newsfirstkannada.com

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಬಿಗ್​ ಶಾಕ್​​​; ಸಂಕೇತ್​​ ದಿಢೀರ್​ ರಾಜೀನಾಮೆ

Share :

Published March 17, 2024 at 7:49pm

Update March 17, 2024 at 7:50pm

  ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​​ಗೆ ಭಾರೀ ಆಘಾತ!

  ಸುಪ್ರೀಂಕೋರ್ಟ್​​ ವಕೀಲ ಸಂಕೇತ್ ಏಣಗಿ ಕಾಂಗ್ರೆಸ್​​ಗೆ ಗುಡ್​ ಬೈ

  ಕಾಂಗ್ರೆಸ್​​​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಂತೇತ್​​ ರಾಜೀನಾಮೆ

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​​ಗೆ ಬಿಗ್​ ಶಾಕ್​ ಆಗಿದೆ. ಸುಪ್ರೀಂಕೋರ್ಟ್​​ ವಕೀಲ ಸಂಕೇತ್ ಏಣಗಿ ಕಾಂಗ್ರೆಸ್​​ಗೆ ಗುಡ್​ ಬೈ ಹೇಳಿದ್ದಾರೆ.

ತನಗೆ ಯಾವುದೇ ಹುದ್ದೆ ನೀಡದೆ ನಿರ್ಲಕ್ಷ್ಯ ಮಾಡಿದ ಕಾರಣ ಕಾಂಗ್ರೆಸ್​​​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಂತೇತ್​​ ರಾಜೀನಾಮೆ ನೀಡಿದ್ದಾರೆ. ಸಂಕೇತ್​​​ ಏಣಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ಪತ್ರದಲ್ಲೇನಿದೆ..?

ನಾನು ಏಣಗಿ ಬಾಳಪ್ಪನವರ ಮೊಮ್ಮಗ. ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದವನು. ಪಕ್ಷದಿಂದ ನಾನು ಏನನ್ನೂ ಬಯಸಿಲ್ಲ. ಆದರೆ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹಾಗಾಗಿ ನಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸ್ತಿದ್ದೇನೆ ಎಂದು ಸುಧೀರ್ಘ ಪತ್ರ ಬರೆದು ರಾಜೀನಾಮೆ ಕೊಟ್ಟಿದ್ದಾರೆ.

ಇನ್ನು, ಸಂಕೇತ್​ ಬೆಳಗಾವಿ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದ. ಕಳೆದ ರಾಜ್ಯಸಭಾ ಚುನಾವಣೆಯಲ್ಲೂ ತನಗೆ ಮಣೆ ಹಾಕಬಹುದು ಎಂದು ಭಾವಿಸಿದ್ದ. ಪಕ್ಷದಿಂದ ಯಾವುದೇ ಸ್ಥಾನಮಾನ ನೀಡದ ಕಾರಣ ರಾಜೀನಾಮೆ ನೀಡಿದ್ದಾರೆ ಏಣಗಿ ಎಂಬ ಮಾತುಗಳು ಕೇಳಿ ಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಬಿಗ್​ ಶಾಕ್​​​; ಸಂಕೇತ್​​ ದಿಢೀರ್​ ರಾಜೀನಾಮೆ

https://newsfirstlive.com/wp-content/uploads/2023/10/Dk-Shivakumar-Kpcc.jpg

Load More