಕರಣದಲ್ಲಿ ಸದ್ಯಕ್ಕಂತೂ ರಿಲೀಫ್​ ಸಿಗೋ ಚಾನ್ಸೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment