/newsfirstlive-kannada/media/post_attachments/wp-content/uploads/2025/01/SURYA-KUMAR-YADAV.jpg)
ಹರಿಯಾಣ ವಿರುದ್ಧ ನಡೆಯಲಿರೋ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಬಲಿಷ್ಠ ಮುಂಬೈ ತಂಡ ಪ್ರಕಟವಾಗಿದೆ. ಮುಂಬೈ ತಂಡದಲ್ಲಿ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು, ಚೌಧರಿ ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ನಡೆಯಲಿರೋ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಸಂಜಯ್ ಪಾಟೀಲ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಈ ಸಮಿತಿಯಲ್ಲಿ ರವಿ ಠಾಕರ್, ಜಿತೇಂದ್ರ ಠಾಕ್ರೆ, ಕಿರಣ್ ಪವಾರ್ ಮತ್ತು ವಿಕ್ರಾಂತ್ ಯೆಲಿಗೆಟ್ಟಿ ಕೂಡ ಇದ್ದರು.
ಅಜಿಂಕ್ಯ ರಹಾನೆಗೆ ಕ್ಯಾಪ್ಟನ್ಸಿ
ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ಮುಂಬೈ ತಂಡದ ನಾಯಕತ್ವದ ನಿರೀಕ್ಷೆಯಲ್ಲಿದ್ದರು. ಇವರಿಗೆ ಎಂಸಿಎ ಶಾಕ್ ಕೊಟ್ಟಿದ್ದು, ಮತ್ತೆ ನಾಯಕತ್ವ ಪಟ್ಟವನ್ನು ರಹಾನೆಗೆ ಕಟ್ಟಲಾಗಿದೆ.
ರಹಾನೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬೈ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮೇಘಾಲಯವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿತ್ತು. ಸೂರ್ಯ ಮತ್ತು ಶಿವಂ ದುಬೆ ಇಬ್ಬರೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಭಾಗವಾಗಿದ್ದರು. ಈ ಬೆನ್ನಲ್ಲೇ ಇಬ್ಬರು ರಹಾನೆ ನೇತೃತ್ವದ ಮುಂಬೈ ತಂಡ ಸೇರಿದ್ದಾರೆ.
ಮುಂಬೈ ತಂಡ ಹೀಗಿದೆ!
ಅಜಿಂಕ್ಯ ರಹಾನೆ (ನಾಯಕ), ಆಯುಷ್ ಮ್ಹಾತ್ರೆ, ಅಂಗ್‌ಕ್ರಿಶ್ ರಘುವಂಶಿ, ಅಮೋಘ್ ಭಟ್ಕಳ್, ಸೂರ್ಯಕುಮಾರ್ ಯಾದವ್, ಸಿದ್ಧೇಶ್ ಲಾಡ್, ಶಿವಂ ದುಬೆ, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಜ್, ಶಾರ್ದೂಲ್ ಠಾಕೂರ್, ಶಾರ್ದೂಲ್ ಠಾಕೂರ್, ತಾಕೂರ್ , ಮೋಹಿತ್ ಅವಸ್ಥಿ, ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಅಥರ್ವ ಅಂಕೋಲೆಕರ್, ಹರ್ಷ ತನ್ನಾ.
ಇದನ್ನೂ ಓದಿ:ಬಿಸಿಸಿಐನಿಂದ ಬಿಗ್ ಶಾಕ್; ಟೀಮ್ ಇಂಡಿಯಾದಿಂದಲೇ ಹೊರಬಿದ್ದ ರವೀಂದ್ರ ಜಡೇಜಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ