/newsfirstlive-kannada/media/post_attachments/wp-content/uploads/2025/01/New-Year-US.jpg)
ದಕ್ಷಿಣ ಅಮೆರಿಕ: ಅವರು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ರು. ಎಲ್ಲ ಒಂದೆ ಕಡೆ ಸೇರಿ ಪಾರ್ಟಿ ಮಾಡೋರಿದ್ರು. ಆದ್ರೆ ಅವರ ಖುಷಿಯನ್ನು ನೋಡಿ ಸಹಿಸಲಾಗದ ಪಾಪಿಯೊಬ್ಬ ಅವರ ಉಸಿರನ್ನೇ ನಿಲ್ಲಿಸುವ ಪ್ಲಾನ್ ಮಾಡಿದ್ದ. ರಕ್ಕಸ ಜೋರಾಗಿ ವಾಹನ ಚಲಾಯಿಸಿ 10 ಮಂದಿಯ ಜೀವ ತೆಗೆದಿದ್ದಾನೆ. ಜರ್ಮನಿ ಬೆನ್ನಲ್ಲೇ ಅಮೆರಿಕದಲ್ಲಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಏಕಾಏಕಿ ಜನರ ಮೇಲೆ ಕಾರು ಹತ್ತಿಸಿದ ರಕ್ಕಸ!
ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದಾಗಲೇ ಪಾಪಿಯೊಬ್ಬ ಆ ಖುಷಿಯನ್ನು ಸಹಿಸಲಾಗದೇ ಅಮಾಯಕ ಜನರ ಪ್ರಾಣ ಕಸಿಯಲು ಮುಂದಾಗಿದ್ದ. ದಾಳಿಕೋರನ ಹೆಸರು ಶಂಸುದ್ದೀನ್ ಜಬ್ಬರ್. ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದ ಜನರ ಮೇಲೆ ಕಾರು ಹತ್ತಿಸಿ 10 ಜನರ ಜೀವ ತೆಗೆದಿದ್ದಾನೆ. ಮಾತ್ರವಲ್ಲದೇ 35 ಜನರು ಗಾಯಗೊಂಡಿದ್ದಾರೆ. ಬೌರ್ಬನ್ ಸ್ಟ್ರೀಟ್‌ನಲ್ಲಿ ಜನರ ಮೇಲೆ ಗಾಡಿ ಹತ್ತಿಸಿದ್ದ ಶಂಸುದ್ದೀನ್, ಬಳಿಕ ಪಿಕಪ್ ಟ್ರಕ್‌ನಿಂದ ಕೆಳಗಿಳಿದು ಗುಂಡು ಹಾರಿಸಲು ಪ್ರಾರಂಭಿಸಿದ್ದ.
ಅತಿ ವೇಗವಾಗಿ ಟ್ರಕ್ ಚಲಾಯಿಸಿದ ಚಾಲಕ ಅಪಘಾತ ನಡೆದ ಬಳಿಕ ಜನರ ಗುಂಪಿನತ್ತ ಏಕಾಏಕಿ ಗುಂಡು ಹಾರಿಸಿದ್ದು, ಪೊಲೀಸರೊಂದಿಗೂ ಗುಂಡಿನ ಚಕಮಕಿ ನಡೆಸಿದ್ದಾನೆ. ಇನ್ನು ಲೂಯಿಸಿಯಾನ ಗವರ್ನರ್ ಜೆಫ್ ಲ್ಯಾಂಡ್ರಿ ಈ ಘಟನೆಯನ್ನು ಭಯಾನಕ ಹಿಂಸಾಚಾರದ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಿದ್ದಾರೆ. ದಾಳಿಯ ಸ್ಥಳದಿಂದ ಅಧಿಕಾರಿಗಳು ಲಾಂಗ್ ಗನ್ ವಶಪಡಿಸಿಕೊಂಡಿದ್ದಾರೆ. ಇನ್ನು ಈ ದಾಳಿ ಉದ್ದೇಶಪೂರ್ವಕವಾಗಿತ್ತು ಮತ್ತು ಶಂಕಿತ ಭದ್ರತಾ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನುಮಾನಾಸ್ಪದ ಸ್ಫೋಟಕ ಸಾಧನಗಳು ಪತ್ತೆ
ಈಗಾಗಲೇ FBI ಪ್ರಕರಣದ ತನಿಖೆ ನಡೆಸಲು ಮುಂದಾಗಿದೆ. ದಾಳಿಯ ಸ್ಥಳದಲ್ಲಿ ಅನುಮಾನಾಸ್ಪದ ಸ್ಫೋಟಕ ಸಾಧನಗಳು ಸಿಕ್ಕಿವೆ. ಸದ್ಯಕ್ಕೆ ಗಾಯಗೊಂಡ ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದರು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ:ಶೋರೂಮ್ನಲ್ಲಿ ಬೆಂಕಿ ಅವಘಡ; 50ಕ್ಕೂ ಹೆಚ್ಚು ದುಬಾರಿ ಬೈಕ್ಗಳು ಸುಟ್ಟು ಕರಕಲು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್