/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ಬೆಂಗಳೂರು: ನಟ ದರ್ಶನ್ಗೆ ಇವತ್ತೂ ಕೂಡ ಬೇಲ್ ರಿಲೀಫ್ ಸಿಗಲಿಲ್ಲ, ರೆಗ್ಯೂಲರ್ ಬೇಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಡಿಸೆಂಬರ್ 11ಕ್ಕೆ ದರ್ಶನ್ ಮಧ್ಯಂತರ ಜಾಮೀನಿನ ಅವಧಿ ಕೂಡ ಕೊನೆಗೊಳ್ಳಲಿದೆ ದರ್ಶನ್ ಮತ್ತೆ ಜೈಲು ಸೇರ್ತಾರಾ ಎಂಬ ಕುತೂಹಲ ಮೂಡಿದೆ.
ನಟ ದರ್ಶನ್ ಬೇಲ್ ಅರ್ಜಿ ವಿಚಾರಣೆ ಮುಂದೂಡಿಕೆ
ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠದಲ್ಲಿ ನಟ ದರ್ಶನ್ ಸೇರಿದಂತೆ ಇತರೆ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಮಾಡಿದ್ದ ವಾದಕ್ಕೆ ಇಂದು ಎಸ್ಪಿಪಿ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ರು. ವಾದ-ಪ್ರತಿವಾದಗಳನ್ನ ಆಲಿಸಿದ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದ್ರು. ಈ ಮೂಲಕ ದರ್ಶನ್ಗೆ ರಿಲೀಫ್ ಟನ್ಶನ್ ಮುಂದುವರಿದಂತಾಗಿದೆ.
ಕೋರ್ಟ್ನಲ್ಲಿ ವಾದ-ಪ್ರತಿವಾದ ಹೀಗಿತ್ತು?
ಎಸ್ಪಿಪಿ ಪ್ರಸನ್ನಕುಮಾರ್: ದರ್ಶನ್ ಆಪರೇಷನ್ಗೆ ಪ್ರಿಪೇರ್ ಆಗಲು ಒಂದು ವಾರ ಸಮಯ ನೀಡಲಾಗಿತ್ತು, 2ನೇ ಅರ್ಜಿಯಲ್ಲಿ ದರ್ಶನ್ ಪ್ರಿಪೇರ್ ಆಗ್ತಾ ಇದ್ದಾರೆ ಅಂತ ಹೇಳ್ತಾರೆ, 21 ದಿನಗಳಲ್ಲಿ ಬಿ ಪಿ ವೇರಿಯೇಷನ್ ಆಗ್ತಾ ಇದೆ ಅಂತಾ ನವೆಂಬರ್ 1ರಂದು ಚಾರ್ಜ್ ಕೊಡ್ತಾರೆ. ನವೆಂಬರ್ 6ರ ತನಕ ಬಿಪಿ ನಾರ್ಮಲ್ ಇದೆ, ಬಳಿಕ ಬಿಪಿ 141, 142 ಇದೆ ಅಂತಾರೆ. ಆದ್ದರಿಂದ ದರ್ಶನ್ಗೆ ಸರ್ಜರಿ ಮಾಡಲು ಆಗಲ್ಲ ಅಂತಾರೆ, ಆದ್ರೆ ಇಲ್ಲಿ 5 ವಾರ ಆದ್ರೂ ಇನ್ನೂ ಸರ್ಜರಿಗೆ ಪ್ರಿಪೇರ್ ಮಾಡ್ತಾ ಇದ್ದಾರೆ. 5 ವಾರ ಟೈಂ ವೇಸ್ಟ್ ಮಾಡ್ತಾ ಇದ್ದಾರೆ. ಸಿನಿಮಾ ರೀತಿ, ಸೋಪ್ ಹಾಕಿಕೊಳ್ಳಿ, ಪೌಡರ್ ಹಾಕಿಕೊಳ್ಳಿ ಅಂತಾ ಹೇಳ್ತಿದ್ದಾರೆ. ನಾಳೆಯೇ ಲಕ್ವಾ ಹೊಡೆಯತ್ತೆ ಅಂತಾ ಹೇಳಿ ಪಡೆದಿದ್ದರು. ಆದ್ರೆ ಈ ರೀತಿ ಕಾಲಹರಣ ಮಾಡಿದ್ದಾರೆ. ಸದ್ಯ ದರ್ಶನ್ಗೆ ನೀಡಿರುವ ಬೇಲ್ ವಜಾ ಮಾಡಬೇಕು. ಸರೆಂಡರ್ ಆಗಿ ಆಮೇಲೆ ರೆಗ್ಯೂಲರ್ ಬೇಲ್ ಬಗ್ಗೆ ತೀರ್ಮಾನ ಮಾಡಬೇಕು. ಇವರು ಕೋರ್ಟ್ ಅನುಕಂಪದ ದುರುಪಯೋಗ ಮಾಡಿಕೊಳ್ತಿದ್ದಾರೆ.
ಸಿ.ವಿ.ನಾಗೇಶ್: ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದಾರೆ
ನ್ಯಾ. ವಿಶ್ವಜಿತ್ ಶೆಟ್ಟಿ: ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ರೆ ಇಲ್ಲಿ ವಾದ ಮಾಡಬಾರದು ಅಂತಾ ಇದ್ಯಾ? ಅಲ್ಲಾ, ನೀವು ಆರೋಪಿಗಳ ವಾದಕ್ಕೆ ಮುಂಚೆ ಹೇಳೋದಲ್ವಾ? ಅವರು ಫಾಲೋ ಮಾಡ್ತಾ ಇಲ್ಲ ಅಂತಾ.
ಎಸ್ಪಿಪಿ ಪ್ರಸನ್ನಕುಮಾರ್: ಇದರಲ್ಲಿ ಎ1 ನೇರವಾಗಿ ರೇಣುಕಾಸ್ವಾಮಿಗೆ ಡ್ರಾಪ್ ಮಿ ಯುವರ್ ನಂಬರ್ ಅಂತ ಮೆಸೇಜ್ ಹಾಕ್ತಾರೆ. ಆದ್ರೆ ಆಕೆ ಆತನ ನಂಬರ್ ಬ್ಲಾಕ್ ಮಾಡಲ್ಲ, ಬದಲಾಗಿ ನಂಬರ್ ಕೇಳ್ತಾಳೆ. ಜೂನ್ 3ರಂದು ನಂಬರ್ ಕಳುಹಿಸುವಂತೆ ಮೆಸೇಜ್ ಮಾಡ್ತಾಳೆ. ಜೂನ್ 5 ಕಳೆದ್ರೂ ರೇಣುಕಾಸ್ವಾಮಿ ರೆಸ್ಪಾಂಡ್ ಮಾಡಲ್ಲ, ಆಗ ಪವನ್ಗೆ ನಂಬರ್ ನೀಡ್ತಾಳೆ.
ನ್ಯಾ. ವಿಶ್ವಜಿತ್ ಶೆಟ್ಟಿ: ಅದಾದ ಬಳಿಕ ಮೃತನ ಜೊತೆ ಪವನ್ ಮಾತುಕತೆನಾ?
ಎಸ್ಪಿಪಿ ಪ್ರಸನ್ನಕುಮಾರ್: ಹೌದು, ಆ ನಂತರ ಪವನ್ ಜೊತೆ ಮಾತುಕತೆ ಮುಂದುವರಿಯುತ್ತೆ, ಇದು ನಿನ್ನ ನಂಬರ್ ಅಲ್ವಾ ಅಂತ ರೇಣುಕಾಸ್ವಾಮಿ ಕೇಳ್ತಾನೆ , ಆಗ ಪವಿತ್ರಾಗೌಡ ಹಾಗೂ ಪವನ್ ಕಾಲ್ ಮಾಡಿ ಮಾತಾಡ್ತಾರೆ, ಆದಾದ ಬಳಿಕ ರೇಣುಕಾಸ್ವಾಮಿ ಆತನ ಗುಪ್ತಾಂಗದ ಫೋಟೋ ಕಳುಹಿಸ್ತಾನೆ. ಆಗಲೂ ಆತನ ನಂಬರ್ ಬ್ಲಾಕ್ ಮಾಡಲ್ಲ, ಬಳಿಕ ಪವನ್, ರೇಣುಕಾಸ್ವಾಮಿ ಮನೆಯ ವಿಳಾಸ ಕೇಳ್ತಾನೆ, ಇದು ಪವನ್ ಮೊಬೈಲ್ ರಿಕವರಿಯಲ್ಲಿ ಸಿಕ್ಕಿದೆ. ಬಳಿಕ ಜೂನ್ 7ರಂದು ಮತ್ತೊಂದು ಚಾಟಿಂಗ್ ನಡೆಯುತ್ತೆ, ಆಗ ನಾನು ಚಿತ್ರದುರ್ಗ ಕೋರ್ಟ್ ಬಳಿ ಇರುವುದಾಗಿ ರೇಣುಕಾಸ್ವಾಮಿ ಹೇಳಿರ್ತಾನೆ.
ನ್ಯಾ. ವಿಶ್ವಜಿತ್ ಶೆಟ್ಟಿ: ಹೀಗಂತಾ ಮೃತ ವ್ಯಕ್ತಿ ಹೇಳಿದ್ದನಾ?
ಎಸ್ಪಿಪಿ ಪ್ರಸನ್ನಕುಮಾರ್: ಹೌದು, ಕೋರ್ಟ್ ಇದೆ ಅಟೆಂಡ್ ಮಾಡಬೇಕು ಎಂದಿರುತ್ತಾನೆ, ಬಳಿಕ ಬಳಿಕ ರೇಣುಕಾಸ್ವಾಮಿಯನ್ನು ಹುಡುಕಲು ರಾಘವೇಂದ್ರಗೆ ಪವನ್ ಹೇಳಿರ್ತಾನೆ, ಬಳಿಕ ಜೂನ್ 8ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಕ್ರೈಂ ಸ್ಟಾರ್ಟ್ ಮಾಡ್ತಾರೆ. ಆರೋಪಿಗಳ ಲೊಕೇಷನ್, & ಸಾಕ್ಷಿಗಳ ಲೊಕೇಷನ್ ಸೇಮ್ ಇದೆ, ಆರೋಪಿಗಳು ಅಲ್ಲಿದ್ದ ಬಗ್ಗೆ ಸಾಕ್ಷಿ ಕ್ಲಿಯರ್ ಇದೆ.
ನ್ಯಾ. ವಿಶ್ವಜಿತ್ ಶೆಟ್ಟಿ: ಇಲ್ಲಿ ಅರ್ಜಿದಾರರ ಪರ ವಕೀಲರು ಅಲ್ಲಿದ್ದ ಬಗ್ಗೆ ಡಿಸ್ಪೂಟ್ ಮಾಡಿಲ್ಲ ಏಕೆ?
ಎಸ್ಪಿಪಿ ಪ್ರಸನ್ನಕುಮಾರ್: ಹೌದು, CW 91 ಬಗ್ಗೆ ಮಾಡಿದ್ದಾರೆ
ನ್ಯಾ. ವಿಶ್ವಜಿತ್ ಶೆಟ್ಟಿ: ಸರಿ ಸೋಮವಾರ ಇನ್ನಷ್ಟು ವಿಚಾರಣೆ ಮಾಡೋಣ
ಈ ಮಧ್ಯೆ ಚಿತ್ರದುರ್ಗದ ರೇಣುಕಾಸ್ವಾಮಿಯಲ್ಲಿ ಮನೆಯಲ್ಲಿ 2 ದಿನಗಳಿಂದ ವಿಶೇಷ ಪೂಜೆ ನಡೆದಿದೆ. ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಕುಟುಂಬದಲ್ಲಿ ಶಾಂತಿ, ಮಗುವಿನ ಆರೋಗ್ಯಕ್ಕಾಗಿ ಪೂಜಾ ಕೈಂಕರ್ಯಗಳು ನಡೆದಿವೆ.
ಸದ್ಯ ಎಸ್ಪಿಪಿ ಪ್ರಸನ್ನಕುಮಾರ್ ಪ್ರತಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಮತ್ತೊಂದೆಡೆ ದರ್ಶನ್ ಮಧ್ಯಂತರ ಜಾಮೀನಿನ ಅವಧಿ ಕೂಡ ಡಿಸೆಂಬರ್ 11ಕ್ಕೆ ಮುಕ್ತಾಯ ಆಗಲಿದ್ದು ದರ್ಶನ್ಗೆ ರಿಲೀಫ್ ಸಿಗುತ್ತಾ ಅಂತಾ ಕಾದು ನೋಡಬೇಕಿದೆ.
ಇದನ್ನೂ ಓದಿ:ತನ್ನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಜೀವ ಬಿಟ್ಟ ಪೊಲೀಸ್ ಅಧಿಕಾರಿ; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ