​IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್​​ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!

author-image
Veena Gangani
Updated On
​IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್​​ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!
Advertisment
  • ಉದ್ಯೋಗಿಗಳ ಕಡಿತ ಪ್ರಮಾಣ ಹೇಗಿದೆ ಗೊತ್ತಾ?
  • ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು ಏನೇನು?
  • ಬ್ಯಾಂಕುಗಳಲ್ಲಿ ನೇಮಕಾತಿ ಸಂಖ್ಯೆಗಳ ಇಳಿಕೆ ಹೇಗಿದೆ?

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುವ ಬಯಕೆ ಬಹುತೇಕರದ್ದು. ಸಾಮಾನ್ಯವಾಗಿ ಡಿಗ್ರಿ ಮುಗಿಸಿದ ಕೂಡಲೇ ಬ್ಯಾಂಕ್​ನಲ್ಲಿ ಕೆಲಸ ಸಿಗುತ್ತಾದ್ರೂ ಸ್ಟ್ಯಾಂಡ್​ ಬೈಗೆ ಪ್ರತ್ಯೇಕ ಕೋರ್ಸ್ ಮಾಡಿದರೆ ಉದ್ಯೋಗ ಇನ್ನಷ್ಟು ಖಾತರಿ ಆಗುತ್ತೆ. ಬ್ಯಾಂಕ್​ ಕೆಲಸ ಎಂದರೆ ಮೊದಲ ನೆನಪಾಗೋದು ಕೈತುಂಬಾ ವೇತನ, ಸಾಕಷ್ಟು ರಜೆ, ಜೊತೆಗೆ ಉದ್ಯೋಗ ಭದ್ರತೆ.

publive-image

ಇದರಿಂದಾಗಿಯೇ ಸಾಕಷ್ಟು ಜನ ತಮ್ಮ ಶಿಕ್ಷಣ ಮುಗಿದ ಬಳಿಕ ಬ್ಯಾಂಕಿಂಗ್‌ ಎಕ್ಸಾಮ್‌ ಬರೆಯಲು ಮುಂದಾಗುತ್ತಾರೆ. ಆದರೆ ಕೇವಲ ಕಾಮರ್ಸ್‌ನಲ್ಲಿ ಡಿಗ್ರಿ ಮಾಡಿದ ಮಾತ್ರಕ್ಕೆ ಬ್ಯಾಂಕ್‌ ಉದ್ಯೋಗ ಖಾತರಿಯೇ ಎಂಬ ಪ್ರಶ್ನೆ ಕೂಡ ಇದೆ. ಅಷ್ಟೇ ಅಲ್ಲ, ಉದ್ಯೋಗ ಖಾತರಿ ಮಾಡುವ ನಿಟ್ಟಿನಲ್ಲಿ ಈಗ ಹಲವಾರು ಪ್ರತ್ಯೇಕ ಸರ್ಟಿಫಿಕೇಟ್‌ ಕೋರ್ಸ್‌ಗಳು ಲಭ್ಯವಿವೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ

ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದಿದೆ. ಮುಂದೇನು ಎಂಬ ಗೊಂದಲದ ನಡುವೆ ಯುವ ಜನರ ನಡುವೆ ಭವಿಷ್ಯದ ಬಗ್ಗೆ ಪ್ರಶ್ನೆಗಳು ತಲೆಯೆತ್ತುವುದು ಸಹಜ. ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸು ನಿಮ್ಮದಾಗಿದ್ದರೆ ಪೋಸ್ಟ್‌ ಗ್ರಾಜ್ಯುಯೇಟ್‌ ಸರ್ಟಿಫಿಕೇಟ್‌ ಇನ್‌ ಬ್ಯಾಂಕಿಂಗ್‌ ಕೋರ್ಸ್‌ ಕೂಡ ಮಾಡಬಹುದು. ಬ್ಯಾಂಕಿಂಗ್‌ ಸೆಕ್ಟರ್‌ನಲ್ಲಿ ಇಂದು ಸಾಕಷ್ಟು ಉದ್ಯೋಗ ಅವಕಾಶಗಳಿವೆ ಎಂದು ಸಾಕಷ್ಟು ಜನ ಹೇಳೋದನ್ನು ನೋಡಿದ್ದೇವೆ​​. ಹಾಗಾಗಿ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ಮತ್ತಿತರ ಕಡೆ ಕೆಲಸ ಸಿಗುತ್ತದೆ. ಕಾಮರ್ಸ್‌ ನಿಮ್ಮ ಮೆಚ್ಚಿನ ಕ್ಷೇತ್ರವಾಗಿದ್ದರೆ ಜಾಬ್​ ಗ್ಯಾರಂಟಿ ಎಂದು ಹೇಳುತ್ತಾರೆ. ಆದರೀಗ, ಬ್ಯಾಂಕ್​ನಲ್ಲಿ ಕೆಲಸ ಸಿಗುತ್ತೆ ಎಂದು ಕಾಯುತ್ತಿರೋರಿಗೆ ಶಾಕಿಂಗ್​ ನ್ಯೂಸ್​ ಒಂದಿದೆ.

publive-image

HDFC, SBI ಮತ್ತು Axis ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳಲ್ಲಿ ನೇಮಕಾತಿ ಗಣನೀಯವಾಗಿ ಕುಸಿತ ಕಂಡಿದೆ ಎಂದು ತಿಳಿದು ಬಂದಿದೆ. ನಿಧಾನಗತಿಯ ಬೆಳವಣಿಗೆ, ಕಡಿಮೆ ವಿಸ್ತರಣೆ, ಸುಧಾರಿತ ಕ್ಷೀಣತೆ ಮುಂತಾದ ಅಂಶಗಳು ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ HDFC ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಸೇರಿದಂತೆ ಪ್ರಮುಖ ವಾಣಿಜ್ಯ ಬ್ಯಾಂಕುಗಳು ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ಪ್ರಮಾಣವನ್ನು ಕಡಿಮೆ ಮಾಡಿವೆ ಎಂದು ವರದಿಯಾಗಿದೆ.

ನೇಮಕಾತಿ ಸಂಖ್ಯೆಗಳ ಇಳಿಕೆ ಹೇಗಿದೆ?

ಫೈನಾನ್ಷಿಯಲ್​ ಇಯರ್​​ 2024ರಲ್ಲಿ 89,115 ಉದ್ಯೋಗಿಗಳನ್ನು ನೇಮಿಸಿದ್ದ HDFC ಬ್ಯಾಂಕ್ 2025ರಲ್ಲಿ ಈ ಸಂಖ್ಯೆಯನ್ನು 49,713ಕ್ಕೆ ಇಳಿಸಿದೆ. 10,661 ಜನರನ್ನು ನೇಮಿಸಿಕೊಂಡಿದ್ದ SBI ಈ ವರ್ಷ ಕೇವಲ 1,770 ನೇಮಕಾತಿಗಳಷ್ಟೇ ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ 40,724 ಜನರನ್ನು ನೇಮಕ ಮಾಡಿಕೊಂಡಿದ್ದು, ಈ ಸಂಖ್ಯೆ 31,674 ಕ್ಕೆ ಇಳಿದಿದೆ.

ನೇಮಕಾತಿಯಲ್ಲಿ ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು?

ಚಿಲ್ಲರೆ ಸಾಲದ ಬೆಳವಣಿಗೆ, ಶಾಖೆಗಳ ವಿಸ್ತರಣೆ ಪ್ರಕ್ರಿಯೆ ಹಿಮ್ಮುಖತೆ, ಅತ್ಯಧಿಕ ಉದ್ಯೋಗಿಗಳ ಕಡಿತ, ಬ್ಯಾಕ್‌ ಫಿಲ್ಲಿಂಗ್ ನೇಮಕಾತಿಗಳ ಕೊರತೆ, ಕ್ಯಾಂಪಸ್ ನೇಮಕಾತಿಗಳ ನಿರ್ಲಕ್ಷ್ಯ, ಡಿಜಿಟಲ್ ಪಾಲುದಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದ ನೇಮಕಾತಿಗೆ ಹೆಚ್ಚು ಒತ್ತು ನೀಡುತ್ತಿರುವುದು ಆಗಿದೆ. ಹಾಗೆಯೇ ಅಪಾಯ ನಿರ್ವಹಣೆ ಮತ್ತು ಸಂಪತ್ತು ನಿರ್ವಹಣೆಯಲ್ಲಿ ಲ್ಯಾಟರಲ್ ಹುದ್ದೆಗಳಿಗಷ್ಟೇ ಆದ್ಯತೆ ನೀಡುತ್ತಿರುವುದಾಗಿದೆ.

ಉದ್ಯೋಗಿಗಳ ಕಡಿತ ಪ್ರಮಾಣ ಹೇಗಿದೆ?

HDFC ಬ್ಯಾಂಕ್ 22.6% ಇಳಿಕೆ ಆಗಿದ್ದು, ಆಕ್ಸಿಸ್ ಬ್ಯಾಂಕ್ 25.5% ಇಳಿಕೆ ಆಗಿದೆ. SBI 2% ಕ್ಕಿಂತ ಕಡಿಮೆ ಆಗಿರೋದು ಆತಂಕಕಾರಿ ವಿಷಯ.

ತಜ್ಞರ ಅಭಿಪ್ರಾಯ ಏನು?

ಬ್ಯಾಂಕಿಂಗ್​ ನೇಮಕಾತಿಯಲ್ಲಿ ಕಂಡುಬರುವ ಕುಸಿತಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಸುತ್ತಿರೋ ಕಠಿಣ ಹಣಕಾಸು ನಿಲುವು ಪ್ರಮುಖ ಕಾರಣವಾಗಿದೆ. ಭಾರತದ ಪ್ರಮುಖ ಬ್ಯಾಂಕುಗಳಲ್ಲಿ 2025ರಲ್ಲಿ ತೀವ್ರವಾದ ನೇಮಕಾತಿ ಕುಸಿತ ಕಂಡುಬಂದಿದ್ದು, ಇದು ಬ್ಯಾಂಕುಗಳ ವಿಸ್ತರಣೆ ಮತ್ತು ಕಾರ್ಯನಿರ್ವಹಣೆ ದಿಕ್ಕನ್ನೇ ಬದಲಾಯಿಸುತ್ತಿದೆ. ಡಿಜಿಟಲ್ ವಿನ್ಯಾಸ, ತಂತ್ರಜ್ಞಾನ ಆಧಾರಿತ ಸೇವೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಬ್ಯಾಂಕ್​ಗಳು ಮುಂದಾಗಿವೆ. ಹಾಗಾಗಿ ನೇಮಕಾತಿ ನಡೆಯುತ್ತಿಲ್ಲ ಎನ್ನುತ್ತಾರೆ ತಜ್ಞರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment