/newsfirstlive-kannada/media/post_attachments/wp-content/uploads/2024/12/New-Car-Sale.jpg)
ಭಾರತದಲ್ಲಿ ಈಗ ಕಾರುಗಳ ಕಾರುಬಾರು ಜೋರಾಗಿದೆ. ತಿಂಗಳಲ್ಲಿ ಒಂದಲ್ಲ ಒಂದು ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸಣ್ಣದಾದ್ರು ಸರಿ ಒಂದು ಕಾರನ್ನು ಖರೀದಿಸಬೇಕು ಅನ್ನೋದು ಅದೆಷ್ಟೋ ಭಾರತೀಯರ ಕನಸು. ನೀವೇನಾದ್ರು ಹೊಸ ಕಾರು ಖರೀದಿಸುವ ಪ್ಲ್ಯಾನ್ನಲ್ಲಿದ್ರೆ ಈ ತಿಂಗಳೊಳಗೇ ಖರೀದಿಸಿ ಯಾಕೆ ಅಂತೀರಾ ಈ ವರದಿ ನೋಡಿ.
ಹೊಸ ವರ್ಷಕ್ಕೆ ಕಾರು ಖರೀಸುವ ಪ್ಲ್ಯಾನ್ನಲ್ಲಿದ್ದವರಿಗೆ ಶಾಕ್!
ಭಾರತದಲ್ಲಿ ಮುಂದಿನ ತಿಂಗಳು ಹೆಚ್ಚಾಗಲಿದೆ ಕಾರುಗಳ ರೇಟ್
ಹೊಸ ವರ್ಷಕ್ಕೆ ಕಾರುಗಳ ಕಂಪನಿಗಳು ಭರ್ಜರಿ ಆಫರ್ ಕೊಡ್ತಾರೆ. ಇಯರ್ ಎಂಡ್ನಲ್ಲಿ ಕಾರು ಖರೀದಿಸೋದು ಬೇಡ. ಹೊಸ ವರ್ಷದಿಂದ ಹೊಸ ಕಾರಲ್ಲಿ ಸುತ್ತಾಡೋಣ ಅಂತ ಭಾರೀ ಆಸೆಯಿಂದ ಕಾಯುತ್ತಿರುವವರಿಗೆ ಕಾರು ಕಂಪನಿಗಳು ಶಾಕ್ ನೀಡಿದೆ. ಭಾರತದಲ್ಲಿ ಮುಂದಿನ ತಿಂಗಳಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲು ಕಾರು ಕಂಪನಿಗಳು ಮುಂದಾಗಿವೆ.
ಪ್ರತಿಷ್ಠಿತ ಕಾರು ಕಂಪನಿಗಳಾದ ಮಾರುತಿ ಸುಜುಕಿ ಕಂಪನಿ, ಹುಂಡೈ, ಮಹೀಂದ್ರಾ , ಎಂಜಿ ಮೋಟಾರ್ಸ್ ಕಂಪನಿಯ ಕಾರ್ಗಳ ಬೆಲೆ ಹೆಚ್ಚಳ ಆಗಲಿದೆ. ಹಾಗಾದ್ರೆ ಯಾವ ಯಾವ ಕಂಪನಿಗಳ ಕಾರಿನ ಬೆಲೆಯಲ್ಲಿ ಎಷ್ಟೆಷ್ಟು ಹೆಚ್ಚಳವಾಗಲಿದೆ ಅನ್ನೋದನ್ನ ನೋಡೋದಾದ್ರೆ.
ಕಾರು ಎಷ್ಟು ದುಬಾರಿ?
ಮಾರುತಿ ಸುಜುಕಿ ಕಂಪನಿಯ ಕಾರುಗಳ ಬೆಲೆ ಶೇ.4 ರಷ್ಟು ಹೆಚ್ಚಳ
ಮಹಿಂದ್ರಾ ಕಂಪನಿಯ SUV ಕಾರ್ಗಳ ಬೆಲೆ ಶೇ.3 ರಷ್ಟು ಹೆಚ್ಚಳ
ಎಂಜಿ ಮೋಟಾರ್ ಕಂಪನಿಯ ಕಾರ್ಗಳ ಬೆಲೆ ಶೇ.3 ರಷ್ಟು ಹೆಚ್ಚಳ
ಹುಂಡೈ ಕಂಪನಿಯ ಕಾರ್ಗಳ ಬೆಲೆ 25 ಸಾವಿರ ರೂಪಾಯಿ ಹೆಚ್ಚಳ
ಇವಷ್ಟೇ ಅಲ್ಲ, ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು ಕಂಪನಿಯ ಕಾರುಗಳ ಬೆಲೆ ಕೂಡ ಮುಂದಿನ ತಿಂಗಳಿನಿಂದಲೇ ಹೆಚ್ಚಳ ಆಗಲಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕಂಪನಿಯ ನಿರ್ವಹಣಾ ವೆಚ್ಚ ಮತ್ತು ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಬೆಲೆ ಏರಿಕೆಯ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಗಳು ತಿಳಿಸಿವೆ.
ಇದನ್ನೂ ಓದಿ: AI ತಾಯಿಯ ಬಗ್ಗೆ ಎಂದಾದರು ಕಲ್ಪನೆ ಇತ್ತಾ? ಬಂದಿದ್ದಾಳೆ ಭಾರತದಲ್ಲಿ ಮೊದಲ ಎಐ ಮದರ್! ಹೆಸರೇನು ಗೊತ್ತಾ?
ಹೊಸ ವರ್ಷಕ್ಕೆ ಹೊಸ ಕಾರು ಖರೀದಿಸು ಪ್ಲಾನ್ ಇದ್ದರೆ ಈಗಲೇ ಚೇಂಜ್ ಮಾಡಿಕೊಳ್ಳಿ. ಜೊತೆಗೆ ಇಯರ್ ಎಂಡ್ ಆಗಿರುವ ಕಾರಣ, ಈ ತಿಂಗಳಲ್ಲೇ ಕಾರು ಖರೀಸಿದ್ರೆ, ಭರ್ಜರಿ ಡಿಸ್ಕೌಂಟ್. ಒಳ್ಳೆ ಒಳ್ಳೆ ಆಫರ್ಗಳು ಕೂಡ ಸಿಗಬಹುದು. ಯಾವುದಕ್ಕೂ ಒಮ್ಮೆ ಯೋಚಿಸುವುದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ