newsfirstkannada.com

ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಪುಷ್ಪ 2 ಚಿತ್ರತಂಡದಿಂದ ಇಂದು ಬಿಗ್‌ ಅನೌನ್ಸ್‌; ಏನದು?

Share :

Published April 8, 2024 at 6:13am

Update April 8, 2024 at 6:19am

    ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಧಮಾಕ

    ಪುಷ್ಪ 2 ಸೀಕ್ವೆಲ್ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರೋ ಫ್ಯಾನ್ಸ್​

    ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪುಷ್ಪ 2 ದಿ ರೂಲ್

ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾ ಆಫೀಸ್ ಉಡೀಸ್​ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾಗಾಗಿ ಎಲ್ಲಾ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಅದರಲ್ಲೂ ಪ್ಯಾನ್ ಇಂಡಿಯಾ ಬ್ಲಾಕ್​ ಬಸ್ಟರ್ ಪುಷ್ಪ ಸಿನಿಮಾ ಸೀಕ್ವೆಲ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು, ಬಹುನೀರಿಕ್ಷಿತ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್​ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದೀಗ ಪುಷ್ಪ 2: ದಿ ರೂಲ್ ಸಿನಿಮಾ ತಂಡದಿಂದ ಹೊಸ ಪೋಸ್ಟರ್​​ವೊಂದನ್ನು ರಿಲೀಸ್ ಮಾಡಿದ್ದಾರೆ. ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ. ಇಂದು ಪುಷ್ಪ 2 ಸಿನಿಮಾದ ಟ್ರೇಲರ್​ ರಿಲೀಸ್ ಆಗಲಿದೆ. ಟೀಸರ್​ ರಿಲೀಸ್​ಗೆ ಮುಹೂರ್ತ ಕೂಡ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಅಬ್ಬಾ.. ಬಿಸಿಲಿಗೆ ಬಸವಳಿದ ರಾಜ್ಯದ ಜನತೆಗೆ ಸಿಹಿ ಸುದ್ದಿ; ತಂಪೆರದ ಮಳೆರಾಯ!

View this post on Instagram

A post shared by Allu Arjun (@alluarjunonline)

ಹೌದು, ಬಹುನೀರಿಕ್ಷಿತ ಪುಷ್ಪ 2 ಸಿನಿಮಾ ಟೀಸರ್​ ಇಂದು ಬೆಳಗ್ಗೆ 11.07ಕ್ಕೆ ರಿಲೀಸ್​ ಆಗಲಿದೆ. ಸದ್ಯ ಅಲ್ಲು ಅರ್ಜುನ್​ ನಟನೆಯ ಪುಷ್ಪ 2 ಸಿನಿಮಾದ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್​ ಕೊಡಲಿ ಹಿಡಿದು ಸ್ಟೈಲಿಶ್​ ಆಗಿ​ ಪೋಸ್ ಕೊಟ್ಟಿದ್ದಾರೆ. ಇನ್ನು ಪೋಸ್ಟರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ದೊಡ್ಡ ಪರದೆ ಮೇಲೆ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ 2 ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಪುಷ್ಪ 2 ಚಿತ್ರ ತಂಡ ಎಲ್ಲ ರೀತಿಯಲ್ಲಿ ತಯಾರಿ ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಪುಷ್ಪ 2 ಚಿತ್ರತಂಡದಿಂದ ಇಂದು ಬಿಗ್‌ ಅನೌನ್ಸ್‌; ಏನದು?

https://newsfirstlive.com/wp-content/uploads/2024/04/pushpa-2.jpg

Load More