ಮುಂಬೈಗೆ ಬಿಗ್​​ ಶಾಕ್​; 2025ರ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಮೇಲೆ BCCI ನಿಷೇಧ

author-image
Ganesh Nachikethu
Updated On
IPL 2025: ಮೆಗಾ ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್​ ರೀಟೈನ್​ ಲಿಸ್ಟ್​ ಔಟ್​​; ಯಾರಿಗೆ ಚಾನ್ಸ್​​?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್!
  • ಈ ಮುನ್ನವೇ ಮುಂಬೈ ಇಂಡಿಯನ್ಸ್​ಗೆ ಬಿಸಿಸಿಐ ಬಿಗ್​ ಶಾಕ್​
  • ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್ ಮೇಲೆ ನಿಷೇಧ

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದಿದೆ. ಮುಂದಿನ ಸೀಸನ್​​ನಲ್ಲಿ ಹೇಗಾದ್ರೂ ಮಾಡಿ ಗೆಲ್ಲಬೇಕು ಎಂದು ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಮುಂಬೈ ಇಂಡಿಯನ್ಸ್​ ಕೂಡ ಹರಾಜಿನಲ್ಲಿ ಸ್ಟಾರ್​ ಆಟಗಾರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟಿದೆ.

ಇನ್ನು, ಬರೋಬ್ಬರಿ 16 ಕೋಟಿ ನೀಡಿ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್​ ಉಳಿಸಿಕೊಂಡಿದೆ. 2025ರ ಐಪಿಎಲ್​ನಲ್ಲೂ ಮುಂಬೈ ಇಂಡಿಯನ್ಸ್​ ತಂಡವನ್ನು ಹಾರ್ದಿಕ್​ ಪಾಂಡ್ಯ ಅವರೇ ಲೀಡ್​ ಮಾಡಲಿದ್ದಾರೆ. ಇದರ ಮಧ್ಯೆ ಹಾರ್ದಿಕ್​ ಪಾಂಡ್ಯಗೆ ಒಂದು ಶಾಕಿಂಗ್​ ನ್ಯೂಸ್​ ಒಂದಿದೆ.

ಹಾರ್ದಿಕ್​ ಮೇಲೆ ನಿಷೇಧ

ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಕೊನೆ ಪಂದ್ಯದಲ್ಲಿ ನಿಧಾನಗತಿಯ ಓವರ್‌ ಮಾಡಲಾಗಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ ಮೇಲೆ ಒಂದು ಪಂದ್ಯಕ್ಕೆ ಬಿಸಿಸಿಐ ನಿಷೇಧ ಹೇರಿದೆ.

ಏನಿದು ರೂಲ್ಸ್​?

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಯಾವುದೇ ತಂಡದಲ್ಲಿ ಸ್ಲೋ ಓವರ್ ರೇಟ್ 3 ಬಾರಿ ಕಂಡು ಬಂದಲ್ಲಿ ನಿಷೇಧ ಹೇರಲಾಗುತ್ತದೆ. ಅದರಲ್ಲೂ ತಂಡದ ನಾಯಕನಿಗೆ 1 ಪಂದ್ಯಕ್ಕೆ ನಿಷೇಧ ಹೇರುವುದು ಕಾನೂನು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2025ರ ಮೊದಲ ಪಂದ್ಯ ಆಡುವುದಿಲ್ಲ.

2025ರ ಐಪಿಎಲ್​ನಲ್ಲೂ ಹಾರ್ದಿಕ್ ಪಾಂಡ್ಯ ಅವರನ್ನೇ ಮುಂಬೈ ಇಂಡಿಯನ್ಸ್ ನಾಯಕನಾಗಿ ಮುಂದುವರಿಸಲಿದೆ. ಈ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ:IPL 2025: KL ರಾಹುಲ್​​ ಬೆನ್ನಲ್ಲೇ ಆರ್​​ಸಿಬಿಯಿಂದ ಮತ್ತೊಬ್ಬ ಕನ್ನಡಿಗನಿಗೆ ಭಾರೀ ಅನ್ಯಾಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment