ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್.. ಪ್ರಯಾಣ ದರ 46% ಹೆಚ್ಚಳ; ಎಷ್ಟಿತ್ತು? ನಾಳೆಯಿಂದ ಎಷ್ಟಾಗುತ್ತೆ?

author-image
Veena Gangani
Updated On
ನಮ್ಮ ಮೆಟ್ರೋದಲ್ಲಿ ಮಹಿಳೆಯರನ್ನು ಚುಡಾಯಿಸಿದ್ರೆ ಬರೋಬ್ಬರಿ ₹10 ಸಾವಿರ ದಂಡ; ಇದು ಓದಲೇಬೇಕಾದ ಸ್ಟೋರಿ
Advertisment
  • ನಾಳೆಯಿಂದಲೇ ಜಾರಿಯಾಗಲಿದೆ ಮೆಟ್ರೋ ಪರಿಷ್ಕೃತ ದರ
  • ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟ ಸಂಸ್ಥೆ
  • ಬಿಎಂಟಿಸಿ, ಕೆಎಸ್​ಆರ್​ಟಿಸಿ ಬೆನ್ನಲ್ಲೇ ನಮ್ಮ ಮೆಟ್ರೋ ದುಬಾರಿ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ನಮ್ಮ ಮೆಟ್ರೋ ಜಾರಿಗೆ ಬಂದಿತು. ಸಿಲಿಕಾನ್ ಸಿಟಿಯಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ವೇಗದ ಸಾರಿಗೆ ನೀಡುತ್ತಿರುವ ಒಂದೇ ಒಂದು ಸಂಸ್ಥೆ ಎಂದರೆ ಅದು ‘ನಮ್ಮ ಮೆಟ್ರೋ’ ಮಾತ್ರ. ನಗರದ ಜನಸಾಮಾನ್ಯರು ನಮ್ಮ ಮೆಟ್ರೋ ಸೇವೆಯನ್ನು ಸದುಪಯೋಗ ಮಾಡಿಕೊಳ್ತಾರೆ. ಹೀಗಾಗಿ ಸಾಕಷ್ಟು ಜನ ತಮ್ಮ ಮನೆಯಲ್ಲಿದ್ದ ಸ್ವಂತ ವಾಹನಗಳನ್ನು ಬಿಟ್ಟು, ಕೆಲವೇ ಕೆಲವು ನಿಮಿಷಯಗಳಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ತಲುಪುತ್ತಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್‌.. ನಾಳೆಯಿಂದ ದರ ಏರಿಕೆ ಫಿಕ್ಸ್‌! ಎಷ್ಟು ಹೆಚ್ಚಳ?

publive-image

ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ದರದ ಶಾಕ್ ಕೊಟ್ಟಿದೆ. ನಾಳೆಯಿಂದಲೇ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಆಗುತ್ತಿದೆ. ಈ ಬಗ್ಗೆ ನಮ್ಮ ಮೆಟ್ರೋ (BMRCL) ಅಧಿಕೃತವಾಗಿ ಮಾಹಿತಿ ನೀಡಿದೆ. ಫೆಬ್ರವರಿ 9 ಅಂದ್ರೆ ನಾಳೆ ಭಾನುವಾರದಿಂದ ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿ ಆಗುತ್ತಿದೆ. ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎನ್ನಲಾಗಿದೆ.

publive-image

ಪ್ರತಿ ಕಿಲೋ ಮೀಟರ್​ಗೆ ಪ್ರಯಾಣ ದರ ಏರಿಕೆ ಎಷ್ಟು?

0-2 ಕಿಮೀಗೆ ಹಳೆ ದರ 10 ರೂ. ಪರಿಷ್ಕೃತ ದರ 10 ರೂ.
2-4 ಕಿಮೀಗೆ ಹಳೆ ದರ 15 ರೂ. ಪರಿಷ್ಕೃತ ದರ 20 ರೂ.
4-6 ಕಿಮೀಗೆ ಹಳೆ ದರ 20 ರೂ. ಪರಿಷ್ಕೃತ ದರ 30 ರೂ.
6-8 ಕಿಮೀಗೆ ಹಳೆ ದರ 28 ರೂ. ಪರಿಷ್ಕೃತ ದರ 40 ರೂ.
8-10 ಕಿಮೀಗೆ ಹಳೆ ದರ 35 ರೂ. ಪರಿಷ್ಕೃತ ದರ 50 ರೂ.
10-15 ಕಿಮೀಗೆ ಹಳೆ ದರ 40 ರೂ. ಪರಿಷ್ಕೃತ ದರ 60 ರೂ.
15-20 ಕಿಮೀಗೆ ಹಳೆ ದರ 50 ರೂ. ಪರಿಷ್ಕೃತ ದರ 70 ರೂ.
20-25 ಕಿಮೀಗೆ ಹಳೆ ದರ 60 ರೂ. ಪರಿಷ್ಕೃತ ದರ 80 ರೂ.
25-30 ಕಿಮೀಗೆ ಹಳೆ ದರ 60 ರೂ. ಪರಿಷ್ಕೃತ ದರ 90 ರೂ.

publive-image

ರಜಾದಿನದಲ್ಲಿ ಸ್ಮಾರ್ಟ್​​ ಕಾರ್ಡ್​ಗೆ 10% ರಿಯಾಯಿತಿ

ಮೆಟ್ರೋ ಪ್ರವಾಸಿ ಕಾರ್ಡ್​​ 1 ದಿನಕ್ಕೆ 300 ರೂ.
ಮೆಟ್ರೋ ಪ್ರವಾಸಿ ಕಾರ್ಡ್​​ 3 ದಿನಗಳಿಗೆ 600 ರೂ.
ಮೆಟ್ರೋ ಪ್ರವಾಸಿ ಕಾರ್ಡ್​​ 5 ದಿನಗಳಿಗೆ 800 ರೂ.

ಮೊದಲ 2 ಕಿಲೋ ಮೀಟರ್ ಪ್ರಯಾಣಕ್ಕೆ 10 ರೂಪಾಯಿ, 2 ರಿಂದ 4 ಕಿಲೋಮೀಟರ್ ಪ್ರಯಾಣಕ್ಕೆ 20 ರೂಪಾಯಿ, 4 ರಿಂದ 6 ಕಿಲೋಮೀಟರ್ ಪ್ರಯಾಣಕ್ಕೆ 30 ರೂಪಾಯಿ ದರ ಪರಿಷ್ಕರಣೆ ಮಾಡಲಾಗಿದೆ. 30 ಕಿಲೋಮೀಟರ್​ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ 90 ರೂಪಾಯಿ ದರ ನಿಗದಿಪಡಿಸಲಾಗಿದೆ. ಇನ್ನೂ, ಮೆಟ್ರೋ ದರ ಏರಿಕೆಯಾಗುವ ಸುದ್ದಿ ಕೇಳುತ್ತಿದ್ದಂತೆ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. 46% ಏರಿಕೆ ಮಾಡೋದು ಸರಿಯಲ್ಲ. ನಾವು ಡೈಲಿ ಓಡಾಡೋರು, ಇನ್ಮೇಲೆ ₹30-₹40 ಹೆಚ್ಚು ಹಣ ಬೇಕು. ಇದರಿಂದ ಬಡ ಜನರಿಗೆ ತುಂಬಾ ಕಷ್ಟ ಆಗುತ್ತದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment