/newsfirstlive-kannada/media/post_attachments/wp-content/uploads/2024/11/DARSHAN-1.jpg)
ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೇಸ್​ಗೆ ಮತ್ತೊಂದು ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಸದ್ಯ ಇದೇ ಕೇಸ್​ನಲ್ಲಿ ಜಾಮೀನು ಪಡೆದು ಆಚೆ ಬಂದಿರುವ ನಟ ದರ್ಶನ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದ ದಿನ ಆರೋಪಿಗಳು ನಟ ದರ್ಶನ್​ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೊಲೀಸ್​ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ.
ಇದನ್ನೂ ಓದಿ:ಕ್ರೀಡಾ ಸಚಿವಾಲಯ ಅಡಿ ಉದ್ಯೋಗಗಳ ನೇಮಕಾತಿ.. ಎಷ್ಟು ಹುದ್ದೆಗಳು ಖಾಲಿ ಇವೆ?
ಅಂದು ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಸಾಕ್ಷಿದಾರನ ಮೊಬೈಲ್​ನಿಂದ ಫೋಟೋಗಳನ್ನು ರಿಟ್ರೀವ್ ಮಾಡಿದ್ದಾರೆ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಹಾಗೂ ಆರೋಪಿಗಳು ಪೋಸ್ ನೀಡಿದ ಪೋಟೋಗಳು ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.
ಇದನ್ನೂ ಓದಿ:ಶೆಡ್‌ನಲ್ಲಿದ್ದ ದರ್ಶನ್ ಫೋಟೋ ರಿಟ್ರೀವ್? ಡಿಲೀಟ್ ಮಾಡಿದ್ದ ಪ್ರಬಲ ಸಾಕ್ಷ್ಯ! ಏನಿದು ರೋಚಕ ಟ್ವಿಸ್ಟ್?
ರಿಲೀಸ್​ ಆದ ಫೋಟೋದಲ್ಲಿ ದರ್ಶನ್​ ರೇಣುಕಾಸ್ವಾಮಿ ಕೇಸ್​ನಲ್ಲಿ A6 ಆರೋಪಿಯಾಗಿ ಕಿಡ್ನಾಪರ್ ಜಗದೀಶ್, A7 ಅನುಕುಮಾರ್ ಹಾಗೂ A8- ಕಾರು ಚಾಲಕ ರವಿ ಇದ್ದಾರೆ. ಪೊಲೀಸರು 2ನೇ ಚಾರ್ಜ್​ಶೀಟ್‌ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷ್ಯವನ್ನು ಸೇರಿಸಿರೋದು ದರ್ಶನ್‌ಗೆ ಅತಿದೊಡ್ಡ ಆತಂಕ ಕಾಡುವಂತೆ ಮಾಡಿದೆ.
ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲಿನ ದರ್ಶನ ಮಾಡಿ ಬಂದಿದ್ದಾರೆ. ಸದ್ಯ ಮಧ್ಯಂತರ ಜಾಮೀನು ಪಡೆದು ದರ್ಶನ್ ಅವರು ಆಚೆ ಬಂದಿದ್ದಾರೆ. 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು​ ಸಿಕ್ಕಿ ಸದ್ಯ ಚಿಕಿತ್ಸೆ ಪಡೀತಿದ್ದಾರೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ. ದರ್ಶನ್​ಗೆ ಬೆನ್ನು ನೋವು ಜೊತೆಗೆ ಮೇಲ್ಮನವಿ ಅನ್ನೋ ತಲೆನೋವು ಸ್ವಲ್ಪ ಜಾಸ್ತಿನೇ ಆಗಿದೆ. ಆದ್ರೆ ಇದೆಲ್ಲದರ ಮಧ್ಯೆ ದರ್ಶನ್​ಗೆ ಎರಡನೇ ಚಾರ್ಜ್​ಶೀಟ್​ ತೂಗುಗತ್ತಿ ನೇತಾಡುತ್ತಿದೆ. ಇದರ ಮಧ್ಯೆ ಮತ್ತೆ ದರ್ಶನ್​ಗೆ ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ