ಬರೋಬ್ಬರಿ 7 ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ
ಮುಂದಿನ ವರ್ಷ ನಡೆಯಲಿರೋ ಈ ಟೂರ್ನಿ ಭಾರೀ ತಯಾರಿ..!
ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ಗೆ ಬಿಗ್ ಶಾಕ್
ಬರೋಬ್ಬರಿ 7 ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರೋ ಈ ಟೂರ್ನಿಗೆ ಕೇವಲ 6 ತಿಂಗಳು ಮಾತ್ರ ಬಾಕಿ ಇದೆ. ಐಸಿಸಿ ಮೆಗಾ ಟೂರ್ನಿಗೆ ಈಗಿನಿಂದಲೇ ಟೀಮ್ ಇಂಡಿಯಾ ಭಾರೀ ತಯಾರಿ ನಡೆಸಿಕೊಂಡಿದೆ. ಇದರ ಬಗ್ಗೆ ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಾತಾಡಿದ್ದಾರೆ.
ಈ ಸಂಬಂಧ ಮಾತಾಡಿದ ದಿನೇಶ್ ಕಾರ್ತಿಕ್, ರೋಹಿತ್ ಜೊತೆಯಲ್ಲಿ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಬಹುದು. ಜೈಸ್ವಾಲ್‌ಗೆ ಬ್ಯಾಕಪ್ ಓಪನರ್ ಆಗಲು ಉತ್ತಮ ಅವಕಾಶವಿದೆ. ಒಂದು ವೇಳೆ ಶುಭ್ಮನ್ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡದಿದ್ರೆ ಜೈಸ್ವಾಲ್‌ಗೆ ಅವಕಾಶ ನೀಡಲಾಗುವುದು ಎಂದರು.
ಗಿಲ್ ಕಳಪೆ ಪ್ರದರ್ಶನ
ಕಳೆದ ವರ್ಷದ ಆರಂಭದಿಂದ ಸುಮಾರು 47 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜತೆ ಶುಭ್ಮನ್ ಗಿಲ್ ಓಪನಿಂಗ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಗಿಲ್ ಫಾರ್ಮ್ ಕಳೆದುಕೊಂಡಿದ್ದಾರೆ. ಅತ್ತ ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಲ್ಲೂ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇತ್ತ ಫಾರ್ಮ್ ಕಂಡು ಕೊಳ್ಳಲು ಗಿಲ್ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ.
ಬ್ಯಾಕಪ್ ಓಪನರ್ ಆಗಿ ಜೈಸ್ವಾಲ್
ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಆರಂಭ ಮಾಡಿದ್ದಾರೆ. ಟಿ20 ಮತ್ತು ಟೆಸ್ಟ್ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ಹೀಗೆ ಗಿಲ್ ಕಳಪೆ ಫಾರ್ಮ್ ಮುಂದುವರಿದರೆ, ಜೈಸ್ವಾಲ್ ಏಕದಿನ ಕ್ಯಾಪ್ ಧರಿಸೋದು ಪಕ್ಕಾ.
ಇದನ್ನೂ ಓದಿ: ಕೊಹ್ಲಿ ಆಪ್ತನಿಗೆ ಮೋಸ ಮಾಡಿದ ಕ್ಯಾಪ್ಟನ್ ರೋಹಿತ್.. ಸ್ಟಾರ್ ಆಟಗಾರನಿಗೆ ಮಣೆ ಹಾಕಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ