newsfirstkannada.com

ಹಣಕ್ಕಾಗಿ BJP MLA ಗೋಪಾಲಯ್ಯಗೆ ಕೊಲೆ ಬೆದರಿಕೆ ಕೇಸ್​ಗೆ ಬಿಗ್​​​​ ಟ್ವಿಸ್ಟ್​​; ಅಸಲಿಗೆ ನಡೆದಿದ್ದೇ ಬೇರೆ!

Share :

Published February 14, 2024 at 8:38pm

Update February 14, 2024 at 8:39pm

    ಮಾಜಿ ಸಚಿವ ಕೆ. ಗೋಪಾಲಯ್ಯಗೆ ಜೀವ ಬೆದರಿಕೆ!

    ಹಣಕ್ಕಾಗಿ ಕೊಲೆ ಬೆದರಿಕೆ ಹಾಕಿದ್ದ ಮಾಜಿ ಕಾರ್ಪೊರೇಟರ್​​​

    ಪದ್ಮರಾಜ್​ನನ್ನು ಅರೆಸ್ಟ್​ ಮಾಡುವಂತೆ ಸ್ಪೀಕರ್​ ಖಡಕ್​ ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಾಜಿ ಸಚಿವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಜೀವ ಬೆದರಿಕೆ ಹಾಕಿರೋದು ಯಾರೋ ಕಿಡಿಗೇಡಿಯಲ್ಲ.. ಬದಲಾಗಿ ಮಾಜಿ ಕಾರ್ಪೊರೇಟರ್​.. ಈ ವಿಷ್ಯ ಸದನದಲ್ಲಿ ಪ್ರಸ್ತಾಪಿಸಿ, ನನಗೆ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವಂತೆ ಮಾಜಿ ಸಚಿವ ಗೋಪಾಲಯ್ಯ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಕ್ಕೆ ಸ್ಪೀಕರ್​ ಚಾಟಿ ಬೀಸುತ್ತಿದ್ದಂತೆ ಮಾಜಿ ಕಾರ್ಪೊರೇಟರ್​ನ ಬಂಧನವಾಗಿದ್ದು, ಜಾಮೀನಿನ ಮೇಲೆ ರಿಲೀಸ್​ ಆಗಿದ್ದಾರೆ.

ಮಾಜಿ ಸಚಿವ ಕೆ. ಗೋಪಾಲಯ್ಯಗೆ ಜೀವ ಬೆದರಿಕೆ
ಮಾಜಿ ಕಾರ್ಪೊರೇಟರ್ ಪದ್ಮರಾಜ್​ ಬಂಧನ

ಮಾಜಿ ಸಚಿವ ಕೆ.ಗೋಪಾಲಯ್ಯ.. ಬೆಂಗಳೂರಿನ ಮಹಾಲಕ್ಷ್ಮಿಲೇಔಟ್​ ಕ್ಷೇತ್ರದ ಶಾಸಕರು. ಸದ್ಯ ಇವರಿಗೆ ಮಾಜಿ ಕಾರ್ಪೋರೇಟರ್​ ಒಬ್ಬರು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಆತಂಕದ ಕಾರ್ಮೋಡವನ್ನು ಸೃಷ್ಟಿಸಿದೆ.

ಬೆಂಗಳೂರಿನ ಬಸವೇಶ್ವರನಗರ ಮಾಜಿ ಕಾರ್ಪೊರೇಟರ್ ಪದ್ಮರಾಜ್, ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಮಾಜಿ ಸಚಿವ ಗೋಪಾಲಯ್ಯರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ರಂತೆ.. ಹಾಗೂ ಹಣ ಕೊಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳಿಂದ ಪದ್ಮರಾಜ್​ ನಿಂದನೆ ಮಾಡಿದ್ರಂತೆ. ಈ ಸಂಬಂಧ ಕಳೆದ ರಾತ್ರಿಯೇ ಗೋಪಾಲಯ್ಯನವರು, ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಪದ್ಮರಾಜ್​ ವಿರುದ್ಧ ದೂರು ನೀಡಿದ್ದಾರೆ.

ಅಧಿವೇಶನದಲ್ಲೂ ಕೊಲೆ ಬೆದರಿಕೆ ವಿಷಯ ಪ್ರಸ್ತಾಪ

ಮಾಜಿ ಸಚಿವ ಕೆ. ಗೋಪಾಲಯ್ಯಗೆ ಮಾಜಿ ಕಾರ್ಪೊರೇಟರ್ ಪದ್ಮರಾಜು ಜೀವ ಬೆದರಿಕೆ ಹಾಕಿರುವ ವಿಚಾರ ಸದನದಲ್ಲೂ ಪ್ರತಿಧ್ವನಿಸಿತು. ವಿಧಾನಸಭೆ ಕಲಾಪ ಆರಂಭದ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಪದ್ಮರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು.. ಆತ ಈ ಹಿಂದೆಯೂ ಹಲವು ಶಾಸಕರಿಗೆ ಬೆದರಿಕೆ ಹಾಕಿದ್ದಾನೆ. ಆತನನ್ನು ಗಡಿಪಾರು ಮಾಡಬೇಕು, ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸದನದಲ್ಲಿ ಒತ್ತಾಯಿಸಿದ್ರು.

ಗೋಪಾಲಯ್ಯನವರ ಆರೋಪಕ್ಕೆ ಉತ್ತರ ನೀಡಿದ ಗೃಹಸಚಿವರು, ಪದ್ಮರಾಜ್​ನನ್ನು ಅರೆಸ್ಟ್​ ಮಾಡಲು ಪೊಲೀಸರು ಅವರ ಮನೆಯ ಬಾಗಿಲ ಬಳಿಯೇ ಕಾಯ್ತಿದ್ದಾರೆ ಎಂದು ಉತ್ತರಿಸಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಏನು ಗಾರ್ಡ್ ಆಫ್ ಆನರ್ ಮಾಡಿ ಬಂಧಿಸಬೇಕೇ ಎಂದು ಸರ್ಕಾರ ವಿರುದ್ಧ ಮುಗಿಬಿದ್ರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್​ ಯು.ಟಿ.ಖಾದರ್​, ಕಳೆದ ರಾತ್ರಿಯೇ ಘಟನೆ ನಡೆದಿದ್ರೂ ಇದುವರೆಗೂ ಯಾಕೆ ಕ್ರಮ ಆಗಿಲ್ಲ ಎಂದು ಸರ್ಕಾರಕ್ಕೆ ಬಿಸಿಮುಟ್ಟಿಸಿದ್ರು. ಕೂಡಲೇ ಪದ್ಮರಾಜ್​ನನ್ನು ಅರೆಸ್ಟ್​ ಮಾಡುವಂತೆ ಗೃಹ ಇಲಾಖೆ ಮತ್ತು ಪೊಲೀಸರಿಗೆ ಖಡಕ್​ ಸೂಚನೆ ನೀಡಿದ್ರು.

ನಿನ್ನೆ ರಾತ್ರಿಯಾದರೂ ಕೂಡ ಇನ್ನೂ ಕೂಡ ಯಾಕೆ ಅರೆಸ್ಟ್​ ಮಾಡಲಿಲ್ಲ ಅಂತ ಇವತ್ತು ನಾವು ಹೇಳಬೇಕಾಗುತ್ತೆ. ಒಂದು ಕೂಡಲೇ ಆತನನ್ನು ಅರೆಸ್ಟ್​ ಮಾಡಿಸಬೇಕು. ಇವತ್ತು ನಾವು ಸಂಜೆ ಒಳಗೆ, ಮಧ್ಯಾಹ್ನದ ಒಳಗಡೆ.. ಅಥವಾ ಅಲ್ಲಿ ಯಾರು ಇನ್ಸ್​ಪೆಕ್ಟರ್​ ಇದ್ದಾರೋ ಅವರನ್ನು ಸಸ್ಪೆಂಡ್​ ಮಾಡಬೇಕು.. ಎರಡರಲ್ಲಿ ಒಂದು ಆಗಬೇಕು. ಅವನು ಬರಲಿ. ಬಂದು ಕೂತುಕೊಂಡ ಮೇಲೆ ಆಗೊಂದು ವಿಚಾರ. ಎಲ್ಲರಿಗೂ ಹೀಗೆ ಆದ್ರೆ ಪರಿಸ್ಥಿತಿ ಏನಾಗಬಹುದು. ತಾವು ಸರ್ಕಾರವಾಗಿ ತುಂಬ ಖಡಕ್​ ಸಂದೇಶವನ್ನು ಕೊಡಬೇಕು ಎಂದರು.

ಸ್ಪೀಕರ್ ವಾರ್ನಿಂಗ್​ ಬೆನ್ನಲ್ಲೇ ಮಾಜಿ ಕಾರ್ಪೋರೇಟರ್​ ಅರೆಸ್ಟ್​

ಸ್ಪೀಕರ್​ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಂತೆ ಗೃಹಸಚಿವ ಪರಮೇಶ್ವರ್​, ಪದ್ಮರಾಜ್​ರನ್ನು ಬಂಧನ ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ರು. ಪದ್ಮರಾಜ್​ನನ್ನು ಅರೆಸ್ಟ್​ ಮಾಡಿದ ಪೊಲೀಸರು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಮಾಡಿಸಿ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಕರೆತಂದ್ರು ವಿಚಾರಣೆ ನಡೆಸಿದ್ರು. ಬಳಿಕ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಪದ್ಮರಾಜ್ ನನ್ನ ಹಾಜರು ಪಡಿಸಿದ್ರು.

ಇನ್ನು ಜೀವ ಬೆದರಿಕೆ ಆರೋಪದಲ್ಲಿ ಅರೆಸ್ಟ್​ ಆಗಿರುವ ಆರೋಪಿ ಪದ್ಮರಾಜ್​ ಕೂಡ, ಗೋಪಾಲಯ್ಯ ವಿರುದ್ಧ ಆರೋಪ ಮಾಡಿದ್ದು, ಬಿಜೆಪಿ ಟಿಕೆಟ್‌ ಕೊಡಿಸೋದಾಗಿ ತನ್ನಿಂದ 15 ಲಕ್ಷ ಕೇಳ್ಕೊಂಡಿದ್ದಾರೆಂದು ಹೇಳಿದ್ದಾನೆ. ನಾನು ಮುಂದಿನ ದಿನಗಳಲ್ಲಿ ಎಲ್ಲ ಬಂಡವಾಳವನ್ನು ಬಿಚ್ಚಿಡ್ತೀನಿ ಎಂದಿದ್ದಾನೆ. ಆದ್ರೆ ಗೋಪಾಲಯ್ಯ ಮಾತ್ರ ಈ ಆರೋಪ ನಿರಾಕರಿಸಿದ್ದಾರೆ.ಅದೇನೆ ಇರಲಿ ಮಾಜಿ ಸಚಿವರು ಮತ್ತು ಮಾಜಿ ಕಾರ್ಪೋರೇಟರ್​ ನಡುವಿನ ಅಸಲಿ ಕಹಾನಿಯನ್ನು ಪೊಲೀಸರು ತನಿಖೆ ಮೂಲಕ ಬಹಿರಂಗ ಪಡಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕ್ಕಾಗಿ BJP MLA ಗೋಪಾಲಯ್ಯಗೆ ಕೊಲೆ ಬೆದರಿಕೆ ಕೇಸ್​ಗೆ ಬಿಗ್​​​​ ಟ್ವಿಸ್ಟ್​​; ಅಸಲಿಗೆ ನಡೆದಿದ್ದೇ ಬೇರೆ!

https://newsfirstlive.com/wp-content/uploads/2024/02/Gopalaiah_12.jpg

Load More