/newsfirstlive-kannada/media/post_attachments/wp-content/uploads/2023/06/Nandini.jpg)
ಕೋಲಾರ: ಕೋಚಿಮುಲ್ ಹಾಲಿನ ದರ ಕಡಿಮೆ ಮಾಡಿ ಕೋಲಾರ ಭಾಗದ ರೈತರಿಗೆ ಬಿಗ್ ಶಾಕ್ ನೀಡಿದೆ. ಹಾಲು ಉತ್ಪಾದಕರಿಗೆ ದಿಢೀರ್ 2 ರೂ. ಕಡಿತ ಮಾಡಿ ಕೋಚಿಮುಲ್ ಆಡಳಿತ ಮಂಡಳಿ ಆದೇಶಿಸಿದೆ.
ಇನ್ನು, ಪ್ರತಿ ಲೀಟರ್ ಹಾಲಿನ ಮೇಲೆ 2 ರೂ. ಕಡಿತ ಮಾಡಲಾಗುವುದು. ಈ ಆದೇಶ ನಾಳೆ ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ. ಈ ಮೊದಲು ಲೀಟರ್ ಹಾಲಿಗೆ 33.40 ರೂ. ನೀಡಲಾಗುತ್ತಿತ್ತು. ಈ ಆದೇಶದ ಕಾರಣದಿಂದ ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್ಗೆ 31.40 ರೂ ನೀಡಲಾಗುತ್ತದೆ.
ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್ಗೆ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಕಳೆದ ತಿಂಗಳು ಜೂನ್ನಲ್ಲಿ ಪ್ರತಿ ದಿನ ಕೋಚಿಮುಲ್ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಮಾತ್ರವೇ 2.50 ಲಕ್ಷ ಲೀಟರ್ ಹಾಲು ಹೆಚ್ಚಳವಾಗಿದೆ. ಹಾಗಾಗಿ ಕೋಚಿಮುಲ್ ಈ ನಿರ್ಧಾರ ಕೈಗೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್