/newsfirstlive-kannada/media/post_attachments/wp-content/uploads/2023/06/Lakshmi-Hebbalkar.jpg)
ಬೆಳಗಾವಿ: ಎಲ್ಲರಿಗೂ ಒಂದ್ ಆಸೆ ಇರುತ್ತೆ. ಹಬ್ಬಗಳನ್ನ ಮನೆಯಲ್ಲೇ ಆಚರಿಸಿಬೇಕು. ಮನೆ ಮಂದಿ ಜೊತೆ ಕಾಲ ಕಳೆಯಬೇಕು ಅನ್ನೋದು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಅದೇ ಆಸೆ ಇದ್ದಿದ್ದು. ಆದ್ರೆ, ಸಂಕ್ರಾಂತಿ ಕಂಟಕ ಸರಿದು ಹೋಗಿದೆ. ಆದ್ರೆ, ಅಪಘಾತದ ಬಳಿಕ ಕೆಲ ಅನುಮಾನಗಳು ಕಾಡ್ತಿವೆ. ಕಂಟೇನರ್, ಜ್ಯೋತಿಷ್ಯ, ವಾಮಾಚಾರ, ಕಾರಿನ ಕಲರ್ ಮತ್ತು ನಂಬರ್ ಎಲ್ಲವೂ ಘಟನೆಯ ಸುತ್ತ ಸುತ್ಕೊಂಡಿವೆ.
ದೇವರು ದೊಡ್ಡವನು. ಇದೊಂದೆ ಮಾತು ನೋಡಿ, ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿತಿದೆ. ಕಾರಿನ ಸ್ಥಿತಿ ನೋಡಿದ್ರೆ ಸಚಿವೆ ಹೆಬ್ಬಾಳ್ಕರ್ ಬದುಕುಳಿದಿದ್ದೇ ಪವಾಡ. ಬೆಂಗಳೂರಿನಿಂದ ಬೆಳಗಾವಿಗೆ ವಾಪಸ್ ಬರುವಾಗ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದ ಆ ಭೀಕರ ಅಪಘಾತದಲ್ಲಿ ತಪ್ಪಿದ ಅನಾಹುತ, ಲಕ್ಷ್ಮೀ ಪಾಲಿಗೆ ಮರುಜನ್ಮ. ಆದ್ರೆ, ಆ್ಯಕ್ಸಿಡೆಂಟ್ನ ಘಟಾನಾವಳಿಗಳು ಸಾಕಷ್ಟು ಸಂಶಯ ಮತ್ತು ಅನುಮಾನ ಹುಟ್ಟುವಂತೆ ಮಾಡ್ತಿದೆ.
ಕಂಟೇನರ್ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಎಂದ ಚಾಲಕ!
ಹೌದು ಬೆಳಗ್ಗೆಯಿಂದ ಸಂಜೆ ತನಕ ಆಕ್ಸಿಡೆಂಟ್ಗೆ ಕಾರಣ ನುಗ್ಗಿದ ಶ್ವಾನಗಳು. ಆದ್ರೆ, ರಾತ್ರಿ ಅಪಘಾತಕ್ಕೆ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿನ ಚಾಲಕ ಅಚ್ಚರಿಯ ಕಂಪ್ಲೇಂಟ್ ನೀಡಿದ್ದು, ದಂಗು ಬಡಿಸುವಂತಿದೆ.
ಅಪರಿಚಿತ ಕಂಟೇನರ್ ಪ್ರತ್ಯಕ್ಷ!
ಇದು ಅಪರಿಚಿತ ಕಂಟೇನರ್ ವಾಹನ ಚಾಲಕನ ವಿರುದ್ಧ ಹೆಬ್ಬಾಳ್ಕರ್ ಚಾಲಕನ ದೂರಿನ ಮೇರೆಗೆ FIR ದಾಖಲಾಗಿದೆ. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಸಮೀಪ ಕಂಟೇನರ್ ಅಡ್ಡಾದಿಡ್ಡಿ ಚಾಲನೆ ಮಾಡ್ತಿತ್ತು. ಕಂಟೇನರ್ ವಾಹನ ಚಾಲಕ ಮುನ್ಸೂಚನೆ ನೀಡದೆ ಎಡಕ್ಕೆ ಟರ್ನ್ ತಗೊಂಡ. ಆಗ ನಾನು ಕಾರು ಬಲಕ್ಕೆ ತಿರುಗಿಸಿದ್ರೂ ಕಂಟೇನರ್ ಚಾಲಕ ಬಲಕ್ಕೆ ತಿರುಗಿಸಿದ್ದ. ಈ ವೇಳೆ ಬಲಕ್ಕೆ ತಿರುಗಿದ ಕಂಟೇನರ್, ನನ್ನ ವಾಹನಕ್ಕೆ ತಾಗಿದೆ. ಅಪಘಾತ ತಪ್ಪಿಸಲು ನಾನು ರಸ್ತೆ ಪಕ್ಕಕ್ಕೆ ಕಾರು ಟರ್ನ್ ಮಾಡಿದ್ದು, ಕಾರು ಮರಕ್ಕೆ ಡಿಕ್ಕಿ ಹೊಡಿದಿದೆ. ಈ ವೇಳೆ ಕಂಟೇನರ್ ಚಾಲಕ ತನ್ನ ವಾಹನ ನಿಲ್ಲಿಸದೇ ಹೋಗಿದ್ದಾನೆ. ಇದು ಅಪರಾಧ ಎಂದು FIRನಲ್ಲಿ ಉಲ್ಲೇಖ ಆಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಂಕ್ರಮಣ ಆಪತ್ತಿನ ಭವಿಷ್ಯ!
ಇನ್ನು, ಜ್ಯೋತಿಷಿ ಒಬ್ಬರು, ಸಚಿವೆ ಹೆಬ್ಬಾಳ್ಕರ್ಗೆ ಸಂಕ್ರಾಂತಿ ಹೊತ್ತು ಕುತ್ತಿದೆ ಅಂತ ಜ್ಯೋತಿಷಿ ಪುಂಡಲೀಕ ಶಾಸ್ತ್ರಿಗಳು ಭವಿಷ್ಯ ಹೇಳಿದ್ರಂತೆ. ಈವರೆಗೆ ಏಳಿಗೆ ಬಗ್ಗೆ ಹೇಳಿದ್ದ ಜ್ಯೋತಿಷಿ, ಸಂಕ್ರಾಂತಿ ಕೆಡುಕಿನ ಬಗ್ಗೆಯೂ ಶಕುನ ಹೇಳಿದ್ರು. ಈಗ ಆ ಕುತ್ತು ಮರೆಯಾಗಿದೆ ಅಂತ ಶಾಸ್ತ್ರಿಗಳು ಹೇಳಿದ್ದಾರೆ. ಹೆಬ್ಬಾಳ್ಕರ್ ಸೋದರ ಚನ್ನರಾಜ್ ಹಟ್ಟಿಹೊಳಿ ಸಹ ಈ ಮಾತನ್ನೆ ಉಲ್ಲೇಖಿಸಿದ್ದಾರೆ.
ಅಪಘಾತ ನಡೆದಿರುವ ಸ್ಥಳದಲ್ಲಿ ನಡೆದಿತ್ತಾ ವಾಮಾಚಾರ?
ಅಪಘಾತ ನಡೆದ ಸ್ಥಳವೇ ಡೆಂಜರ್. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ವಾಮಾಚಾರ ನಡೆದಿತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಕಾರು ಅಪಘಾತ ನಡೆದ ಕೆಲವೇ ಹೆಜ್ಜೆಗಳ ದೂರದಲ್ಲಿ ಮಡಿಕೆ, ನಿಂಬೆ ಹಣ್ಣು, ದಾರದ ಉಂಡಿ, ಕುಂಬಳಕಾಯಿ ಇಟ್ಟು ವಾಮಾಚಾರ ನಡೆಸಲಾಗಿದೆ. ಅಪಘಾತಕ್ಕೂ ಈ ವಾಮಾಚಾರಕ್ಕೂ ಲಿಂಕ್ ಇದ್ಯಾ ಅನ್ನೋ ಅನುಮಾನ ದಟ್ಟವಾಗಿದೆ.
ಇತ್ತ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಅಪ್ಡೇಟ್ ಕೊಟ್ಟಿದ್ದಾರೆ. ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡೋದಾಗಿದೆ ಹೇಳಿದ್ದು, ಸದ್ಯ ಊಟದ ಬದಲು ಗಂಜಿ ನೀಡಲಾಗ್ತಿದೆ ಅಂತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪಾರ್ಟಿಯಲ್ಲಿ ದರ್ಶನ್ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ; RR ನಗರ ಪೊಲೀಸರಿಂದ ಆರೋಪಿ ಅರೆಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ