/newsfirstlive-kannada/media/post_attachments/wp-content/uploads/2024/11/GUN-FIRE.jpg)
ಬೆಂಗಳೂರು: ನಿರ್ದೇಶಕನ ಮೇಲೆ ನಟ ತಾಂಡವ್ ರಾಮ್ ಫೈರಿಂಗ್ ಮಾಡಲು ಕಾರಣವೇನು? ಎಂದು ಚಂದ್ರಲೇಔಟ್ ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಒಂದು ಕಡೆ ಎರಡು ವರ್ಷವಾದ್ರೂ ಚಿತ್ರಕ್ಕೆ ನಾಯಕಿ ಆಗಿಲ್ಲ. ಇನ್ನೊಂದೆಡೆ ಇವರಿಂದ ನನ್ನ ಸಿನಿ ಕರಿಯರ್ ಹಾಳಾಗ್ತಿದ್ಯಾ ಎಂಬ ಭಯ ಶುರುವಾಗಿತ್ತು. ಹಾಗಾಗಿ ಶೂಟ್ ಮಾಡಿದೆ ಎಂದಿದ್ದಾರೆ.
ಸಿನಿ ಕರಿಯರ್ ಹಾಳಾಗೋ ಭಯ ಎಂದ ನಟ
ಎರಡು ವರ್ಷವಾದ್ರೂ ದೇವನಾಂಪ್ರಿಯ ಸಿನಿಮಾ ನಾಯಕ ನಟಿ ಆಯ್ಕೆಯಾಗಿರ್ಲಿಲ್ಲ. ಇದಕ್ಕೆ ನಟ ತಾಂಡವ್ ರಾಮ್ ಕೋಪಗೊಂಡಿದ್ದ. ಅದಷ್ಟೇ ಅಲ್ಲದೇ ಸಿನಿಮಾ ಕರಿಯರ್ ಹಾಳಾಗ್ತಿದ್ಯಾ ಅನ್ನೋ ಭಯ ಶುರುವಾಗಿತ್ತು. ಹೀಗಾಗಿ ನಿರ್ದೇಶಕ ಭರತ್ ಅವರನ್ನು ಹೆದರಿಸಲು ಆವೇಶದಲ್ಲಿ ಗುಂಡು ಹಾರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ನಟ ತಾಂಡವ ಹೇಳಿದ್ದೇನು?
ಭರತ್ ಸುಮಾರು 3 ವರ್ಷಗಳಿಂದ ನನಗೆ ಪರಿಚಯ. ಮೊದಲಿಗೆ ನಮ್ಮ ಸಿನಿಮಾಗೆ ಯಾರು ನಿರ್ಮಾಪಕರು ಸಿಕ್ಕಿರಲಿಲ್ಲ. ಬಳಿಕ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡೋದಾಗಿ ಬಂದ್ರು. ಶೂಟಿಂಗ್ ಆರಂಭ ಆಯ್ತು. ಆದ್ರೆ 30ರಷ್ಟು ಸಿನಿಮಾ ಶೂಟ್ ಆಗಿಲ್ಲ. ಜೊತೆಗೆ ಎರಡು ವರ್ಷವಾದ್ರೂ ನಾಯಕ ನಟಿಯನ್ನ ಆಯ್ಕೆ ಮಾಡಿಲ್ಲ. ನಿರ್ದೇಶಕನ ನಿರ್ಲಕ್ಷ್ಯತನ ಕಂಡು ಚಿತ್ರತಂಡವೇ ಬೇಸತ್ತು ಹೋಗಿತ್ತು. ಜೊತೆಗೆ ಸಿನಿಮಾ ತಂತ್ರಜ್ಞರಿಂದ ಭರತ್ ಕಮಿಷನ್ ಪಡೆಯುತ್ತಿದ್ದ. ಭರತ್‌ನ ಹೆದರಿಸಲು ಆವೇಶದಲ್ಲಿ ಸೀಲಿಂಗ್ ಕಡೆ ಗುಂಡು ಹಾರಿಸಿದೆ ಎಂದರು.
ಇದರ ಹಿಂದೆ ಸಾಯಿಸೋ ಉದ್ದೇಶ ನಂಗೆ ಇರಲಿಲ್ಲ. ಬರೀ ಹೆದರಿಸಲು ಸೀಲಿಂಗ್ ಕಡೆ ಗುಂಡು ಹಾರಿಸಿದ್ದೆ ಎಂದು ಪೊಲೀಸ್ರ ಮುಂದೆ ನಟ ತಾಂಡವ ರಾಮ್ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ನಿರ್ದೇಶಕ ಹಾಗೂ ನಟ ಹೇಳಿಕೆ ಪಡೆದಿರೋ ಪೊಲೀಸ್ರು ವಿಚಾರಣೆ ಮುಂದುವರೆಸಿದ್ದಾರೆ. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟ ನಟ ಕಂಬಿ ಹಿಂದೆ ಸೇರುವಂತಾಗಿದೆ.
ಇದನ್ನೂ ಓದಿ: ಸಿನಿಮಾ ನಿರ್ದೇಶಕನ ಮೇಲೆ ನಟ ಗುಂಡಿನ ದಾಳಿ ಕೇಸ್ಗೆ ಟ್ವಿಸ್ಟ್; ಅಸಲಿ ಕಥೆಯೇ ಬೇರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ