newsfirstkannada.com

ಮಂಡ್ಯ ರಾಜಕೀಯಕ್ಕೆ ರೋಚಕ ಟ್ವಿಸ್ಟ್​​; JDS ಬೆಂಬಲ ಕೇಳ್ತೀನಿ ಎಂದ ಸುಮಲತಾ; ಏನಿದು ಹೊಸ ಕಹಾನಿ?

Share :

Published February 26, 2024 at 8:05pm

    ಮಂಡ್ಯ ಅಖಾಡದಲ್ಲಿ ಕ್ಷಣ ಕ್ಷಣಕ್ಕೂ ರೋಚಕ ಟ್ವಿಸ್ಟ್​

    ಸದ್ಯ ಮಂಡ್ಯ ಟಿಕೆಟ್​​ ಯಾರಿಗೆ ಅನ್ನೊದೇ ಯಕ್ಷ ಪ್ರಶ್ನೆ!

    ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಸುಮಲತಾ ಸರ್ಕಸ್​

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜೆಡಿಎಸ್​ನ ಭದ್ರಕೋಟೆ.. ದಳಪತಿಗಳು ಟಿಕೆಟ್​ ನಮ್ದೇ ಎಂದು ಹೇಳ್ತಿದ್ರೆ.. ಇನ್ನು ಸ್ವಾಭಿಮಾನಿ ಸಂಸದೆ ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸುಮಲತಾ ಹಿತೈಷಿಗಳು ಕೂಡ ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ದಳಪತಿ, ಸ್ವಾಭಿಮಾನಿಯ ತಂತ್ರ ರಣತಂತ್ರದಿಂದ ಮಂಡ್ಯದ ಮೈತ್ರಿ ಟಿಕೆಟ್​ ಯಾರಿಗೆ ಅನ್ನೋದು ಮತ್ತಷ್ಟು ಜಟಿಲವಾಗಿದೆ.

ಬಿಜೆಪಿಯ ಟಿಕೆಟ್​ ಪಡೆಯಲು ಸುಮಲತಾ ಸರ್ಕಸ್!

ಲೋಕಸಭೆ ಚುನಾವಣೆಗೆ ಜೆಡಿಎಸ್​-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಮೈತ್ರಿ ಟಿಕೆಟ್​ ಯಾರಿಗೆ ಅನ್ನೋದೇ ಸದ್ಯಕ್ಕೆ ಬಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಒಂದೆಡೆ ದಳಪತಿ ಮಂಡ್ಯ ನಮ್ಮ ಭದ್ರಕೋಟೆ ಎಂದು ಬಿಜೆಪಿ ಹೈಕಮಾಂಡ್​ ಗಮನಕ್ಕೆ ತಂದ್ರೆ, ಮತ್ತೊಂದೆಡೆ ಸ್ವಾಭಿಮಾನಿ ಸಂಸದೆ ಸುಮಲತಾ ಕೂಡ ಬಿಜೆಪಿ ನಾಯಕರ ಮೇಲೆ ಒತ್ತಡ ಹಾಕುವ ತಂತ್ರ ಹೆಣೆದಿದ್ದಾರೆ. ನಿನ್ನೆ ಬೆಂಬಲಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದ ಸುಮಲತಾ, ಇದೀಗ ಮಹಿಳಾ ಮೀಸಲಾತಿ ಜಪ ಮಾಡುವ ಮೂಲಕ ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಳ್ಳಲು ದಾಳ ಉರುಳಿಸಿದ್ದಾರೆ.

ಮಂಡ್ಯ ಟಿಕೆಟ್​ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುತ್ತೆ. ಬಿಜೆಪಿ ಟಿಕೆಟ್​ ನನಗೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿ ಮಾಡಿಕೊಂಡ ಕೂಡಲೇ ನಾನೇನು ಅವರಿಗೆ ಶತ್ರು ಆಗಲ್ಲ. ನನಗೆ ಜೆಡಿಎಸ್​ ಕೂಡ ಸಪೋರ್ಟ್​ ಮಾಡುತ್ತೆ ಎಂದು ದಳಪತಿಗಳ ನಂಬಿಕೆ ಗಳಿಸಲು ಮುಂದಾಗಿದ್ದಾರೆ.

‘ಬಿಜೆಪಿ ಟಿಕೆಟ್​ ಸಿಗುವ ವಿಶ್ವಾಸ ಇದೆ’ ಎಂದ ಸುಮಲತಾ

ಇಷ್ಟು ಮಂಡ್ಯ ಟಿಕೆಟ್​ಗಾಗಿ ಸುಮಲತಾ ಯಾಕೆ ಇಷ್ಟೊಂದು ಹಠ ಮಾಡ್ತಿದ್ದಾರೆ ಅನ್ನೋದಕ್ಕೆ ಕಾರಣವೂ ಇದೆ. ಮಂಡ್ಯ ಟಿಕೆಟ್​ ವಿಚಾರವಾಗಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುಮಲತಾ ಮಂಡ್ಯದ ತಮ್ಮ ಹಿತೈಷಿಗಳು, ಮುಖಂಡರ ಜೊತೆ ಸಭೆ ನಡೆಸಿದ್ರು. ಈ ಸಭೆಯಲ್ಲಿ ಪಕ್ಷೇತರ ಬದಲು ಬಿಜೆಪಿಯಿಂದಲೇ ಟಿಕೆಟ್​ ಪಡೆದುಕೊಂಡ್ರೆ ಉತ್ತಮ ಎಂದು ಸಲಹೆ ನೀಡಿದ್ದಾರಂತೆ. ಹಾಗಾಗಿ ನಾನು ಬೇಕಾದ್ರೆ ಜೆಡಿಎಸ್​ ಬೆಂಬಲ ಕೂಡ ಕೇಳ್ತೀನಿ ಎಂದಿದ್ದಾರೆ ಸುಮಲತಾ.

ಬೆಂಗಳೂರಿನ ಜೆ.ಪಿ.ನಗರ ನಿವಾಸದಲ್ಲಿ ಸಭೆ ನಡೆಸಿದ್ದ ಸುಮಲತಾ

ಬೆಂಗಳೂರಿನ ಜೆ.ಪಿ.ನಗರ ನಿವಾಸದಲ್ಲಿ ಸಭೆ ನಡೆಸಿದ್ದ ಸುಮಲತಾಗೆ ಪಕ್ಷೇತರರಾಗಿ ಬೇಡ, ಬಿಜೆಪಿಯ ಟಿಕೆಟ್​ ಗಿಟ್ಟಿಸಿಕೊಳ್ಳುವಂತೆ ಬೆಂಬಲಿಗರು, ಹಿತೈಷಿಗಳು ಸಲಹೆ ನೀಡಿದ್ದಾರಂತೆ. ಈ ಸಭೆಯಲ್ಲಿ ಅಂಬಿ ಆಪ್ತ ಇಂಡುವಾಳು ಸಚ್ಚಿದಾನಂದ ಸಂಧಾನಕ್ಕೂ ಸುಮಲತಾ ಯತ್ನಿಸಿದ್ದಾರೆ. ಆದ್ರೆ, ಸಂಧಾನ ಬಳಿಕವೂ ಪಕ್ಷವೇ ಮುಖ್ಯವೆಂದ ಇಂಡುವಾಳು ಸಚ್ಚಿದಾನಂದ ಸುಮಲತಾಗೆ ಅಭಿಪ್ರಾಯ ತಿಳಿಸಿದ್ದಾರಂತೆ. ಮೈತ್ರಿ ಟಿಕೆಟ್ ಪಡೆದರೆ ಮಾತ್ರ ನಿಮಗೆ ನಾನು ಬೆಂಬಲವನ್ನ ಕೊಡ್ತೀನಿ. ನಿಮ್ಮ ಜೊತೆ ಕಳೆದ ಬಾರಿಯಂತೆ ಬೆನ್ನಿಗೆ ನಿಂತು ಪ್ರಚಾರ ಮಾಡ್ತೀನಿ. ಒಂದ್ವೇಳೆ ಪಕ್ಷೇತರವಾಗಿ ಸ್ಪರ್ಧಿಸಿದರೆ ನಿಮಗೆ ನನ್ನ ಬೆಂಬಲ ಇರಲ್ಲ ಎಂದು ಕಡ್ಡಿ ಮುರಿದಂತೆ ಸಂಸದೆ ಸುಮಲತಾಗೆ ಇಂಡುವಾಳು ಸಚ್ಚಿದಾನಂದ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಬೆಂಬಲಿಗರು, ಹಿತೈಷಿಗಳ ಸಲಹೆಯಂತೆ ಮಂಡ್ಯದಲ್ಲಿ ಬಿಜೆಪಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಸುಲಮತಾ ಸರ್ಕಸ್​ ಮಾಡ್ತಿದ್ದಾರೆ.

‘ಸ್ವಾಭಿಮಾನಿ’ ಸಭೆ ಬೆನ್ನಲ್ಲೇ ದಳಪತಿ ಫುಲ್ ಅಲರ್ಟ್

ಸುಮಲತಾ ಸಭೆ ನಡೆಸಿದ ಬೆನ್ನಲ್ಲೇ ದಳಪತಿಗಳು ಅಲರ್ಟ್​ ಆಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಮಂಡ್ಯದ ಮಾಜಿ ಮತ್ತು ಹಾಲಿ ಶಾಸಕರು, ಮುಖಂಡರ ಜೊತೆ ತಡರಾತ್ರಿವರೆಗೂ ಸಭೆ ನಡೆಸಿ, ಸುಮಲತಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಹಿಡುವಂತೆ ತಮ್ಮ ಆಪ್ತರಿಗೆ ಕಿವಿಮಾತು ಹೇಳಿದ್ದಾರೆ. ಸುಮಲತಾ ಸಭೆ ಬಗ್ಗೆ ಪ್ರತಿಕ್ರಿಯಿಸಿರೋ ಹೆಚ್​ಡಿಕೆ, ಸುಮಲತಾ ಅವ್ರು ದೊಡ್ಡವರಿದ್ದಾರೆ, ನಾನ್ಯಾಕೆ ಮಾತಾಡಬೇಕು. ನಮ್ಮದು ಸಣ್ಣ ಪಕ್ಷ. ಏನು ಕೆಲಸ ಮಾಡ್ಬೇಕೋ ಮಾಡ್ತೀವಿ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಬೇಕು ಅನ್ನೋದೇ ನಮ್ಮ ಗುರಿ ಎಂದು ಹೇಳಿದ್ದಾರೆ.

ಅದೇನೆ ಇರಲಿ.. ರಾಜಕೀಯದಲ್ಲಿ ಯಾರು ಯಾವಾಗ ಬೇಕಾದ್ರೂ ಯೂಟರ್ನ್​ ಹೊಡೆದರೂ ಅಚ್ಚರಿಯಿಲ್ಲ. ಸದ್ಯಕ್ಕೆ ಮೈತ್ರಿ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಸೀಟು ಹಂಚಿಕೆಯಾದ ಬಳಿಕ ಯಾರು ಎಲ್ಲಿಂದ ಸ್ಪರ್ಧೆ ಮಾಡ್ತಾರೆ. ಯಾರು ಯಾರಿಗೆ ಬೆಂಬಲ ಕೊಡ್ತಾರೆ ಅನ್ನೋ ಗೊಂದಲಕ್ಕೆ ತೆರೆ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ರಾಜಕೀಯಕ್ಕೆ ರೋಚಕ ಟ್ವಿಸ್ಟ್​​; JDS ಬೆಂಬಲ ಕೇಳ್ತೀನಿ ಎಂದ ಸುಮಲತಾ; ಏನಿದು ಹೊಸ ಕಹಾನಿ?

https://newsfirstlive.com/wp-content/uploads/2024/02/Sumalatha-Ambarish.jpg

Load More