Advertisment

ದರ್ಶನ್​ ಗ್ಯಾಂಗ್​ನಿಂದ ನಡೆದಿದೆ ಎನ್ನಲಾದ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಮಹತ್ವದ ಸುಳಿವು!

author-image
Ganesh Nachikethu
Updated On
ದರ್ಶನ್​ ಗ್ಯಾಂಗ್​ನಿಂದ ನಡೆದಿದೆ ಎನ್ನಲಾದ ಕೇಸ್​ಗೆ ಮತ್ತೊಂದು ಟ್ವಿಸ್ಟ್​​.. ಮಹತ್ವದ ಸುಳಿವು!
Advertisment
  • ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​
  • ಕೊಲೆ ಕೇಸಲ್ಲಿ ದರ್ಶನ್​ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಮತ್ತೊಂದು ಸುಳಿವು
  • ಪಟ್ಟಣಗೆರೆ ಶೆಡ್​​ಗೆ ದರ್ಶನ್​ರನ್ನು ಕರೆದೊಯ್ದು ಮಹಜರು ನಡೆಸಿದ ಪೊಲೀಸ್ರು

ಬೆಂಗಳೂರು: ಅಭಿಮಾನಿಗಳ ಒಡೆಯ.. ಯಜಮಾನ ದರ್ಶನ್ ಕಸ್ಟಡಿಯಲ್ಲಿದ್ದು ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸ್ತಿದ್ದಾರೆ. ಮೊದಲು ಸುಮನಹಳ್ಳಿ ಬ್ರಿಡ್ಜ್ ಬಳಿ ಶವ ಎಸೆದಿದ್ದ ಜಾಗಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ.

Advertisment

ಪಟ್ಟಣಗೆರೆ ಶೆಡ್​​ಗೆ ದರ್ಶನ್, ಪವಿತ್ರಾ ಕರೆದೊಯ್ದು ಮಹಜರು!

ಬಳಿಕ ಕೊಲೆ ನಡೆದಿದೆ ಎನ್ನಲಾಗಿರುವ ಪಟ್ಟಣಗೆರೆಯಲ್ಲಿರುವ ಶೆಡ್​​ಗೆ ನಟ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಲಾಗಿದೆ. ಸ್ಥಳ ಮಹಜರು ವೇಳೆ ದರ್ಶನ್, ಪವಿತ್ರಾಗೌಡ ಶೆಡ್​​ನ ಹೊರಗೆ ಕೈ ಕಟ್ಟಿಕೊಂಡು ನಿಂತಿರೋದು ಕಂಡು ಬಂದಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಎಫ್​ಎಸ್​ಎಲ್​ ತಂಡ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದು ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಿದೆ.

publive-image

ಘೋರ.. ಭೀಕರ.. ಶವ ಎಸೆದ ಸ್ಥಳದಲ್ಲಿ ಹಂತಕರು!

ಸ್ಯಾಂಡಲ್​ವುಡ್​ನ ‘ಸರದಾರ’ ಕಾನೂನಿನ ‘ಚೌಕ’ಟ್ಟು ಮೀರಿದ್ದಾರೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್​​ಗೆ ಕರಿಯನ ಮನುಷ್ಯತ್ವ ಕೆರಳಿದೆ. ಯುವಕನ ಮೇಲೆ ತೋರಿದ್ದ ‘ಶೌರ್ಯ’ ಹಣೆಬರಹ ಬದಲಿಸಿ ಜೈಲೊಳಗೆ ಬಂಧಿಸಿದೆ. 6 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ನಾನವನಲ್ಲ, ನಂಗೇನೂ ಗೊತ್ತಿಲ್ಲ ಅಂತಿರುವ ‘ಗಜ’ ಗಾಂಭೀರ್ಯದ ನಡೆ ತೋರ್ತಿದ್ದಾರೆ. ಶೆಡ್​​ವೊಂದರಲ್ಲಿ ಬಡಪಾಯಿ ಮೇಲೆ ಕಲಾಸಿಪಾಳ್ಯ ಗ್ಯಾಂಗ್ ಅಟ್ಟಹಾಸ ಮೆರೆದಿತ್ತು.. ಕಗ್ಗತ್ತಲ ರಾತ್ರಿಯಲ್ಲಿ ಡಿ ಬಾಸ್​​ ಗ್ಯಾಂಗ್​​ನ ಮೂವರು ಕಿರಾತಕರು​ ಜೀಪ್​​​ನಲ್ಲಿ ಶವ ಸಾಗಿಸಿ ರಾಜಕಾಲುವೆ ಬಳಿ ಡಂಪ್ ಮಾಡಿ ಹೋಗಿದ್ದರು. ತನಿಖೆ ಮುಂದುವರಿಸಿರುವ ಪೊಲೀಸರು ರೇಣುಕಾಸ್ವಾಮಿ ಮೃತದೇಹ ಎಸೆದಿದ್ದ ಸುಮನಹಳ್ಳಿ ಬ್ರಿಡ್ಜ್​ ಬಳಿಗೆ ನಾಲ್ವರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬೆಂಗಳೂರು ಕಮಿಷನರ್ ಭೇಟಿ

ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಮುನ್ನ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಭೇಟಿ ಸುಮಾರು 2 ಗಂಟೆಗಳ ಕಾಲ ಮಾಹಿತಿ ಪಡೆದಿದ್ದಾರೆ. ಸಾಕ್ಷ್ಯಗಳು, ಆರೋಪಿಗಳ ಹೇಳಿಕೆಗಳು, ಟೆಕ್ನಿಕಲ್ ಎವಿಡೆನ್ಸ್​​ ಹಾಗೂ ದರ್ಶನ್, ಪವಿತ್ರಾಗೌಡ ಪಾತ್ರ ಏನು ಎಂಬೆಲ್ಲಾ ವಿಷಯಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.

Advertisment

ಒಟ್ಟಾರೆ, ರೇಣುಕಾಸ್ವಾಮಿ ಮೇಲೆ ಬೌನ್ಸರ್​​ಗಳ ಬಲವಾದ ಪಂಚ್​​​​ ಆತನ ಜೀವ ತೆಗೆದಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಪ್ರಕರಣ ಕುರಿತು ಮತ್ತಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ.

ಇದನ್ನೂ ಓದಿ:VIDEO: ದರ್ಶನ್​​ ಮತ್ತು ಗ್ಯಾಂಗ್​​ನಿಂದ ಕೊಲೆ ಎನ್ನಲಾದ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಮಹತ್ವದ ಸಾಕ್ಷಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment