/newsfirstlive-kannada/media/post_attachments/wp-content/uploads/2024/11/Pant_KL-Rahul.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಎಲ್ಲಾ ಐಪಿಎಲ್ ತಂಡಗಳು ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡುವ ಮೂಲಕ ಬಲಿಷ್ಠ ತಂಡಗಳನ್ನು ಕಟ್ಟಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಬರೋಬ್ಬರಿ 14 ಕೋಟಿ ನೀಡಿ ಖರೀದಿಸಿದೆ. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾರಿಗೆ? ಅನ್ನೋ ಚರ್ಚೆ ಶುರುವಾಗಿದೆ.
ರಾಹುಲ್ ಅವರಿಗೆ ಸಿಗುತ್ತಾ ಕ್ಯಾಪ್ಟನ್ಸಿ?
2022ರಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಶುರು ಮಾಡಿದ್ರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ 38 ಪಂದ್ಯಗಳನ್ನಾಡಿರೋ ರಾಹುಲ್ 10 ಅರ್ಧಶತಕ ಹಾಗೂ 2 ಶತಕಗಳೊಂದಿಗೆ ಒಟ್ಟು 1410 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ರು. ಇದಾಗ್ಯೂ ರಾಹುಲ್ ಅವರನ್ನು ಲಕ್ನೋ ತಂಡದಿಂದ ಕೈ ಬಿಡಲಾಯ್ತು. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆ.ಎಲ್ ರಾಹುಲ್ ಅವರಿಗೆ ಕ್ಯಾಪ್ಟನ್ಸಿ ನೀಡಬಹುದು ಎಂದು ತಿಳಿದು ಬಂದಿದೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಕರೆತಂದು ಆರ್‌ಸಿಬಿ ತಂಡದ ನಾಯಕ ಪಟ್ಟ ಕಟ್ಟಲಾಗುತ್ತದೆ ಎನ್ನುವ ಚರ್ಚೆ ಜೋರಾಗಿ ಕೇಳಿ ಬಂದಿತ್ತು. ಇದಷ್ಟೇ ಅಲ್ಲದೇ ಕೆ.ಎಲ್ ರಾಹುಲ್ ಕೂಡ ತವರಿನ ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ರು. ಹೀಗಾಗಿ ಮುಂದಿನ ಸೀಸನ್ಗೆ ರಾಹುಲ್ ಆರ್‌ಸಿಬಿ ಕ್ಯಾಪ್ಟನ್ ಆದ್ರೂ ಅಚ್ಚರಿಯಿಲ್ಲ ಎಂಬ ಚರ್ಚೆ ಜೋರಾಗಿತ್ತು. ಈಗ ರಾಹುಲ್ ಡೆಲ್ಲಿ ತಂಡದ ಪಾಲಾಗಿದ್ದಾರೆ.
ನಾಯಕತ್ವದ ರೇಸ್‌ನಲ್ಲಿ ಮತ್ತಿಬ್ಬರು
ನಾಯಕನ ರೇಸ್‌ನಲ್ಲಿ ಇಬ್ಬರು ಆಟಗಾರರು ಇದ್ದಾರೆ ಎಂದು ತಿಳಿದು ಬಂದಿದೆ. ಅನುಭವಿ ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಫಾಫ್ ಡುಪ್ಲೆಸಿಸ್ ಅವರು ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಬಹುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:RCB ಮ್ಯಾನೇಜ್ಮೆಂಟ್ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ