/newsfirstlive-kannada/media/post_attachments/wp-content/uploads/2024/05/KKR_Team.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಐಪಿಎಲ್ ಶುರುವಾಗಲು ಇನ್ನೇನು 2 ತಿಂಗಳು ಬಾಕಿ ಇದ್ದು, ಅನೇಕ ತಂಡಗಳು ಹೊಸ ಕ್ಯಾಪ್ಟನ್ ಜತೆಗೆ ಕಣಕ್ಕಿಳಿಯಲಿವೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸ್ಟಾರ್ ಆಟಗಾರ ಅಜಿಂಕ್ಯ ರಹಾನೆಯನ್ನು ನಾಯಕರನ್ನಾಗಿ ಮಾಡಲು ಮುಂದಾಗಿದೆ.
ರಹಾನೆ ಅವರನ್ನೇ ನಾಯಕರನ್ನಾಗಿ ಮಾಡುವ ಉದ್ದೇಶದಿಂದ ಕೆಕೆಆರ್ ಖರೀದಿಸಿದೆ. ಮೆಗಾ ಹರಾಜಿನಲ್ಲಿ ರಹಾನೆ ಅವರನ್ನು 1.5 ಕೋಟಿ ರೂಪಾಯಿಗೆ ಕೆಕೆಆರ್ ಖರೀದಿ ಮಾಡಿದೆ. ಇವರು ಕೆಕೆಆರ್ ಕ್ಯಾಪ್ಟನ್ ಆಗುವುದು ಶೇಕಡಾ 90ರಷ್ಟು ಪಕ್ಕಾ ಆಗಿದೆ. ಅವರನ್ನು ಸಮರ್ಥ ನಾಯಕತ್ವದ ಆಯ್ಕೆಯ ಉದ್ದೇಶದಿಂದ ಖರೀದಿಸಲಾಗಿದೆ ಎನ್ನಲಾಗಿದೆ.
ಆಲ್‌ರೌಂಡರ್ ವೆಂಕಟೇಶ್ ಅವರನ್ನು 23.75 ಕೋಟಿ ರೂ.ಗೆ ಫ್ರಾಂಚೈಸಿ ಖರೀದಿಸಿದೆ. ವೆಂಕಟೇಶ್ ಅಯ್ಯರ್‌ಗೆ ತಂಡದ ನಾಯಕತ್ವ ಹಸ್ತಾಂತರಿಸಬಹುದು ಅಂತಲೂ ಹೇಳಲಾಗುತ್ತಿತ್ತು. ಆದರೀಗ ರಹಾನೆ ನಾಯಕರಾಗುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ರಹಾನೆಗೆ ಮುಂಬೈ ಕ್ಯಾಪ್ಟನ್ಸಿಯಿಂದ ಕೊಕ್
ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆಗೆ ಕೊಕ್ ನೀಡಲಾಗಿದೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಿತ್ತು. ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಕಳೆದ ವರ್ಷ ಐಪಿಎಲ್ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ:ಶಿಷ್ಯನಿಗಾಗಿ ವಿರಾಟ್ನಿಂದ ದೊಡ್ಡ ತ್ಯಾಗ; ಕ್ಯಾಪ್ಟನ್ ಆಗುತ್ತಿದ್ದಂತೆ ಕೊಹ್ಲಿ ಬಗ್ಗೆ ಹೇಳಿದ್ದೇನು ರಜತ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ