Advertisment

ರೌಡಿಶೀಟರ್​​ ಕೊಲೆಗೆ ಮತ್ತೊಂದು ಟ್ವಿಸ್ಟ್; ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಯಲಿಗೆ..!

author-image
Ganesh Nachikethu
Updated On
ಮಚ್ಚಿನಲ್ಲಿ ಕೊಚ್ಚಿ ಕೊಲೆ ಮಾಡಿದ ಹಂತಕರು.. ಬೆಂಗಳೂರಲ್ಲಿ ರೌಡಿಶೀಟರ್ ದಿನೇಶ್ ಬರ್ಬರ ಹತ್ಯೆ!
Advertisment
  • ಎದುರಾಳಿ ಕೊಲೆಗೆ ಸ್ಕೆಚ್ ಹಾಕಿ ರೆಡಿ ಮಾಡಿದ್ದ ಹುಡುಗರಿಂದಲೇ ದಿನೇಶ್ ಕೊಲೆ
  • ಹಂತಕರ ವಿರುದ್ಧ ಬಾಣಸವಾಡಿ, ರಾಮಮೂರ್ತಿ ಠಾಣೆಯಲ್ಲಿ ಕೇಸ್ ದಾಖಲು
  • ತನಿಖೆಯಲ್ಲಿ ಬಾಣಸವಾಡಿ ಪೊಲೀಸರಿಗೆ ಆಘಾತಕಾರಿ ಮಾಹಿತಿ ಬಯಲು!

ಬೆಂಗಳೂರು: ರೌಡಿಶೀಟರ್ ದಿನೇಶ್ ಮರ್ಡರ್ ಕೇಸ್​​ನಲ್ಲಿ ಪೊಲೀಸ್ರು ಬರೋಬ್ಬರಿ 12 ಮಂದಿ ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧನವಾಗಿರೋ ಆರೋಪಿಗಳಲ್ಲಿ ಇಬ್ಬರು ರೌಡಿಶೀಟರ್ಸ್​ ಎಂದು ತಿಳಿದು ಬಂದಿದೆ. ಇವರು ಹಳೆ ವೈಷಮ್ಯ ಮತ್ತು ಹಣಕಾಸಿನ ವಿಚಾರಕ್ಕಾಗಿ ಕೊಲೆ ಮಾಡಿದ್ದಾಗಿ ಪೊಲೀಸ್ರ ಮುಂದೆ ಹಂತಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisment

ಇನ್ನು, ದಿನೇಶ್​ನನ್ನು ಹತ್ಯೆಗೈದ ಹಂತಕರ ವಿರುದ್ಧ ಹಲವಾರು ಕೇಸ್​ಗಳಿವೆ. ಕೊತ್ತನೂರು, ಬಾಣಸವಾಡಿ, ರಾಮಮೂರ್ತಿ ನಗರ ಠಾಣೆಯಲ್ಲಿ ಹಲವು ಕೇಸುಗಳು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೇವಲ ಹಣದ ವಿಚಾರಕ್ಕೆ ನಡೆದಿರೋ ಕೊಲೆಯೋ? ಅಥವಾ ಇದರ ಹಿಂದಿನ ಉದ್ದೇಶವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಏನಿದು ಕೇಸ್​..?

ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ಆಗಿರೋ ದಿನೇಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಸುಪಾರಿ ಕಿಲ್ಲರ್ ಹತ್ಯೆಗೆ ಸ್ಕೆಚ್ ಹೇಗೆ ಹಾಕಲಾಗಿತ್ತು ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ.

publive-image

ಕೊಲೆಯಾದ ದಿನೇಶ್ ಎದುರಾಳಿ ತಂಡದ ರೌಡಿ ಶೀಟರ್ ದಿಲೀಪ್​ ಹತ್ಯೆಗೆ ಸ್ಕೆಚ್ ಹಾಕಿ ತನ್ನ ಟೀಮ್​ ಅನ್ನು ರೆಡಿ ಮಾಡಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಸತೀಶ್, ಅರವಿಂದ್, ಗೌತಮ್ ಸೇರಿ ಒಟ್ಟು 10 ಜನರನ್ನು ಕರೆಸಿಕೊಂಡಿದ್ದ. ಆದರೆ ಆ 10 ಜನರು ದಿನೇಶ್​​ನ ವಿರೋಧಿಯಾಗಿರೋ ರೌಡಿ ದಿಲೀಪ್ ಜೊತೆಗೆ ಸಂಪರ್ಕದಲ್ಲಿ ಇದ್ದರು. ವಿಪರ್ಯಾಸ ಎಂದರೆ ಯಾವ ಹುಡುಗರನ್ನು ಕರೆಸಿಕೊಂಡಿದ್ದನೋ ಅದೇ ಗ್ಯಾಂಗ್​​ನಿಂದ​ ದಿನೇಶ್ ಕೊಲೆಯಾಗಿದ್ದಾನೆ.

Advertisment

ಇದನ್ನೂ ಓದಿ: ರೌಡಿಶೀಟರ್ ದಿನೇಶ್ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಸಿನಿಮೀಯ ರೀತಿ ಸ್ಕೆಚ್ ಹಾಕಿ ಮುಗಿಸಿದ ಹಂತಕರು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment