/newsfirstlive-kannada/media/post_attachments/wp-content/uploads/2024/11/RCB-5.jpg)
ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ 2 ಟಿ20 ಪಂದ್ಯಗಳು ಮುಗಿದಿವೆ. ಎರಡರಲ್ಲೂ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಇದರ ಮಧ್ಯೆ ಆರ್​​ಸಿಬಿಗೆ ಆಘಾತದ ಸುದ್ದಿ ಒಂದಿದೆ. ಆರ್​​ಸಿಬಿ ಖರೀದಿ ಮಾಡಿದ ಮೂವರು ಸ್ಫೋಟಕ ಬ್ಯಾಟರ್​ಗಳು 2 ಟಿ20 ಪಂದ್ಯಗಳಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದಾರೆ.
ಫಸ್ಟ್ ಟಿ20 ಫೈಟ್​ ಅಂತ್ಯವಾಗಿದ್ದೂ ಆಯ್ತು, ಟೀಮ್​ ಇಂಡಿಯಾ ಗೆದ್ದಿದ್ದೂ ಆಯ್ತು. ಆದ್ರೆ, ಸೋತ ಇಂಗ್ಲೆಂಡ್​​ಗಿಂತ ಹೆಚ್ಚು ಟೆನ್ಶನ್​ ಆರ್​​ಸಿಬಿ ಕ್ಯಾಂಪ್​ನಲ್ಲಿ ಸ್ಟಾರ್ಟ್​ ಆಗಿದೆ. ಅಭಿಮಾನಿಗಳು ಮ್ಯಾನೇಜ್​ಮೆಂಟ್​ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಫಿಲ್​​ ಸಾಲ್ಟ್​ಗೆ 11.50 ಕೋಟಿ, ಲಿವಿಂಗ್​ಸ್ಟೋನ್​ಗೆ ​8.75 ಕೋಟಿ, ಜೇಕಬ್​ ಬೆಥೆಲ್​ಗೆ 2.60 ಕೋಟಿ ರೂ. ನೀಡಿ ಖರೀದಿಸಿದ್ದು, ಈ ಮೂವರು ಆರ್​​ಸಿಬಿ ಬ್ಯಾಟರ್​​ಗಳು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ.
/newsfirstlive-kannada/media/post_attachments/wp-content/uploads/2024/12/Liam-Livingstone-RCB.jpg)
ಕಳೆದ ಐಪಿಎಲ್​ ಆಕ್ಷನ್​ ಡಿಫರೆಂಟ್​ ಸ್ಟ್ರಾಟಜಿ ಮಾಡಿದ್ದ ಆರ್​​ಸಿಬಿ ಒಳ್ಳೋಳ್ಳೆ ಅಟಗಾರರನ್ನ ಬಿಟ್ಟು, ಈ ಇಂಗ್ಲೀಷ್​ ಪ್ಲೇಯರ್ಸ್​ ಮೇಲೆ ಕೋಟಿ ಕೋಟಿ ಸುರಿದಿದೆ. ಇವರ ಆಗಮನ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಬಲ ಹೆಚ್ಚಿಸಿದೆ ಎಂದು ಫ್ರಾಂಚೈಸಿ ಬೀಗಿತ್ತು. ಆದ್ರೆ, ಇವ್ರ ಅಸಲಿ ಸಾಮರ್ಥ್ಯ ಟೀಮ್​ ಇಂಡಿಯಾ ಎದುರಿನ ಮೊದಲ ಟಿ20ಯಲ್ಲೇ ಅನಾವರಣಗೊಂಡಿದೆ.
ಆರ್​​ಸಿಬಿ ಖರೀದಿಸಿರೋ ಫಿಲ್​ ಸಾಲ್ಟ್​ ಕಳೆದ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಕೆಕೆಆರ್​​​ ಪರ ರನ್​ ಸುನಾಮಿ ಸೃಷ್ಟಿಸಿದ್ರು. ಆದ್ರೆ, ಆ ಸೀಸನ್​ನಲ್ಲೂ ಸ್ಪಿನ್ನರ್​ಗಳ ಎದುರು ಸಾಲ್ಟ್​ ಆಟ ನಡೆದಿರಲಿಲ್ಲ. ಸ್ಪಿನ್​​ ಎದುರು ಕೇವಲ 27.50 ಸರಾಸರಿಯನ್ನ ಸಾಲ್ಟ್​ ಹೊಂದಿದ್ರು.
ಇಂಡಿಯನ್​ ಕಂಡಿಷನ್​ ಹೊಂದಿಕೊಳ್ಳೋಕೆ ಪರದಾಟ
ಲಿವಿಂಗ್​​ಸ್ಟೋನ್​ ಕತೆಯೂ ಇದೇ. ಇಂಡಿಯಾದಲ್ಲಿ ಆಡಿದ 30 ಟಿ20 ಇನ್ನಿಂಗ್ಸ್​ಗಳಲ್ಲಿ 12 ಬಾರಿ ಸ್ಪಿನ್​ ಬಲೆಗೆ ಬಿದ್ದಿದ್ದಾರೆ. ಕೇವಲ 21.83ರ ರನ್​ಗಳಿಕೆಯ ಸರಾಸರಿ ಹೊಂದಿದ್ದಾರೆ. ಇನ್ನು, ಈ ಯುವ ಆಟಗಾರ ಜೇಕಬ್​ ಬೆತೆಲ್​ ಇಂಡಿಯನ್​ ಕಂಡಿಷನ್​ ಹೊಂದಿಕೊಳ್ಳೋಕೆ ಪರದಾಟ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/Phil-Salt-RCB.jpg)
ಫಿಲ್​ ಸಾಲ್ಟ್​, ಲಿವಿಂಗ್​ಸ್ಟೋನ್​​, ಜೇಕಬ್​ ಬೆತೆಲ್​ ಈ ಮೂವರು ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳ ಪೈಕಿ ಇಬ್ಬರಿಗೆ ಆರ್​​ಸಿಬಿಯ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದು ಪಕ್ಕಾ. ಯಾಕಂದ್ರೆ, ಇವ್ರನ್ನ ಬಿಟ್ರೆ ತಂಡದಲ್ಲಿ ಸ್ಟಾರ್​ ಬ್ಯಾಟ್ಸ್​ಮನ್​ಗಳಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಫ್ಲಾಪ್​ ಆದ ಇವ್ರು, ಸರಣಿಯ ಉಳಿದ ಪಂದ್ಯಗಳಲ್ಲಿ ಪರ್ಫಾಮ್​ ಮಾಡಿದ್ರೆ ಒಕೆ. ಇಲ್ಲದಿದ್ರೆ, ಆರ್​​ಸಿಬಿಗೆ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us