ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಆರೋಪಕ್ಕೆ ಬಿಗ್​ ಟ್ವಿಸ್ಟ್​​; ಏನಿದು ಕೇಸ್​​?

author-image
Ganesh Nachikethu
Updated On
ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಆರೋಪಕ್ಕೆ ಬಿಗ್​ ಟ್ವಿಸ್ಟ್​​; ಏನಿದು ಕೇಸ್​​?
Advertisment
  • ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಆರೋಪ
  • ಮಹಿಳೆಯರು, ವಿಧವೆಯರಿಗೆ ಕಿರುಕುಳದ ನೀಡಿದ್ರಾ ಗುರೂಜಿ?
  • ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೆಸರಿನಲ್ಲಿ ದೂರು

ಮೈಸೂರು: ರಾಜ್ಯದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯದ ಆರೋಪ ಸದ್ದು ಮಾಡ್ತಿದೆ. ಮೈಸೂರಿನ ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ‌ ಕಿರುಕುಳದ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಇಂಟ್ರೆಸ್ಟಿಂಗ್ ಏನಂದ್ರೆ ಸ್ನೇಹಮಯಿ ಕೃಷ್ಣ ಹೆಸರಲ್ಲಿ ದೂರು ದಾಖಲಾಗಿದ್ರೂ ನಾನು ಕಂಪ್ಲೇಂಟ್ ಕೊಟ್ಟಿಲ್ಲ ಅಂತಿದ್ದಾರೆ.

ಇತ್ತೀಚೆಗೆ ಧಾರ್ಮಿಕ ಮುಖಂಡರ ಮೇಲೆ ಆರೋಪ, ದೂರು ಕೇಳಿ ಬರ್ತಾನೇ ಇವೆ. ಧಾರ್ಮಿಕ ಸ್ಥಳದ ವಿಚಾರವಾಗಿ ಅಥವಾ ಮದುವೆ ವಿಚಾರವಾಗಿ ಕೆಲ ಸ್ವಾಮೀಜಿಗಳ ಹೆಸರು ಸದ್ದು ಮಾಡ್ತಾನೇ ಇವೆ. ಈಗ ರಾಜ್ಯದಲ್ಲಿ ಮತ್ತೊಬ್ಬ ಗುರುಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಆರೋಪ

ಅರ್ಜುನ್ ಗುರೂಜಿ.. ಮೈಸೂರಿನ ಅವಧೂತ ಗುರುಗಳು. ಸದ್ಯ ಇವರ ವಿರುದ್ಧ ಲೈಂಗಿಕ‌ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಅರ್ಜುನ್ ಗುರೂಜಿ‌ ಹಾಗೂ ಅವರ ಶಿಷ್ಯಂದಿರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೆಸರಿನಲ್ಲಿ ದೂರು ದಾಖಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಮುಗ್ದ ಹೆಣ್ಣುಮಕ್ಕಳು, ಮಹಿಳೆಯರು, ವಿಧವೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದ್ದು, ನೊಂದ‌ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ ಎಂದು ಮಹಿಳಾ ಆಯೋಗಕ್ಕೆ ಮನವಿ ಪತ್ರ ಬರೆಯಲಾಗಿದೆ.

publive-image

ಗುರೂಜಿ ವಿರುದ್ಧ ಲೈಂಗಿಕ‌ ದೌರ್ಜನ್ಯ ಆರೋಪ

ಅರ್ಜುನ್ ಗುರೂಜಿ‌ ಹಾಗೂ ಅವರ ಶಿಷ್ಯಂದಿರಿಂದ ಹೆಣ್ಣುಮಕ್ಕಳು, ಮಹಿಳೆಯರು, ವಿಧವೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರು ದಾಖಲಾಗಿದೆ. ನೊಂದ‌ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಿ ಎಂದು ಫ್ಯಾಕ್ಸ್ ಮೂಲಕ ಕರ್ನಾಟಕ ಮಹಿಳಾ ಆಯೋಗಕ್ಕೆ ಪತ್ರ ಬಂದಿದ್ದು ಕ್ರಮಕ್ಕೆ ಮುಂದಾಗಿದೆ. ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು 15 ದಿನಗಳೊಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಅರ್ಜಿದಾರರ ನಿಯಮಾನುಸಾರ ಪರಿಶೀಲಿಸಿ, ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಯರಿಂದ ಮಾಹಿತಿ ಪಡೆದುಕೊಳ್ಳಿ ಎಂದು ಮಹಿಳಾ ಆಯೋಗ ಪೊಲೀಸರಿಗೆ ಆದೇಶಿಸಿದೆ.

ದೂರು ಕೊಟ್ಟೇ ಇಲ್ಲ ಅಂತಿರೋ ಸ್ನೇಹಮಯಿ ಕೃಷ್ಣ

ಇನ್ನು ಆಶ್ಚರ್ಯದ ಸಂಗತಿ ಏನಂದ್ರೆ ಸ್ನೇಹಮಯಿ ಕೃಷ್ಣ ಹೆಸರಲ್ಲಿ ದೂರು ನೀಡಲಾಗಿದೆ. ಆದ್ರೆ ನಾನು ದೂರು ಕೊಟ್ಟಿಲ್ಲ. ನನಗೆ ಅರ್ಜುನ್ ಗುರೂಜಿ ಯಾರು ಅಂದ್ರೇನೇ ಗೊತ್ತಿಲ್ಲ ಎಂದಿದ್ದಾರೆ.

ಒಟ್ಟಾರೆ ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು ಮಾತ್ರವಲ್ಲದೇ ದೂರು ಕೂಡ ನೀಡಲಾಗಿದೆ. ಆದ್ರೆ ನಾನು ದೂರು ಕೊಟ್ಟೇ ಇಲ್ಲ ಅಂತ ಸ್ನೇಹಮಯಿ ಕೃಷ್ಣ ಹೇಳ್ತಿದ್ದಾರೆ. ಹೀಗಾಗಿ ಈ ಸಂಬಂಧ ಕೂಲಂಕುಷ ತನಿಖೆ ನಡೆಯಬೇಕಿದೆ.

ಇದನ್ನೂ ಓದಿ:ಡಿ.ಕೆ ಶಿವಕುಮಾರ್​ ಆಟಕ್ಕೆ ಬ್ರೇಕ್​​ ಹಾಕಲು ಮುಂದಾದ ಸಿಎಂ ಸಿದ್ದರಾಮಯ್ಯ; ಸದ್ಯದಲ್ಲೇ ಹೈಕಮಾಂಡ್​​ ಭೇಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment