ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಎಂದಿದ್ದ ವಧು; ಮೆರವಣಿಗೆಯಲ್ಲಿ ಬಂದ ವರನಿಗೆ ಬಿಗ್‌ ಶಾಕ್!

author-image
admin
Updated On
ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಎಂದಿದ್ದ ವಧು; ಮೆರವಣಿಗೆಯಲ್ಲಿ ಬಂದ ವರನಿಗೆ ಬಿಗ್‌ ಶಾಕ್!
Advertisment
  • ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಬಾ ಅಂತ ಕರೆದಿದ್ದಳು
  • ಚೆಲುವೆಯ ಮಾತು ನಂಬಿ ಮದುವೆಗೆ ಬಂದ ವರನಿಗೆ ಫುಲ್ ಶಾಕ್!
  • 110 ಕಿ.ಮೀ ನಿಂದ ಮದುವೆ ದಿಬ್ಬಣದಲ್ಲಿ 45ಕ್ಕೂ ಹೆಚ್ಚು ಜನ ಬಂದಿದ್ದರು

ಇದು ಆನ್‌ಲೈನ್ ಯುಗ. ಡೇಟಿಂಗ್, ಚಾಟಿಂಗ್‌ನಲ್ಲೇ ಮದುವೆ ಫಿಕ್ಸ್ ಆಗಿ ಡಿವೋರ್ಸ್‌ವರೆಗೂ ಎಲ್ಲಾ ಆನ್‌ಲೈನ್‌ನಲ್ಲಿ ನಿರ್ಧಾರವಾಗಿ ಬಿಡುತ್ತೆ. ಪಂಜಾಬ್‌ನ ಮೋಗಾ ಗ್ರಾಮದಲ್ಲಿ ಕೂಡ ಇದೇ ರೀತಿಯ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಯುವತಿಯೊಬ್ಬಳು ಲಗ್ನ ಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಬಾ ಅಂತ ಕಥೆ ಕಟ್ಟಿದ್ದಳು. ಚೆಲುವೆಯ ಮಾತು ನಂಬಿ ಮದುವೆಗೆ ಬಂದ ವರನಿಗೆ ಫುಲ್ ಶಾಕ್ ಆಗಿದೆ. ಅಮೃತಸರದಿಂದ ಮೆರವಣಿಗೆ ಮೂಲಕ ಮೋಗಾ ಗ್ರಾಮಕ್ಕೆ ಮಧುಮಗನಿಗೆ ವಧುವೂ ಇಲ್ಲ, ವಧುವಿನ ಮನೆಯೂ ಸಿಕ್ಕಿಲ್ಲ. ಕಂಗಾಲಾದ ವರನ ಕುಟುಂಬಸ್ಥರು ಕೊನೆಗೆ ಮೋಗಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

publive-image

ಮದುಮಗನಿಗೆ ಮಕ್ಮಲ್ ಟೋಪಿ!
ಅಮೃತಸರದ ಸುಲ್ತಾನ್ವಿಂಡಿಯ ಕುಲಪಿಂದರ್​ ಸಿಂಗ್, ಮೋಗಾದ ಸಹೀಲ್ಮಾನ್​ ಪ್ರೀತ್​​ ಕೌರ್ ಜೊತೆ ಮದುವೆಗೆ ತಯಾರಾಗಿದ್ದ. 110 ಕಿ.ಮೀ ನಿಂದ ಮದುವೆ ದಿಬ್ಬಣದಲ್ಲಿ 45ಕ್ಕೂ ಹೆಚ್ಚು ಜನರನ್ನು ಕರೆ ತಂದಿದ್ದ. ಯುವತಿ ಫೋಟೋ ಹಿಡಿದು ಗ್ರಾಮದಲ್ಲಿ ವಿಚಾರಿಸಿದಾಗ ಮಧುಮಗನಿಗೆ ಅಸಲಿ ವಿಚಾರ ಗೊತ್ತಾಗಿದೆ. ಮೋಗಾ ಗ್ರಾಮದಲ್ಲಿ ವಧುನೂ ಇಲ್ಲ, ವಧುವಿನ ಮನೆಯೂ ಇಲ್ಲ. ಆಕೆ ಯಾರೆಂಬುದೇ ಆ ಮೋಗಾ ಗ್ರಾಮದ ಜನರಿಗೆ ಗೊತ್ತೇ ಇಲ್ಲ.

ಇದನ್ನೂ ಓದಿ: ಮುನಿಸು ಮರೆತ ದಿಗ್ಗಜರು.. ಯಡಿಯೂರಪ್ಪ, ಈಶ್ವರಪ್ಪ ಮತ್ತೆ ಒಂದಾದ ಅಪರೂಪದ ಕ್ಷಣಗಳು ಇಲ್ಲಿದೆ! 

publive-image

‘ಫೋನ್​’ನಲ್ಲೇ ಪ್ರಪೋಸಲ್!
ವರನ ಜೊತೆಯಲ್ಲಿ ಪ್ರತಿ ದಿನ ವಧು ಫೋನ್​ನಲ್ಲಿ ಮಾತಾಡುತ್ತಿದ್ದ. ದಿನವೂ ಇಬ್ಬರು ಮದುವೆ ಕಾರ್ಯಕ್ರಮದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ಲಗ್ನಪತ್ರಿಕೆ, ಕಲ್ಯಾಣ ಮಂಟಪ ರೆಡಿ ಇದೆ ಎಂದು ವಧು ಕಥೆ ಕಟ್ಟಿದ್ದಳು.

publive-image

ಚೆಂದುಳ್ಳಿ ಹುಡುಗಿಯ ಮಾತು ನಂಬಿ ವರ ಮದುವೆಗೆ ತನ್ನ ಸಂಬಂಧಿಕರ ಜೊತೆ ಬಂದಿದ್ದಾನೆ. ಲಗ್ನಪತ್ರದಲ್ಲಿರೋ ಕಲ್ಯಾಣ ಮಂಟಪ ಇದ್ರು, ಮದುವೆಗೆ ಬುಕ್ ಆಗೇ ಇರಲಿಲ್ಲ. ವಧು ಅಮೆರಿಕಾದಲ್ಲಿದ್ದು, ಮೋಗಾ ತನ್ನ ಊರೆಂದು ಹೇಳಿದ್ದಳಂತೆ. ಆದ್ರೆ ಮೋಗಾ ಗ್ರಾಮದಲ್ಲಿ ಆಕೆಯೂ ಇಲ್ಲ, ಮನೆಯೂ ಇಲ್ಲ. ಹಣಕ್ಕಾಗಿ ಈ ರೀತಿ ವಧು ಮಾಡಿದ್ದಾಳೆ ಎಂದು ವರನ ತಂದೆ ಮೋಗಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment