/newsfirstlive-kannada/media/post_attachments/wp-content/uploads/2024/12/KKR-Team.jpg)
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಆಟಗಾರರನ್ನು ಖರೀದಿ ಮಾಡಿದೆ. ಕಳೆದ ಸೀಸನ್ನಲ್ಲಿ ಕ್ಯಾಪ್ಟನ್ ಆಗಿದ್ದ ಶ್ರೇಯಸ್ ಅಯ್ಯರ್ ಅವರನ್ನೇ ತಂಡದಿಂದ ಬಿಟ್ಟುಕೊಡಲಾಗಿದೆ. ಇವರು ಪಂಜಾಬ್ ಪಾಲಾಗಿದ್ದು, ಕೆಕೆಆರ್ ತಂಡದಲ್ಲಿ ಕ್ಯಾಪ್ಟನ್ಸಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.
ಮುಂದಿನ ಸೀಸನ್ಗೆ ಕೆಕೆಆರ್ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಕೆಕೆಆರ್ನಲ್ಲಿ ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ ರೀತಿಯ ಸ್ಟಾರ್ ಆಟಗಾರರ ದಂಡೇ ಇದೆ. ಈ ಪೈಕಿ ಯಾರಿಗೆ ಕೆಕೆಆರ್ ತಂಡದ ಕ್ಯಾಪ್ಟನ್ಸಿ ಸಿಗಲಿದೆ ಅನ್ನೋ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.
ಕ್ಯಾಪ್ಟನ್ಸಿಗಾಗಿ ಮೂವರ ಮಧ್ಯೆ ಪೈಪೋಟಿ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ಸಿಗಾಗಿ ಮೂವರ ಮಧ್ಯೆ ಭಾರೀ ಪೈಪೋಟಿ ಇದೆ. ಈ ಮೂವರು ಆಟಗಾರರು ಭಾರತೀಯರು ಎಂಬುದೇ ವಿಶೇಷ. ಅವರು ಮತ್ಯಾರು ಅಲ್ಲ ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್. ಕೆಕೆಆರ್ ಮುಂದಿನ ವರ್ಷಗಳ ಕಾಲ ಕ್ಯಾಪ್ಟನ್ ಆಗಬಲ್ಲ ಆಟಗಾರನಿಗಾಗಿ ಎದುರು ನೋಡುತ್ತಿದೆ.
ಕೆಕೆಆರ್ ಮೊದಲ ಆಯ್ಕೆ ಇವರೇ!
ಅಜಿಂಕ್ಯ ರಹಾನೆ ಕೆಕೆಆರ್ ತಂಡದ ಕ್ಯಾಪ್ಟನ್ ಆಗಲು ಮೊದಲ ಆಯ್ಕೆ. ಇವರು ಭಾರತದ ಅನುಭವಿ ಬ್ಯಾಟರ್ ಹಾಗೂ ಟೀಮ್ ಇಂಡಿಯಾ ಕ್ಯಾಪ್ಟನ್ ಕೂಡ ಆಗಿದ್ರು. ಈ ಹಿಂದೆ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಲೀಡ್ ಮಾಡಿದ್ರು. ಈಗ ಕೆಕೆಆರ್ ತಂಡದ ಕ್ಯಾಪ್ಟನ್ ಆಗೋ ಅವಕಾಶ ಒದಗಿ ಬಂದಿದೆ.
2ನೇ ಆಯ್ಕೆ ವೆಂಕಟೇಶ್ ಅಯ್ಯರ್
ಈ ಬಾರಿ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಬಿಡ್ ಮಾಡಲು ಕೆಕೆಆರ್ ಸಾಕಷ್ಟು ಕಸರತ್ತು ಮಾಡಿತ್ತು. ಆರ್ಸಿಬಿ ತಂಡದ ಪೈಪೋಟಿ ಮಧ್ಯೆಯೂ ಕೆಕೆಆರ್ ಆರ್ಟಿಎಂ ಮೂಲಕ 23.75 ಕೋಟಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಬಿಡ್ ಮಾಡಿತ್ತು. ಹೀಗಾಗಿ ಕೆಕೆಆರ್ ನಾಯಕನ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಹೆಸರು ಕೇಳಿ ಬರುತ್ತಿದೆ.
ರಿಂಕು ಸಿಂಗ್ಗೂ ಅವಕಾಶ
ಕೆಕೆಆರ್ ರಿಂಕು ಸಿಂಗ್ ಅವರನ್ನು ನಾಯಕನ ಸ್ಥಾನಕ್ಕೆ 3ನೇ ಆಯ್ಕೆಯಾಗಿ ನೋಡುತ್ತಿದೆ. ರಿಂಕು ಟೀಮ್ ಇಂಡಿಯಾ ಪರ ಕೂಡ ಮಿಂಚಿದ್ದು, ಯುಪಿ ಟಿ20 ಲೀಗ್‌ನಲ್ಲಿ ನಾಯಕರಾಗಿದ್ರು. ಇವರನ್ನು ಕೆಕೆಆರ್ 13 ಕೋಟಿ ನೀಡಿ ಉಳಿಸಿಕೊಂಡಿದೆ.
ಇದನ್ನೂ ಓದಿ:ರೋಹಿತ್ ಕೆಟ್ಟ ಫಾರ್ಮ್ನಲ್ಲಿದ್ರೂ ಆಡಿಸಬೇಕಿತ್ತು; ತಂಡದಿಂದ ಕೈ ಬಿಟ್ಟಿದ್ದಕ್ಕೆ BCCI ವಿರುದ್ಧ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ