newsfirstkannada.com

ವ್ಯಕ್ತಿಗೆ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿದ ಕೇಸ್​ಗೆ ಬಿಗ್​ ಟ್ವಿಸ್ಟ್​.. ಅಸಲಿಗೆ ಆಗಿದ್ದೇನು?​

Share :

Published January 20, 2024 at 6:09pm

  ಕಟ್ಟಿಂಗ್​ ಶಾಪ್​​ಗೆ ನುಗ್ಗಿ ವ್ಯಕ್ತಿಗೆ ಲೇಸರ್​​ನಿಂದ ಚುಚ್ಚಿದ ದುಷ್ಕರ್ಮಿಗಳು

  ಬೆಂಗಳೂರಿನ ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಅಟ್ಯಾಕ್!

  ಹಫ್ತಾ ನೀಡಿಲ್ಲ ಅಂತಾ ಶಾಹಿದ್ ಎಂಬಾತನ ಮೇಲೆ ದಾಳಿ ಕೇಸ್​ಗೆ ಟ್ವಿಸ್ಟ್​​

ಬೆಂಗಳೂರು: ಸಣ್ಣ ಸಣ್ಣ ವಿಚಾರಗಳಿಗೆ ಹೊಡೆಯೋದು ಬಡಿಯೋದು. ಅಷ್ಟೆಲ್ಲಾ ಯಾಕೆ! ಈಗ ಕೊಲೆ ಮಾಡೋದು ಕೂಡ ಬೆಂಗಳೂರಿನಲ್ಲಿ ಕಾಮನ್​ ಆಗೋಗ್ಬಿಟ್ಟಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.

ಒಂದಲ್ಲ, ಎರಡಲ್ಲ, ಮೂರಲ್ಲ, ಅಬ್ಬಬ್ಬಾ! ಎಣಿಸ್ತಾ ಹೋದ್ರೆ ಲೆಕ್ಕವೇ ಸಿಗಲ್ಲ. ಕಟ್ಟಿಂಗ್​ ಶಾಪ್​ನಲ್ಲಿ ಕೂತಿದ್ದ ವ್ಯಕ್ತಿಗೆ ಒಬ್ಬ ಡಿಚ್ಚಿ ಹೊಡೆದ್ರೆ ಇನ್ನೊಬ್ಬ ಹೊಟ್ಟೆಗೆ ಪಂಚ್​ ಮಾಡಿದ್ದಾನೆ. ಈ ಭಯಾನಕ ಅಟ್ಯಾಕ್ ನೋಡ್ತಿದ್ರೆ ಎದೆ ನಡಗುತ್ತೆ. ಒಬ್ರಾ ಇಬ್ಬರಾ ಬರೋಬ್ಬರಿ ಆರಕ್ಕೂ ಹೆಚ್ಚು ದುಷ್ಕರ್ಮಿಗಳು. ಏಕಾಏಕಿ ಕಟ್ಟಿಂಗ್​​ ಶಾಪ್​ಗೆ ನುಗ್ಗಿ ವ್ಯಕ್ತಿಯೊಬ್ಬನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಲ್ಲದೇ.. ಅಲ್ಲೇ ಇದ್ದ ರೇಸರ್, ಚಾಕು ತೆಗೆದುಕೊಂಡು ಚುಚ್ಚೇ ಬಿಡ್ತಾರೆ.

ಜನವರಿ 16 ರ ರಾತ್ರಿ 9.30ಕ್ಕೆ.. ಪಾದರಾಯನಪುರದ 9ನೇ ಮುಖ್ಯ ರಸ್ತೆಯಲ್ಲಿ.. ಬೈಕ್ ಪಾರ್ಕ್ ಮಾಡೋ ವಿಚಾರಕ್ಕೆ ಶಾಹಿದ್ ಅಹಮ್ಮದ್ ಮತ್ತು ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಎಂಬುವರ ನಡುವೆ ಜಗಳವಾಗಿತ್ತು. ಸ್ಥಳೀಯರು ಸಮಾಧಾನ ಮಾಡಿ ಕಳಿಸಿದ್ರು. ಬಳಿಕ ಅಲ್ಲೇ ಇದ್ದ ಕಟಿಂಗ್ ಶಾಪ್​​ಗೆ ಶಾಹಿದ್ ಬಂದಿದ್ದ. ಜಸ್ಟ್​​ 15 ನಿಮಿಷದಲ್ಲಿ ಮತ್ತೆ ಎಂಟ್ರಿ ಕೊಟ್ಟ ಗ್ಯಾಂಗ್ ಶಾಹಿದ್ ನನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಮನೆಗೆ ಆಧಾರ ಸ್ತಂಭವಾಗಿದ್ದ ಪುತ್ರ

ವಿಚಾರ ಗೊತ್ತಾದ ಪೋಷಕರು, ಮನೆಗೆ ಆಧಾರ ಸ್ತಂಭವಾಗಿದ್ದ ಪುತ್ರನ ಪರಿಸ್ಥಿತಿ ಕಂಡು ಕಣ್ಣೀರು ಹಾಕ್ತಿದ್ದಾರೆ. ಅದೃಷ್ಟವಶಾತ್ ಶಾಹಿದ್ ಪ್ರಾಣಾಪಾಯದಿಂದ ಪಾರಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾನೆ.

ಸಿನಿಮಾ ಸ್ಟೈಲ್​​ನಲ್ಲಿ ಗ್ಯಾಂಗ್​ನಲ್ಲಿ ಬಂದು ಚುಚ್ಚಿದ್ದ ದುಷ್ಕರ್ಮಿಗಳು ಸದ್ಯ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಟ್ಯಾಕ್ ಮಾಡ್ತಿರೋ ದೃಶ್ಯ ನಡುಕ ಹುಟ್ಟಿಸುವಂತಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಒಂದೇ ವಿಚಾರಕ್ಕೆ ಅದು ಹಫ್ತಾ ನೀಡಿಲ್ಲ ಅನ್ನೋದು. ಅದೇನೇ ಇರ್ಲಿ ಪೊಲೀಸರ ಮೇಲೆ ಭಯವಿಲ್ಲದೇ ಪುಡಿರೌಡಿಗಳು ನಗರದಲ್ಲಿ ಹೇಗಂದ್ರೆ ಹಾಗೆ ನಡೆದುಕೊಳ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಏನ್​ ಮಾಡ್ತಿದ್ದಾರೋ ಆ ದೇವರೇ ಬಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಕ್ತಿಗೆ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿದ ಕೇಸ್​ಗೆ ಬಿಗ್​ ಟ್ವಿಸ್ಟ್​.. ಅಸಲಿಗೆ ಆಗಿದ್ದೇನು?​

https://newsfirstlive.com/wp-content/uploads/2024/01/Murder_Case1-1.jpg

Load More