ಆರ್​​ಸಿಬಿ, ಕೆಕೆಆರ್​ ಮಧ್ಯೆ ಮಹತ್ವದ ಪಂದ್ಯ; ಬಿಗ್​ ಶಾಕ್​​ ಕೊಟ್ಟ ಯಂಗ್​ ಪ್ಲೇಯರ್​

author-image
Ganesh Nachikethu
Updated On
ಆರ್​​ಸಿಬಿ, ಕೆಕೆಆರ್​ ನಡುವಿನ ಐಪಿಎಲ್​ ಪಂದ್ಯ ನಡೆಯೋದು ಡೌಟ್​; ಕಾರಣವೇನು?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್!
  • ಮಾರ್ಚ್​​​ 22ನೇ ತಾರೀಕಿನಿಂದು ಐಪಿಎಲ್​​ ಮೊದಲ ಪಂದ್ಯ
  • ಮೊದಲ ಪಂದ್ಯದಲ್ಲಿ ಕೆಕೆಆರ್​​​, ಆರ್​​ಸಿಬಿ ತಂಡಗಳು ಜಿದ್ದಾಜಿದ್ದಿ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್​​​ 22ನೇ ತಾರೀಕಿನಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನು, ಎಂದಿನಂತೆ ಈ ವರ್ಷವೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಭಾರೀ ನಿರೀಕ್ಷೆ ಇದೆ. ಹಾಗಾಗಿ ಈ ಸಲ ಕಪ್​ ನಮ್ದೇ ಎಂದು ಫ್ಯಾನ್ಸ್​​​ ಮತ್ತೊಮ್ಮೆ ಹೇಳಲು ಶುರು ಮಾಡಿದ್ದಾರೆ. 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್​​, ಆರ್​​ಸಿಬಿ ಮುಖಾಮುಖಿ ಆಗಲಿವೆ.

ಕೋಲ್ಕತ್ತಾದ ಈಡನ್ ಗಾರ್ಡನ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಆರ್​​ಸಿಬಿ ತಂಡವನ್ನು ಕ್ಯಾಪ್ಟನ್​ ರಜತ್​ ಪಾಟಿದಾರ್​ ಲೀಡ್​ ಮಾಡಲಿದ್ದಾರೆ. ಈಗಾಗಲೇ ಇಡೀ ಟೀಮ್​ ಆರ್​​ಸಿಬಿ ಕ್ಯಾಂಪ್​​ ಸೇರಿಕೊಂಡಿದ್ದು, ಅಭ್ಯಾಸ ಪ್ರಾರಂಭಿಸಿದ್ದಾರೆ. ಇದರ ಮಧ್ಯೆ ಕೆಕೆಆರ್​ ತಂಡಕ್ಕೆ ಶಾಕಿಂಗ್​ ನ್ಯೂಸ್​ ಒಂದಿದೆ.

ಚೇತನ್ ಸಕಾರಿಯಾಗೆ ಚಾನ್ಸ್​​

ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಬಲಗೈ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್ 2025ರಿಂದ ಹೊರಗುಳಿದಿದ್ದಾರೆ. ತಂಡದಿಂದ ಗಾಯಗೊಂಡು ಉಮ್ರಾನ್ ಮಲಿಕ್ ಹೊರಬಿದ್ದಿದ್ದು, ಇವರ ಬದಲಿಗೆ ವೇಗದ ಬೌಲರ್ ಸೇರಿಕೊಂಡಿದ್ದಾರೆ.

ಉಮ್ರಾನ್ ಮಲಿಕ್ ಬದಲಿಗೆ ಎಡಗೈ ವೇಗಿ ಚೇತನ್ ಸಕಾರಿಯಾ ಕೆಕೆಆರ್ ತಂಡ ಸೇರಿದ್ದಾರೆ. ಸಕರಿಯಾ 75 ಲಕ್ಷಕ್ಕೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಉಮ್ರಾನ್ ಮಲಿಕ್​ಗೆ ಮೆಗಾ ಹರಾಜಿನಲ್ಲಿ 75 ಲಕ್ಷ ನೀಡಿ ಕೆಕೆಆರ್ ಖರೀದಿಸಿತ್ತು.

ಇದನ್ನೂ ಓದಿ:IPL 2025: ಆರ್​​​ಸಿಬಿ ಕೈ ಬಿಟ್ಟ ಆಟಗಾರನಿಗೆ ಮಹತ್ವದ ಜವಾಬ್ದಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment