ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್.. ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯ ರದ್ದಾಗುತ್ತಾ?

author-image
admin
Updated On
ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್.. ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯ ರದ್ದಾಗುತ್ತಾ?
Advertisment
  • ಅಹ್ಮದಾಬಾದ್‌ನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ
  • ಪಂಜಾಬ್‌ ಟಾಸ್ ಗೆದ್ದ ಬಳಿಕ ಅಹ್ಮದಾಬಾದ್‌ನಲ್ಲಿ ಮಳೆರಾಯನ ಆರ್ಭಟ
  • ಒಂದು ವೇಳೆ ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯಕ್ಕೆ ಅಡ್ಡಿಯಾದ್ರೆ ಮುಂದೇನು?

IPL ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದಾಗಿ ವಿಳಂಬವಾಗಿದೆ. ಟಾಸ್ ಆದ ಬಳಿಕ ಅಹ್ಮದಾಬಾದ್‌ನಲ್ಲಿ ಜೋರು ಮಳೆಯಾಗಿದ್ದು, ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ಅಬ್ಬರಕ್ಕೂ ಮುನ್ನ ವರುಣನ ಆರ್ಭಟ ಶುರುವಾಗಿದೆ.

ಅಹ್ಮದಾಬಾದ್‌ನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ 5 ಗಂಟೆಯ ಬಳಿಕ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಮಳೆಯಿಂದ ಪಂದ್ಯ ವಿಳಂಬವಾಗಿದ್ದು, ಮುಂಬೈ ಅಭಿಮಾನಿಗಳಿಗೆ ಆತಂಕ ಎದುರಾಗಿದೆ. ಒಂದು ವೇಳೆ ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯಕ್ಕೆ ಅಡ್ಡಿಯಾದ್ರೆ ಏನಾಗಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

publive-image

ಐಪಿಎಲ್‌ ಫೈನಲ್ ಪಂದ್ಯಕ್ಕೆ ಮಾತ್ರ ರಿಸರ್ವ್‌ ಡೇ ಇದೆ. IPL ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾದರು 2 ಗಂಟೆಗಳ ಹೆಚ್ಚು ಕಾಲಾವಧಿ ನೀಡಲಾಗುತ್ತದೆ. ಅಂದ್ರೆ ಓವರ್‌ಗಳಲ್ಲಿ ಬದಲಾವಣೆ ಅಥವಾ ಸೂಪರ್ ಓವರ್ ಪಂದ್ಯ ಆಗಬಹುದು. ಇಂದು ಐಪಿಎಲ್ ಪ್ಲೇ ಆಫ್ ಪಂದ್ಯ ಮಧ್ಯರಾತ್ರಿವರೆಗೂ ನಡೆಸುವ ಅವಕಾಶಗಳಿದೆ.

ಇದನ್ನೂ ಓದಿ: PBKS vs MI ಇಂದಿನ ಪಂದ್ಯ ರದ್ದಾದ್ರೆ ಏನಾಗುತ್ತೆ? ಹವಾಮಾನ ಇಲಾಖೆ ಅಲರ್ಟ್ ಏನು? 

publive-image

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಕ್ವಾಲಿಫೈಯರ್‌ 2 ಪಂದ್ಯ ರದ್ದಾದ್ರೆ ಐಪಿಎಲ್ ಟೇಬಲ್ ಟಾಪರ್ ಆಗಿರೋ ಪಂಜಾಬ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಲಿದೆ. ಜೂನ್ 3ರ ಫಿನಾಲೆಯಲ್ಲಿ RCB ವಿರುದ್ಧ ಪಂಜಾಬ್‌ ಕಿಂಗ್ಸ್ ಸೆಣಸಾಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment