ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್​ ನಟ ಕೇಸ್​ಗೆ ಬಿಗ್​ ಟ್ವಿಸ್ಟ್​​; ಅಸಲಿಗೆ ಆಗಿದ್ದೇನು?

author-image
Ganesh Nachikethu
Updated On
ವರುಣ್ ಆರಾಧ್ಯ ಮತ್ತು ಅವಳು.. ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದ ರೀಲ್ಸ್‌ ಸ್ಟಾರ್‌!
Advertisment
  • ಸೀರಿಯಲ್ ನಟನ ವಿರುದ್ಧ ಯುವತಿಗೆ ವಂಚಿಸಿದ ಆರೋಪ!
  • 4 ವರ್ಷ ಪ್ರೀತಿಸಿ ಬಳಿಕ ಬ್ರೇಕಪ್​ ಮಾಡಿಕೊಂಡ ಸ್ಟಾರ್​​ ಜೋಡಿ
  • ಮಾಜಿ ಪ್ರಿಯಕರನ ವಿರುದ್ಧ ಯುವತಿಯಿಂದ ಪೊಲೀಸ್​​​ ದೂರು

ಬೆಂಗಳೂರು: ಸೀರಿಯಲ್ ನಟನ ವಿರುದ್ಧ ಯುವತಿಗೆ ವಂಚಿಸಿದ ಆರೋಪವೊಂದು ಕೇಳಿಬಂದಿದೆ. 4 ವರ್ಷ ಪ್ರೀತಿಸಿ ಬಳಿಕ ಬ್ರೇಕಪ್​ ಮಾಡಿಕೊಂಡು ಸೈಲೆಂಟ್​​ ಆಗಿದ್ದ ಮಾಜಿ ಪ್ರೇಯಸಿ ಈಗ ಮಾಜಿ ಪ್ರಿಯಕರನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

‘ವರುಣ್ ಆರಾಧ್ಯ’ ಕಿರುತೆರೆ ನಟ. ಬೃಂದಾವನ ಸೀರಿಯಲ್​​ ಹೀರೋ. ಯೂಟ್ಯೂಬರ್, ಇನ್​ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್​​ ಹೊಂದಿದ್ದ ಹ್ಯಾಂಡ್​​ಸಮ್​​ ಬಾಯ್​​. ಆದ್ರೀಗ ನಟ ‘ವರುಣ್ ಆರಾಧ್ಯ’ ವಿರುದ್ಧ ಪ್ರೀತಿಸಿದ್ದ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡಿರೋ ಆರೋಪವೊಂದು ಕೇಳಿಬಂದಿದ್ದು, ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ವರುಣ್ ವಿರುದ್ಧದ ದೂರೇನು?

ಇನ್​ಸ್ಟಾಗ್ರಾಂನಲ್ಲಿ ನಾನು ಅಡ್ವಟೈಸಿಂಗ್ ಕೆಲಸ ಮಾಡ್ಕೊಂಡಿದ್ದು, 2019 ಮಾರ್ಚ್​ 31ರಂದು ಸೀರಿಯಲ್ ನಟ, ಯೂಟ್ಯೂಬರ್‌ ವರುಣ್ ಆರಾಧ್ಯ ಎಂಬ ವ್ಯಕ್ತಿ instagram ನಲ್ಲಿ ಪರಿಚಯವಾದ್ರು. ಸ್ನೇಹಿತರಾಗಿ ನಂತರ ಈ ಸ್ನೇಹ ಪ್ರೀತಿಯಾಗಿ ಬದಲಾಗಿ 4 ವರ್ಷಗಳಿಂದ ಪ್ರೀತಿಯಲ್ಲಿದ್ದೆವು. 4-5 ತಿಂಗಳ ನಂತರ ನಾನು ಹಾಗೂ ವರುಣ್ ಪರಸ್ಪರ ಭೇಟಿಯಾದಾಗ ನನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್​ನಲ್ಲಿ ತೆಗೆದುಕೊಂಡಿದ್ದ. ನಂತರ 2023ರ ಜುಲೈನಲ್ಲಿ ನಾನು ವರುಣ್​ ಆರಾಧ್ಯ ಫೋನ್ ನೋಡಿದಾಗ, ಆತ ಮತ್ತೊಂದು ಹುಡುಗಿ ಜೊತೆಗಿದ್ದ ಖಾಸಗಿ ಫೋಟೋ & ವಿಡಿಯೋ ನೋಡಿದ್ದೆ ಎಂದರು.

publive-image

ಅಫೇರ್ ಬಗ್ಗೆ ಪ್ರಶ್ನೆ ಮಾಡಿದಾಗ, ಇದನ್ನ ಎಲ್ಲೂ ಹೇಳಬಾರದು, ಹೇಳಿದ್ರೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. 2023ರ ಸೆಪ್ಟೆಂಬರ್ 10 ರಂದು ವರುಣ್​ ವಾಟ್ಸಾಪ್‌ನಿಂದ ನನಗೆ ನನ್ನ ಖಾಸಗಿ, ಆಶ್ಲೀಲ ಫೋಟೋ ಕಳಿಸಿದ್ದಾನೆ. ಇದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳಿಸ್ತಿದ್ದೀಯಾ ಅಂತ ಕೇಳಿದ್ದೆ. ನನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ, ಅದನ್ನ ನಾನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆಂದು ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು, ನನ್ನ ದೇಹದ ಅಂಗಾಂಗಳ ಬಗ್ಗೆ ನಿಂದಿಸಿದ್ದಾನೆ ಎಂದು ಆರೋಪಿಸಿದ್ರು.

ಮುಂದೆ ಮದುವೆಯಾದಲ್ಲಿ, ಆತನನ್ನು ಸೇರಿ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ. 2019ರ ಮೇಯಿಂದ 2023ರ ಸೆಪ್ಟೆಂಬರ್​ವರೆಗೆ ಈ ಎಲ್ಲಾ ಘಟನೆ ನಡೆದಿದ್ದು ವರುಣ್ ಆರಾಧ್ಯನ ಪ್ರಾಣ ಬೆದರಿಕೆಗೆ ಹೆದರಿ ಇಲ್ಲಿವರೆಗೆ ದೂರು ನೀಡದೆ ಈಗ ತಡವಾಗಿ ದೂರು ನೀಡಿದ್ದೇನೆ ಎಂದಿದ್ದಾರೆ ಸಂತ್ರಸ್ತೆ.

ಸದ್ಯ ನಟ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ಫೋಟೋ, ಧಮ್ಕಿ, ಪ್ರೀತಿಸಿ ವಂಚನೆ.. ಸೀರಿಯಲ್‌ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment