newsfirstkannada.com

ಬರೋಬ್ಬರಿ 2 ವಾರಗಳ ಬಳಿಕ ಶವ ಪತ್ತೆ; ಸ್ನೇಹಿತನಿಂದಲೇ ಕೊಲೆಯಾಗಿದ್ದ ಮಾಡೆಲ್​ ಕೇಸ್​ಗೆ ಟ್ವಿಸ್ಟ್​​

Share :

Published January 13, 2024 at 10:15pm

Update January 13, 2024 at 10:08pm

    ಕಾಲುವೆಯಲ್ಲಿ ಪತ್ತೆಯಾಯ್ತು ಮಾಡೆಲ್ ಮೃತದೇಹ

    12 ದಿನಗಳ ಬಳಿಕ ಕೊನೆಗೂ ಸಿಕ್ತು ಸುಂದರಿಯ ಶವ

    ಸ್ನೇಹಿತನಿಂದಲೇ ಹತ್ಯೆಯಾಗಿದ್ದಳು ದಿವ್ಯಾ ಪಹುಜಾ

ಗುರುಗ್ರಾಮದ ಹೋಟೆಲ್​ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕೊನೆಗೂ ಪತ್ತೆಯಾಗಿದೆ. ಕೊಲೆಯಾದ 12 ದಿನಗಳ ಬಳಿಕ ಕಾಲುವೆಯೊಂದರಲ್ಲಿ ಶವ ಸಿಕ್ಕಿದೆ.

ಸ್ನೇಹಿತನಿಂದಲೇ ಹತ್ಯೆಯಾಗಿದ್ದ ದಿವ್ಯಾ ಪಹುಜಾ

ಜನವರಿ 2ರಂದು ಗುರುಗ್ರಾಮ್‌ನ ಹೋಟೆಲ್ ಕೊಠಡಿನಲ್ಲಿ ಹತ್ಯೆ ನಡೆದಿತ್ತು. ಮಾಜಿ ಮಾಡೆಲ್​ ದಿವ್ಯಾ ಪಹುಜಾರನ್ನು ಗುಂಡಿಕ್ಕಿ ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲೀಕ ಅಭಿಜಿತ್ ಕೊಲೆ ಮಾಡಿದ್ದರು.. ಅಶ್ಲೀಲ ಫೋಟೋ ಇಟ್ಟುಕೊಂಡು ಹೋಟೆಲ್​ ಮಾಲೀಕನನ್ನು ಬ್ಲಾಕ್​ಮೇಲ್​ ಮಾಡಿ ಹಣ ವಸೂಲಿ ಮಾಡಿದ್ದ ಕಾರಣ ಕೊಲೆ ಮಾಡಲಾಗಿತ್ತು ಎಂದು ಮೊದಮೊದಲು ತಿಳಿದು ಬಂದಿತ್ತು.

ದಿವ್ಯಾ ಪಹುಜಾ ಸಹೋದರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗಿತ್ತು. ಈ ವೇಳೆ ಹೋಟೆಲ್​ನಲ್ಲಿ ಪರಿಶೀಲನೆ ನಡೆಸಿದಾಗ ದಿವ್ಯಾ ಪಹುಜಾಳ ಮೃತದೇಹವನ್ನು ಸಾಗಿಸುವ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಬಿಎಂಡ್ಲ್ಯೂ ಕಾರ್​ನಲ್ಲಿ ಶವವನ್ನು ಕೊಂಡೊಯ್ಯಲಾಗಿತ್ತು. ಅಭಿಜಿತ್‌ ಸಹಚರರಾದ ಬಾಲರಾಜ್ ಮತ್ತು ರವಿ ತೆಗೆದುಕೊಂಡು ಹೋಗಿದ್ದರು. ಮೃತದೇಹವನ್ನು ತನ್ನ ಬಿಎಂಡಬ್ಲ್ಯುನಲ್ಲಿ ಹಾಕಿ ಅದು ಸಿಗದಂತೆ ವಿಲೇವಾರಿ ಮಾಡಲು ಸಿಂಗ್ ತನ್ನ ಸಹಾಯಕರಿಗೆ ₹10 ಲಕ್ಷ ನೀಡಿದ್ದ ಎನ್ನುವುದು ತಿಳಿದು ಬಂದಿದೆ. ಸದ್ಯ ಮಾಡೆಲ್ ಹತ್ಯೆಗೆ ಸಂಬಂಧಿಸಿ ಸಿಂಗ್ ಮತ್ತು ಅವನ ಇಬ್ಬರು ಸಹಾಯಕರನ್ನು ಬಂಧಿಸಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ ದಿವ್ಯಾ ಹತ್ಯೆಯ ಹಿಂದೆ ಗ್ಯಾಂಗ್​ಸ್ಟಾರ್​ ಮರ್ಡರ್​ ಕಹಾನಿ ಇದೆ ಎನ್ನಲಾಗ್ತಿದೆ.

ಮೃತದೇಹವನ್ನು ಗುರುತಿಸಿದ ಮಾಡೆಲ್​ನ ಪೋಷಕರು

ಪೊಲೀಸರ ತನಿಖೆ ವೇಳೆ ಪಟಿಯಾಲ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಬಿಎಂಡಬ್ಲ್ಯು ಕಾರು ಪತ್ತೆಯಾಗಿತ್ತು. ಇದೀಗ ಕೊಲೆಯಾದ 12 ದಿನದ ಬಳಿಕ ದಿವ್ಯಾ ಪಹುಜಾಳ ಶವ ಗುರುಗ್ರಾಮ್​ನಿಂದ 270 ಕಿ.ಮೀ. ದೂರದಲ್ಲಿರುವ ತೊಹ್ನಾದ ಕಾಲುವೆಯೊಂದರಲ್ಲಿ ಸಿಕ್ಕಿದೆ. ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಗುರುತಿಸಿದ್ದಾರೆ. ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ. ನೋಡಲು ಸುಂದರವಾಗಿದ್ದ ಚೆಲುವೆ ದಿವ್ಯಾ ಪಹುಜಾ, ಅಡ್ಡದಾರಿ ತಿಳಿದು ಭೀಕರವಾಗಿ ಕೊಲೆಯಾಗಿದ್ದ ಮಾತ್ರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 2 ವಾರಗಳ ಬಳಿಕ ಶವ ಪತ್ತೆ; ಸ್ನೇಹಿತನಿಂದಲೇ ಕೊಲೆಯಾಗಿದ್ದ ಮಾಡೆಲ್​ ಕೇಸ್​ಗೆ ಟ್ವಿಸ್ಟ್​​

https://newsfirstlive.com/wp-content/uploads/2024/01/Divya-Pahuja-1.jpg

Load More