ಅಮೆರಿಕಾ ಅಧ್ಯಕ್ಷ ಜೋ ಬೈಡನ್​​ ಹೆಂಡತಿಗೆ ಮೋದಿ ದುಬಾರಿ ಗಿಫ್ಟ್​​; ಬಿಗ್​ ಟ್ವಿಸ್ಟ್​ ಕೊಟ್ಟ ಕೇಂದ್ರ ಸರ್ಕಾರ

author-image
Ganesh Nachikethu
Updated On
VIDEO: ಶ್ವೇತಭವನದಲ್ಲಿ ಅಮೆರಿಕಾದ ಮೊದಲ ಮಹಿಳೆ ಜಿಲ್ ಬೈಡೆನ್‌, ಅಧ್ಯಕ್ಷ ಜೋ ಬೈಡನ್‌ಗೆ ಡೈಮಂಡ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ
Advertisment
  • ದುಬಾರಿ ವಜ್ರದ ಗಿಫ್ಟ್​ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ
  • ಜಿಲ್​ ಬೈಡನ್​ಗೆ ನೀಡಿದ್ದ ಗಿಫ್ಟ್​ನ ಬೆಲೆಯ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ
  • ಲ್ಯಾಬ್​ ಗ್ರೌನ್​ ಡೈಮೆಂಡ್​ ಬೆಲೆ ಪ್ರತಿ ಕ್ಯಾರೆಟ್​ಗೆ ₹15-25 ಸಾವಿರ ಮಾತ್ರ

ನವದೆಹಲಿ: 2023ನೇ ವರ್ಷದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಪತ್ನಿ ಜಿಲ್ ಬೈಡನ್​ಗೆ ಪ್ರಧಾನಿ ನರೇಂದ್ರ ಮೋದಿ ವಜ್ರದ ಉಡುಗೊರೆ ನೀಡಿದ್ದರು. ಈ ಗಿಫ್ಟ್​ ಸದ್ಯ ವಿವಾದಕ್ಕೆ ಕಾರಣವಾಗಿದೆ. ಅಮೆರಿಕಾದ ಆಡಿಟಿಂಗ್​ ವೇಳೆ ಅಮೆರಿಕಾ ಅಧ್ಯಕ್ಷರ ಕುಟುಂಬಕ್ಕೆ ಸಿಕ್ಕಿರುವ ಅತಂತ್ಯ ದುಬಾರಿ ಗಿಫ್ಟ್​ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ. ಇದರ ಮೌಲ್ಯ 17 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದುಬಾರಿ ಚರ್ಚೆ ತಾರಕಕ್ಕೇರಿದೆ.

ಅಮೆರಿಕಾ ಅಧ್ಯಕ್ಷರ ಪತ್ನಿಗೆ ಮೋದಿ ದುಬಾರಿ ಉಡುಗೊರೆ

ಅಮೆರಿಕಾದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ. ಡೋನಾಲ್ಡ್​ ಟ್ರಂಪ್​ ನೇತೃತ್ವದ ರಿಪಬ್ಲಿಕನ್​ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಇದರ ನಡುವೆ ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್​ ಮತ್ತು ಅವರ ಕುಟುಂಬಕ್ಕೆ 2023ರಲ್ಲಿ ವಿದೇಶಿ ನಾಯಕರು ನೀಡಿರುವ ಉಡುಗೊರೆಗಳ ಆಡಿಟಿಂಗ್​ ಮಾಡಲಾಗಿದ್ದು, ಸಾವಿರಾರು ಡಾಲರ್​ನಷ್ಟು ಉಡುಗೊರೆ ಬಂದಿವೆ. ಇದರಲ್ಲಿ ಭಾರತದ ಪ್ರಧಾನಿಯಿಂದ ಸಿಕ್ಕಿರುವ 20 ಸಾವಿರ ಡಾಲರ್​ ಮೌಲ್ಯದ ವಜ್ರವು ಅತ್ಯಂತ ದುಬಾರಿ ಗಿಫ್ಟ್​ ಎಂದು ಅಮೆರಿಕಾ ವಿದೇಶಾಂಗ ಇಲಾಖೆ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಮೋದಿ ನೀಡಿದ ದುಬಾರಿ ಗಿಫ್ಟ್​ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.

2023ರ ಜೂನ್​ನಲ್ಲಿ ಪ್ರಧಾನಿ ಮೋದಿ 3 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಮೆರಿಕಾದ ಪ್ರಥಮ ಮಹಿಳೆ ಜಿಲ್​ ಬೈಡನ್​ಗೆ ಪ್ರಧಾನಿ ಮೋದಿ, ವಜ್ರದ ಉಡುಗೊರೆ ನೀಡಿದ್ದರು. ಆತ್ಮ ನಿರ್ಭರ ಭಾರತದ ಸಂಕೇತವಾಗಿ, ಸೂರತ್‌ನ ಲ್ಯಾಬ್ ಗ್ರೌನ್ ಡೈಮೆಂಡ್ ಅಂದ್ರೆ 7.5 ಕ್ಯಾರೆಟ್ ಸಿಂಥಟಿಕ್ ಡೈಮಂಡ್​ನ್ನು ಉಡುಗೊರೆಯಾಗಿ ನೀಡಿದ್ದರು. ಅಮೆರಿಕಾದ ಕಾನೂನಿನ ಪ್ರಕಾರ, 41 ಸಾವಿರ ಡಾಲರ್​ ಮೇಲೆ ಗಿಫ್ಟ್​ ಸಿಕ್ಕಿದ್ರೆ, ಅದನ್ನು ಆಡಿಟ್​ ಮಾಡಲಾಗುತ್ತೆ. ಅದೇ ರೀತಿ ಆಡಿಟ್​ ಮಾಡಿದಾಗ, ಪ್ರಧಾನಿ ಮೋದಿ ನೀಡಿರುವ ವಜ್ರದ ಉಡುಗೊರೆಯೇ ದುಬಾರಿ ಗಿಫ್ಟ್​. ಈ ಡೈಮಂಡ್​ನ ಮೌಲ್ಯ ಬರೋಬ್ಬರಿ 20 ಸಾವಿರ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 17 ಲಕ್ಷ ರೂಪಾಯಿ ಎಂದು ಅಮೆರಿಕಾ ಹೇಳಿಕೊಂಡಿದೆ.

ಬೈಡನ್​ ಪತ್ನಿಗೆ ಮಾತ್ರವಲ್ಲ ಇದರ ಜೊತೆಗೆ ಡೊನಾಲ್ಡ್ ಟ್ರಂಪ್​ಗೂ ಪ್ರಧಾನಿ ಮೋದಿ 50 ಸಾವಿರ ರೂಪಾಯಿ ಮೌಲ್ಯದ ಅಘೋಷಿತ ಗಿಫ್ಟ್​​ ನೀಡಿರುವುದು ಅಮೆರಿಕದಲ್ಲಿ ಆಡಿಟ್ ವೇಳೆ ಬಹಿರಂಗ ಗೊಂಡಿದೆ.

ಪ್ರಧಾನಿ ನೀಡಿದ ದುಬಾರಿ ಗಿಫ್ಟ್​ ಬಗ್ಗೆ ಪರ-ವಿರೋಧ ಚರ್ಚೆ

ಇನ್ನು ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ನಾಯಕರಿಗೆ ಉಡುಗೊರೆಗಳನ್ನು ನೀಡೋದು ಸಂಪ್ರದಾಯ. ಪ್ರಧಾನಿ ಮೋದಿ, ಬೇರೆ ಬೇರೆ ದೇಶಗಳಿಗೆ ಭೇಟಿಕೊಟ್ಟಾಗೆಲ್ಲ, ಭಾರತದ ಸ್ನೇಹಪೂರ್ವಕವಾಗಿ ಉಡುಗೊರೆ ನೀಡಿದ್ದಾರೆ. ಆದ್ರೆ, 2023ರಲ್ಲಿ ಕೊಟ್ಟಿದ್ದ ಗಿಫ್ಟ್​ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿವೆ. ಜನರ ತೆರಿಗೆ ದುಡ್ಡನ್ನ ಮೋದಿ ಪೋಲು ಮಾಡ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ಕೇಳಿ ಬಂದಿದೆ. ಕಾಂಗ್ರೆಸ್​ ನಾಯಕರು ಕೂಡ ದುಬಾರಿ ಗಿಫ್ಟ್​ ಬಗ್ಗೆ ಚಕಾರ ಎತ್ತಿದ್ದಾರೆ.

ಇದನ್ನೂ ಓದಿ:ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ನಿಗೆ ಮೋದಿ ದುಬಾರಿ ಗಿಫ್ಟ್ ನೀಡಿದ್ದು ಸರಿಯೇ? ಏನಿದು ಹೊಸ ವಿವಾದ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment