/newsfirstlive-kannada/media/post_attachments/wp-content/uploads/2024/07/Darshan-In-Jail.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸುಮಾರು ಒಂದು ತಿಂಗಳಿಂದ ಪೊಲೀಸ್ ಕಸ್ಟಡಿ, ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ ಜೈಲೂಟದ್ದೇ ದೊಡ್ಡ ಚಿಂತೆಯಾಗಿದೆ. ಇಷ್ಟು ದಿನ ಸಹಿಸಿಕೊಂಡು ಸಾಕಾದ ಮೇಲೆ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!
ದರ್ಶನ್ ಜೈಲೂಟದ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದ್ದು, ಜುಲೈ 18ಕ್ಕೆ ವಿಚಾರಣೆ ಮುಂದೂಡಲಾಗಿದೆ. ಜೈಲಿನ ಒಳಗೆ ಕೈದಿಗಳಿಗೆ ನೀಡುವ ಸಾಮಾನ್ಯ ಊಟ, ತಟ್ಟೆಗೆ ದರ್ಶನ್ ಅಡ್ಜೆಸ್ಟ್ ಆಗೋದು ಕಷ್ಟವಾಗಿದೆ. ಇದೀಗ ಮನೆಯಿಂದ ಊಟ, ಚಮಚ, ಹಾಸಿಗೆಗಾಗಿ ಮನವಿ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ ಮುಗಿದ ಬಳಿಕ ಜೈಲಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಲಿದ್ದಾರೆ.
ದರ್ಶನ್ ಜೈಲೂಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ದರ್ಶನ್ ಅಕ್ಕನ ಕುಟುಂಬ ಜೈಲಿಗೆ ಆಗಮಿಸಿದ್ದರು. ದರ್ಶನ್ ಜೈಲು ಸೇರಿದ ಮೇಲೆ 2ನೇ ಬಾರಿ ಅಕ್ಕ, ಬಾವ ಮತ್ತು ಮಗ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಜೈಲಿನ ಒಳಗೆ ಹೋದ ಕುಟುಂಬಸ್ಥರು ದರ್ಶನ್ ಜೊತೆ ಕೆಲ ಕಾಲ ಚರ್ಚೆ ನಡೆಸಿ ಬಂದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಅಕೌಂಟ್‌ನಿಂದ ನನಗೂ ಕೆಟ್ಟ ಮೆಸೇಜ್.. ದರ್ಶನ್ ಬಗ್ಗೆ ನಟಿ ಮಮತಾ ರಾವತ್ ಏನಂದ್ರು?
ಡ್ರೈ ಫ್ರೂಟ್ಸ್ ಬಿಡದ ಪೊಲೀಸರು!
ದರ್ಶನ್ ನೋಡಲು ಬಂದಿದ್ದ ಅಕ್ಕ, ಬಾವ ತಮ್ಮನಿಗಾಗಿ ಡ್ರೈ ಫ್ರೂಟ್ಸ್ ಕೂಡ ತಂದಿದ್ದರು. ಕಾರನ್ನು ಪರಿಶೀಲನೆ ನಡೆಸಿದ ಪೊಲೀಸರು ಡ್ರೈ ಫ್ರೂಟ್ಸ್ ಅನ್ನು ಒಳಗೆ ಬಿಡದೆ ತಡೆದಿದ್ದಾರೆ. ಜೈಲಿನ ಹೋಗಿ ಬಂದ ಮೇಲೆ ಪೊಲೀಸ್ ಅಧಿಕಾರಿಗಳು ಡ್ರೈಫ್ರೂಟ್ಸ್ ಅನ್ನು ವಾಪಸ್ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ