newsfirstkannada.com

ಪಾಕಿಸ್ತಾನ್​​ ಜಿಂದಾಬಾದ್ ಕೇಸ್​​ಗೆ ಬಿಗ್​ ಟ್ವಿಸ್ಟ್​; ಏನಿದು ಬಿಜೆಪಿ ಖಾಸಗಿ ವರದಿ..?

Share :

Published March 4, 2024 at 8:54pm

  ಪಾಕಿಸ್ತಾನ್ ಜಿಂದಾಬಾದ್.. ಬಿಜೆಪಿ ಖಾಸಗಿ ವರದಿ!

  ಖಾಸಗಿ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ದೃಢ!

  ‘ಹಣ ಕೊಟ್ರೆ ಯಾರು ಬೇಕಾದ್ರೂ ವರದಿ ಕೊಡುತ್ತಾರೆ’

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎನ್ನಲಾದ ಕೇಸ್​​ ತನಿಖೆ ಇನ್ನೂ ನಡೆಯುತ್ತಿದೆ. ಘೋಷಣೆ ಕೂಗಿದ್ದಾರೋ ಇಲ್ವೋ ಅನ್ನೋದನ್ನ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ. ಈ ಮಧ್ಯೆ ಬಿಜೆಪಿ ವತಿಯಿಂದ ಖಾಸಗಿಯಾಗಿ ಎಫ್‌ಎಸ್‌ಎಲ್‌ ಪರಿಶೀಲನೆ ನಡೆಸಲಾಗಿದೆ. ಖಾಸಗಿ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್​​​​​​​​​​​​​​ ಘೋಷಣೆ ಕೂಗಿರೋದು ದೃಢಪಟ್ಟಿದೆ. ಈ ಬೆನ್ನಲ್ಲೆ ಸರ್ಕಾರಕ್ಕೂ ವರದಿ ಕೈ ಸೇರಿದ್ದು, ಮೂವರನ್ನ ಬಂಧಿಸಿದೆ.

ರಾಜ್ಯ ಸರ್ಕಾರ ಹಾಗೂ ವಿಪಕ್ಷ ಬಿಜೆಪಿ ನಾಯಕರ ನಡುವೆ ಜಿಂದಾಬಾದ್ ಜಟಾಪಟಿ ಮುಂದುವರಿದಿದೆ. ಸರ್ಕಾರ ಈ ಬಗ್ಗೆ ಎಫ್​ಎಸ್​​ಎಲ್​ಗೆ ಕಳುಹಿದ್ದು ವರದಿಗಾಗಿ ಕಾಯ್ತಿದೆ. ಈ ಮಧ್ಯೆ ಬಿಜೆಪಿ ಖಾಸಗಿಯಾಗಿ ತಯಾರಿಸಿದ ವರದಿ ಬಹಿರಂಗ ಆಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣದಲ್ಲಿ ಸರ್ಕಾರ ಎಫ್​ಎಸ್​​ಎಲ್​ ವರದಿಗಾಗಿ ಕಾಯುತ್ತಿದೆ. ಇತ್ತ ರಾಜ್ಯ ಬಿಜೆಪಿ ಕೂಡ ಖಾಸಗಿ ಎಫ್​​ಎಸ್​ಎಲ್​ ವರದಿ ತಯಾರಿಸಿದ್ದು ಟ್ವಿಟ್ಟರ್​​ನಲ್ಲಿ ಬಹಿರಂಗಪಡಿಸಿದೆ. ಕ್ಲೂ ಫಾರ್ ಎವಿಡೆನ್ಸ್​ ಫಾರೆನ್ಸಿಕ್ ಸಂಸ್ಥೆ ನೀಡಿರುವ ವರದಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್​’ ಅಂತ ಘೋಷಣೆ ಕೂಗಿರೋದು ದೃಢಪಟ್ಟಿದೆ. ಈ ಬಗ್ಗೆ ನ್ಯೂಸ್ ಫಸ್ಟ್​ಗೆ ಪ್ರತಿಕ್ರಿಯಿಸಿರೋ ಖಾಸಗಿ ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಆಡಿಯೋದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿರೋದು ನಿಜ ಎಂದಿದ್ದಾರೆ.

ಬಿಜೆಪಿಯ ಖಾಸಗಿ FSL ವರದಿಗೆ ಗೃಹಸಚಿವರ ಆಕ್ಷೇಪ

ಖಾಸಗಿ ವರದಿಯನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುವುದಿಲ್ಲ, ಗೃಹ ಇಲಾಖೆಯ ಅಡಿಯಲ್ಲಿರುವ ಎಫ್​ಎಸ್​​ಎಲ್​ ವರದಿ ಬಂದ್ಮೇಲೆ ಕ್ರಮ ಕೈಗೊಳ್ತೀವಿ ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಬಿಜೆಪಿ ಖಾಸಗಿ ವರದಿಗೆ ಪ್ರಿಯಾಂಕ್ ಖರ್ಗೆ ಪಂಚ್​

ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ರಿಪೋರ್ಟ್ ತಗೊಂಡಿದ್ದೇನೆ, ಹಣ ಕೊಟ್ಟರೆ ಯಾರು ಬೇಕಾದರೂ ವರದಿಯನ್ನ ಕೊಡುತ್ತಾರೆ ಅಂತ ಬಿಜೆಪಿಯ ಖಾಸಗಿ ವರದಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಮತ್ತೊಂದೆಡೆ ಎಫ್​ಎಸ್​ಎಲ್ ವರದಿ ಬಹಿರಂಗಕ್ಕೆ ಕಾಂಗ್ರೆಸ್​​ ಶಾಸಕರಿಂದಲೇ ಆಗ್ರಹ ಕೇಳಿಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ. ಲೋಕಸಭೆ ಚುನಾವಣೆ ಬರ್ತಿದೆ. ಜನರ ಮುಂದೆ ಹೋದ್ರೆ ನಮ್ಮನ್ನು ಪ್ರಶ್ನಿಸ್ತಾರೆ, ಹೀಗಾಗಿ ಪ್ರಕರಣವನ್ನು ಬೇಗ ಮುಗಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪಾಕ್‌ ಪರ ಘೋಷಣೆ ಕೂಗಿದ ಮೂವರ ಬಂಧನ
ನ್ಯೂಸ್‌ಫಸ್ಟ್‌ ವಿಡಿಯೋದಿಂದ ಘೋಷಣೆ ಕೂಗಿದ್ದು ದೃಢ

ಈ ಮಧ್ಯೆ ವಿಧಾನಸೌಧ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ. ಇಲ್ತಾಜ್, ಮುನಾವರ್ ಹಾಗೂ ಮೊಹಮ್ಮದ್ ಶಫೋ ನಾಶಿಪುಡಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಇಲ್ತಾಜ್ ದೆಹಲಿ ಮೂಲದವನಾಗಿದ್ದು ಮುನಾವರ್ ಬೆಂಗಳೂರಿನ ಆರ್.ಟಿ.ನಗರ ಮೂಲದವನು, ಮತ್ತೋರ್ವ ಆರೋಪಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದವನು ಎಂದು ಹೇಳಲಾಗಿದೆ. ಇನ್ನು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್​ ಅಂತ ಘೋಷಣೆ ನ್ಯೂಸ್ ಫಸ್ಟ್ ವಾಹಿನಿಯ ವಿಡಿಯೋದಿಂದ ದೃಢಪಟ್ಟಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನ್​​ ಜಿಂದಾಬಾದ್ ಕೇಸ್​​ಗೆ ಬಿಗ್​ ಟ್ವಿಸ್ಟ್​; ಏನಿದು ಬಿಜೆಪಿ ಖಾಸಗಿ ವರದಿ..?

https://newsfirstlive.com/wp-content/uploads/2024/02/Nasir-Hussain.jpg

Load More