RCB ಅಭಿಮಾನಿಗಳಿಗೆ ಬಿಗ್ ಶಾಕ್.. ಪ್ಲೇ ಆಫ್ ಹಂತದಲ್ಲಿ ಸ್ಟಾರ್ ಬ್ಯಾಟರ್ ಔಟ್‌; ಕಾರಣವೇನು?

author-image
admin
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್.. ಪ್ಲೇ ಆಫ್ ಹಂತದಲ್ಲಿ ಸ್ಟಾರ್ ಬ್ಯಾಟರ್ ಔಟ್‌; ಕಾರಣವೇನು?
Advertisment
  • ಐಪಿಎಲ್ ಸೀಸನ್​ 18ರಲ್ಲಿ RCB ಪಡೆ ಅದ್ಭುತ​ ಪ್ರದರ್ಶನ
  • ಇನ್ನೊಂದು ಪಂದ್ಯ ಗೆದ್ರೆ ಸಾಕು RCBಗೆ ಪ್ಲೇ ಆಫ್​ ಸ್ಪಾಟ್​ ಫಿಕ್ಸ್​!
  • ಗಾಯಗೊಂಡಿರುವ ಫಿಲ್ ಸಾಲ್ಟ್ ಜೊತೆಗೆ ಮತ್ತೊಂದು ಆಘಾತ

RCB ಐಪಿಎಲ್ ಸೀಸನ್​ 18ರಲ್ಲಿ ಅದ್ಭುತ​ ಪ್ರದರ್ಶನ ನೀಡುತ್ತಾ ಇದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​ ಹಂತಕ್ಕೆ ದಾಪುಗಾಲಿಡೋ ತವಕದಲ್ಲಿದೆ.

ಇಷ್ಟು ವರ್ಷ.. ಈ ಹಂತದಲ್ಲಿ ಆರ್​​ಸಿಬಿ ಫ್ಯಾನ್ಸ್​ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಾಚಾರ ಹಾಕ್ತಿದ್ರು. ಆದ್ರೆ, ಈ ಬಾರಿ ಎಲ್ಲಾ ಬದಲಾಗಿದೆ. ರಗಡ್‌​ ಪರ್ಫಾಮೆನ್ಸ್ ​ನೀಡಿ ಎದುರಾಳಿಗಳನ್ನ ರುಬ್ಬಿ ಬಿಸಾಕ್ತಿರೋ ಆರ್​ಸಿಬಿ ಇನ್ನೊಂದು ಪಂದ್ಯ ಗೆದ್ರೆ ಸಾಕು ಪ್ಲೇ ಆಫ್​ ಸ್ಪಾಟ್​ ಫಿಕ್ಸ್​ ಆಗಲಿದೆ. ಈ ಖುಷಿಯ ವಿಚಾರದ ನಡುವೆಯೇ RCB ಫ್ಯಾನ್ಸ್‌ಗೆ ಆಘಾತ ಎದುರಾಗಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!

publive-image

RCB ಪರ ಸಾಲಿಡ್​ ಫಾರ್ಮ್​ನಲ್ಲಿದ್ದ ಕನ್ನಡಿಗ ದೇವದತ್​​ ಪಡಿಕ್ಕಲ್​ ಐಪಿಎಲ್​ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈಗಾಗಲೇ ಗಾಯಗೊಂಡಿರುವ ಫಿಲ್ ಸಾಲ್ಟ್ ಅವರು ಕಂಪ್ಲೀಟ್ ಫಿಟ್ ಆಗಿಲ್ಲ. ಈ ಮಧ್ಯೆ ಗಾಯಗೊಂಡಿರುವ ಸ್ಟಾರ್ ಬ್ಯಾಟರ್ ದೇವದತ್​​ ಪಡಿಕ್ಕಲ್​ ಕೂಡ ಈ ಸೀಸನ್‌ನಿಂದ ಔಟ್ ಆಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಫ್ಯಾನ್ಸ್‌ಗೆ ಬಿಗ್ ಶಾಕ್.. ದಿಢೀರ್‌ ನಿವೃತ್ತಿ ಘೋಷಿಸಿದ ಬಳಿಕ ಏನಂದ್ರು? 

ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದು ಇಂಪ್ಯಾಕ್ಟ್​ ಫುಲ್​ ಪರ್ಫಾಮೆನ್ಸ್​ ನೀಡ್ತಾ ಇದ್ದ ಪಡಿಕ್ಕಲ್​​ ಆರ್​​ಸಿಬಿಯ ಬ್ಯಾಟಿಂಗ್​ ವಿಭಾಗದ ಬಲ ಹೆಚ್ಚಿಸಿದ್ರು. 10 ಪಂದ್ಯ 247 ರನ್​ಗಳಿಸಿದ್ದ ಪಡಿಕ್ಕಲ್​​ ಇದೀಗ ಟೂರ್ನಿಯಿಂದ ಹೊರಬಿದ್ದಾರೆ. ಪಡಿಕ್ಕಲ್​ ಹೊರಬಿದ್ದಿರೋದು ಆರ್​​ಸಿಬಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

publive-image

ಗಾಯಾಳು ದೇವದತ್‌ ಪಡಿಕ್ಕಲ್​ ಬದಲಾಗಿ RCB ಕನ್ನಡಿಗ ಮಯಾಂಕ್​ ಅಗರ್​ವಾಲ್​ ಅವರನ್ನ ತಂಡಕ್ಕೆ ಕರೆ ತಂದಿದೆ. ಮಯಾಂಕ್​ ಅಗರ್​ವಾಲ್​ ಅವರಿಗೆ ಮತ್ತೊಮ್ಮೆ RCB ಚಾನ್ಸ್‌ ಕೊಟ್ಟಿರೋದು ಖುಷಿಯ ವಿಚಾರವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment