RCB ಅಭಿಮಾನಿಗಳಿಗೆ ಬಿಗ್ ಶಾಕ್; IPL ಸೀಸನ್ 18 ಅಮಾನತು

author-image
admin
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್; IPL ಸೀಸನ್ 18 ಅಮಾನತು
Advertisment
  • ಈ ಸಲ ಕಪ್ ನಮ್ದೇ ಎಂದು ಕಾಯುತ್ತಿದ್ದ RCB ಫ್ಯಾನ್ಸ್‌ಗೆ ನಿರಾಸೆ!
  • ರಗಡ್‌​ ಪರ್ಫಾಮೆನ್ಸ್ ​ನೀಡಿ ಪ್ಲೇ ಆಫ್​ ಹಂತಕ್ಕೆ ಹೋಗಿದ್ದ RCB
  • ತಕ್ಷಣದಿಂದಲೇ ಜಾರಿಗೆ ಬರುವಂತೆ IPL ಪಂದ್ಯಗಳು ಅಮಾನತು

ಈ ಸಲ ಕಪ್ ನಮ್ದೇ.. ಈ ಸಲ ಕಪ್ ನಮ್ದೇ ಎಂದು ಕಾಯುತ್ತಿದ್ದ RCB ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಸತತ 17 ಸೀಸನ್‌ಗಳಿಂದ ಕಾಯುತ್ತಿದ್ದ ಬೆಂಗಳೂರು ರಾಯಲ್‌ ಚಾಲೆಂಜರ್ಸ್ ಅಭಿಮಾನಿಗಳಿಗೆ ಸೀಸನ್ 18 ಹೊಸ ಭರವಸೆ ನೀಡಿತ್ತು.

ಫ್ಯಾನ್ಸ್‌ ಆಸೆಗೆ ತಕ್ಕಂತೆ RCB ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​ ಹಂತಕ್ಕೆ ದಾಪುಗಾಲಿಡೋ ತವಕದಲ್ಲಿತ್ತು.

ಇಷ್ಟು ವರ್ಷ.. ಈ ಹಂತದಲ್ಲಿ ಆರ್​​ಸಿಬಿ ಫ್ಯಾನ್ಸ್​ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಾಚಾರ ಹಾಕ್ತಿದ್ರು. ಆದ್ರೆ, ಈ ಬಾರಿ ಆಟ ಸಂಪೂರ್ಣ ಬದಲಾಗಿದೆ. ರಗಡ್‌​ ಪರ್ಫಾಮೆನ್ಸ್ ​ನೀಡಿ ಎದುರಾಳಿಗಳನ್ನ ರುಬ್ಬಿ ಬಿಸಾಕಿದ ಆರ್​ಸಿಬಿ ಇನ್ನೊಂದು ಪಂದ್ಯ ಗೆದ್ರೆ ಸಾಕು ಪ್ಲೇ ಆಫ್​ ಸ್ಪಾಟ್​ ಫಿಕ್ಸ್​ ಆಗುತ್ತಿತ್ತು. ಈ ಖುಷಿಯ ವಿಚಾರದ ನಡುವೆಯೇ RCB ಫ್ಯಾನ್ಸ್‌ಗೆ ಆಘಾತ ಎದುರಾಗಿದೆ.

publive-image

ಭಾರತ, ಪಾಕ್ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಬಿಸಿಸಿಐ IPL 2025 ಟೂರ್ನಿಯನ್ನೇ ಅಮಾನತುಗೊಳಿಸಲು ಮುಂದಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ IPL ಪಂದ್ಯಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: BREAKING: ಭಾರತ-ಪಾಕ್ ಸಂಘರ್ಷ.. ಈ ಬಾರಿಯ IPL ಟೂರ್ನಿ ಮುಂದೂಡಿಕೆ 

ದೇಶ ಮೊದಲು ಕ್ರಿಕೆಟ್ ಆಮೇಲೆ ಅನ್ನೋ ನಿಲುವಿನ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಆದೇಶ ನೀಡುವವರೆಗೆ ಯಾವುದೇ IPL ಪಂದ್ಯಗಳು ನಡೆಯುವುದಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

publive-image

ಇಂದು ಲಕ್ನೋದಲ್ಲಿ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ನಿಗಧಿಯಾಗಿತ್ತು. ಆದರೆ ಭಾರತ-ಪಾಕ್ ಸಂಘರ್ಷದ ಮಧ್ಯೆ IPL ಟೂರ್ನಿಯನ್ನು ಬಿಸಿಸಿಐ ಅಮಾನತುಗೊಳಿಸಿದೆ. ಉಳಿದ ಐಪಿಎಲ್‌ ಪಂದ್ಯಗಳ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ದೇಶದ ಭದ್ರತೆ ಹಾಗೂ ಸೇನೆಗೆ ಗೌರವ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಐಪಿಎಲ್ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಕಾದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment