Advertisment

‘ನಟಿ ಸೌಂದರ್ಯ ಜೀವ ತೆಗೆದಿದ್ದು ಇವರೇ’- ಸ್ಟಾರ್​​ ನಟ ಮೋಹನ್​​ ಬಾಬು ವಿರುದ್ಧ ಕೇಸ್​​

author-image
Ganesh Nachikethu
Updated On
ಮೋಹನ್ ಬಾಬು ಮನೆ ರಾಮಾಯಣ.. ಚಂದ್ರಮುಖಿ ಬಂಗಲೆ ಮುಂದೆ ಮನೋಜ್ ಪ್ರತಿಭಟನೆ ಯಾಕೆ?
Advertisment
  • ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ ಸಾವಿನ ಕೇಸ್​​
  • ಇದು ಅಪಘಾತವಲ್ಲ ಕೊಲೆ ಎಂದು ಪೊಲೀಸ್​​ ದೂರು!
  • ನಟ ಮೋಹನ್ ಬಾಬು ವಿರುದ್ಧ ದಾಖಲಾಯ್ತು ಕೇಸ್​​​

ಹೈದರಾಬಾದ್​: ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ. ಇವರು 2004 ಏಪ್ರಿಲ್ 7ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಕೇಸ್​​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಇದು ಅಪಘಾತವಲ್ಲ ಕೊಲೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ನಟಿ ಸೌಂದರ್ಯ ಅವರನ್ನು ಕೊಲೆ ಮಾಡಲಾಗಿದೆ ಎಂದು ಸ್ಟಾರ್ ನಟನ ವಿರುದ್ಧ ದೂರು ನೀಡಲಾಗಿದೆ.

Advertisment

ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬು. ಇವರು ಸದಾ ಒಂದಲ್ಲ ಮತ್ತೊಂದು ವಿವಾದದಿಂದ ಸುದ್ದಿ ಆಗುತ್ತಲೇ ಇರ್ತಾರೆ. ಮೋಹನ್ ಬಾಬು ಮಕ್ಕಳ ಆಸ್ತಿ ವಿವಾದ ಬೀದಿಗೆ ಬಂದಿತ್ತು. ಸ್ವಂತ ಮಗನೇ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ನಟಿ ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದು ದೂರು ನೀಡಿದ್ದಾರೆ. ಈ ಕೇಸ್​​ ಮೋಹನ್​ ಬಾಬುಗೆ ಸಂಕಷ್ಟ ತಂದೊಡ್ಡಿದೆ.

ದೂರಿನಲ್ಲೇನಿದೆ?

ತೆಲಂಗಾಣದ ಖಮ್ಮಂ ಜಿಲ್ಲೆ ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಎಂಬಾತ ನಟ ಮೋಹನ್​ ಬಾಬು ವಿರುದ್ಧ ದೂರು ನೀಡಿದ್ದಾರೆ. ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದಿದ್ದಾರೆ. ಮೋಹನ್ ಬಾಬು ವಾಸವಿರೋ ಹೈದರಾಬಾದಿನ ಜಲಪಲ್ಲಿ ಬಳಿಯ ಟೌನ್​ಶಿಪ್​ ಸೌಂದರ್ಯಾ ಅವರಿಗೆ ಸೇರಿದ್ದು. ಕೂಡಲೇ ಮೋಹನ್ ಬಾಬು ಅವರನ್ನು ಖಾಲಿ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲ ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಶಿವ ಶಂಕರ. ಈ ಸಿನಿಮಾದ ನಾಯಕ ಮೋಹನ್​ ಬಾಬು. ಅದೇ ಸಮಯದಲ್ಲಿ ಸೌಂದರ್ಯ ಜಲಪಲ್ಲಿ ಬಳಿ 6 ಎಕರೆ ಜಮೀನು ಖರೀದಿ ಮಾಡಿದ್ದರು. ಈ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಸೌಂದರ್ಯ ಕಡೆಯಿಂದ ಆ ಜಮೀನು ಖರೀದಿ ಮಾಡಲು ಮುಂದಾದರು. ಅದಕ್ಕೆ ಸೌಂದರ್ಯ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Advertisment

ಇದನ್ನೂ ಓದಿ:ಚಾಂಪಿಯನ್ಸ್​​​ ಟ್ರೋಫಿ ಬೆನ್ನಲ್ಲೇ ಕ್ಯಾಪ್ಟನ್ಸಿ ಆಫರ್​​​; ನನಗೆ ಬೇಡ ಎಂದ KL ರಾಹುಲ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment