/newsfirstlive-kannada/media/post_attachments/wp-content/uploads/2024/07/Pavitra-Gowda-8.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡೆವಿಲ್ ಗ್ಯಾಂಗ್ ಜೈಲುವಾಸಕ್ಕೆ ಗುರಿಯಾಗಿದೆ. ದರ್ಶನ್ ಮಧ್ಯಂತರ ಜಾಮೀನಿನಲ್ಲಿ ಹೊರಗಿದ್ರೆ ಪವಿತ್ರಾಗೌಡ ಸೇರಿದಂತೆ ಬಹುತೇಕ ಆರೋಪಿಗಳು ಕಾರಾಗೃಹ ವಾಸದಲ್ಲೇ ಮುದ್ದೆ ಮುರಿಯುತ್ತಿದ್ದಾರೆ. ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಪವಿತ್ರಾಗೌಡ ಸೇರಿದಂತೆ ಡಿಗ್ಯಾಂಗ್‌ಗೆ ಮತ್ತೆ ನಿರಾಸೆಯಾಗಿದೆ.
ಕೊಲೆ ಎಂಬ ಕರ್ಮವನ್ನ ಹೊತ್ತು ಡೆವಿಲ್ ಗ್ಯಾಂಗ್ ಜೈಲುಪಾಲಾಗಿದೆ. ಮೂರ್ನಾಲ್ಕು ತಿಂಗಳಿನಿಂದ ಜೈಲಿನಲ್ಲಿ ಕಂಬಿ ಎಣಿಸುತ್ತಿದೆ. ಇದೀಗ ಬೇಲ್ ಮೇಲೆ ಹೊರ ಬರಲು ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಹವಣಿಸುತ್ತಿದ್ದಾರೆ. ಆದ್ರೆ, ಜಾಮೀನು ಅರ್ಜಿ ವಿಚಾರಣೆ ಮಾತ್ರ ಮುಂದೂಡಿಕೆ ಆಗುತ್ತಲೇ ಇದೆ.
ಹೈಕೋರ್ಟ್‌ನಲ್ಲಿ ಪವಿತ್ರಾಗೌಡ ಬೇಲ್ ಅರ್ಜಿ ವಿಚಾರಣೆ
ಕಳೆದ ವಾರ 2ನೇ ಆರೋಪಿ ದರ್ಶನ್ ಮತ್ತು ನಾಗರಾಜು ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿತ್ತು. ವಾದ-ಪ್ರತಿವಾದಕ್ಕೂ ತೆರೆಬಿದ್ದಿತ್ತು. ಪವಿತ್ರಾ ಗೌಡ, ಲಕ್ಷ್ಮಣ್, ಜಗದೀಶ್, ಅನುಕುಮಾರ್ ಸೇರಿದಂತೆ ಒಟ್ಟು 8 ಆರೋಪಿಗಳು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ರು. ಮಂಗಳವಾರ ಪವಿತ್ರಾಗೌಡ, ಲಕ್ಷ್ಮಣ್, ಜಗದೀಶ್, ಅನುಕುಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ರು. ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ಪ್ರಬಲ ವಾದ ಮಂಡಿಸಿದ್ರು. ಕೊಲೆ ಕೇಸ್‌ನಲ್ಲಿ ಮೊದಲ ಆರೋಪಿಯ ಕೈವಾಡವೇ ಇಲ್ಲ ಅಂತ ವಾದಿಸಿದ್ರು.
ಕೋರ್ಟ್ನಲ್ಲಿ ನಡೆದಿದ್ದೇನು?
ಪವಿತ್ರ ಪರ ವಕೀಲ: ಪವಿತ್ರಾಗೌಡ ಕಿಡ್ನಾಪ್‌ನಲ್ಲಿ ಭಾಗಿಯಾಗಿಲ್ಲ. ಹಲ್ಲೆ ಸ್ಥಳದಲ್ಲಿ ಪವಿತ್ರಾಗೌಡರ ಯಾವುದೇ ಪಾತ್ರವಿಲ್ಲ.
ನ್ಯಾ. ವಿಶ್ವಜಿತ್ ಶೆಟ್ಟಿ: ಪವನ್ ಸೂಚನೆ ಮೇರೆಗೆ ಕಿಡ್ನಾಪ್ ಮಾಡಿಸಲಾಗಿದೆಯೇ?
ಪವಿತ್ರ ಪರ ವಕೀಲ: ದರ್ಶನ್ ಸೂಚನೆ ಮೇರೆಗೆ ಪವನ್, ರಾಘವೇಂದ್ರಗೆ ಹೇಳಿ ಕಿಡ್ನಾಪ್ ಮಾಡಿಸಿದ್ದಾನೆ. ಅಂದು ಮಧ್ಯಾಹ್ನ 1.30ರಿಂದ ಹಲವರು ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿರಬಹುದು. ಆದರೆ ಈ ಸಾವಿನಲ್ಲಿ ಪವಿತ್ರಾಗೌಡರ ಯಾವುದೇ ಪಾತ್ರವಿಲ್ಲ
ನ್ಯಾ. ವಿಶ್ವಜಿತ್ ಶೆಟ್ಟಿ: ಅದ್ಹೇಗೆ ಹೇಳುತ್ತೀರಿ?
ಪವಿತ್ರ ಪರ ವಕೀಲ: ರೇಣುಕಾಸ್ವಾಮಿಯನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಸಾಯಿಸಿ ಎಂದು ಹೇಳಿದ್ದಾರೆಂದು ಆರೋಪ ಮಾಡಲಾಗಿದೆ. ಅಲ್ಲದೇ ಸಾಕ್ಷಿ ನಾಶದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಆದ್ರೆ, ಇದನ್ನ ಪ್ರೂವ್ ಮಾಡುವ ಸೂಕ್ತ ಸಾಕ್ಷಿಗಳೇ ಇಲ್ಲ.
ನ್ಯಾ. ವಿಶ್ವಜಿತ್ ಶೆಟ್ಟಿ: ಪವಿತ್ರಾಗೂ ಇತರೆ ಆರೋಪಿಗಳಿಗೂ ಸಂಬಂಧವೇನು?
ಪವಿತ್ರ ಪರ ವಕೀಲ: ಪವನ್, ಪವಿತ್ರಗೌಡ ಮನೆಯಲ್ಲಿ ಕೆಲಸ ಮಾಡುತ್ತಾ ಇದ್ದ. ಇನ್ನುಳಿದ ಆರೋಪಿಗಳು ಚಿತ್ರದುರ್ಗದಿಂದ ಬಂದವರು. ಇನ್ನು ಬೇರೆ ಬೇರೆ ಆರೋಪಿಗಳು ಇದ್ದಾರೆ. ಇನ್ನೂ ದರ್ಶನ್ ಮತ್ತು ಪವಿತ್ರಗೌಡ ಇಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ರು. ಇದೆಲ್ಲದರ ಹೊರತಾಗಿ ಪ್ರಕರಣದಲ್ಲಿ ಪವಿತ್ರಗೌಡ ಪಾತ್ರದ ಬಗ್ಗೆ ಸಾಕ್ಷಿಯೇ ಇಲ್ಲ. ಹೀಗಾಗಿ ಪವಿತ್ರಾಗೌಡಗೆ ಜಾಮೀನು ನೀಡಬೇಕೆಂದು ಮನವಿ ಮಾಡುತ್ತೇನೆ.
ಹೀಗೆ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಡಿಸೆಂಬರ್ 6 ಅಂದ್ರೆ ಶುಕ್ರವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಿದೆ. ಈಗ ಪವಿತ್ರಾಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್. ಇನ್ನುಳಿದ ಆರೋಪಿಗಳಾದ ಜಗದೀಶ್, ಅನುಕುಮಾರ್, ಲಕ್ಷ್ಮಣ್ ಪರ ವಾದ ಮುಕ್ತಾಯವಾಗಿದೆ. ಶುಕ್ರವಾರ ಎಸ್‌ಪಿಪಿ ವಾದ ಮಂಡಿಸಲು ಹೈಕೋರ್ಟ್ ಸೂಚನೆ ನೀಡಿದೆ. ಎಸ್‌ಪಿಪಿ ವಾದದ ಮೇಲೆ ಹಂತಕರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ:ಬೆಂಗಳೂರಿಗೆ ಸ್ಫೋಟಕ ಬ್ಯಾಟರ್ ಎಂಟ್ರಿ; RCB ಸೇರಿದ ಬಗ್ಗೆ ಏನಂದ್ರು ಜಿತೇಶ್?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ