ಹೆಂಡತಿ ಕಾಟಕ್ಕೆ ಜೀವ ಬಿಟ್ಟ ಕೇಸ್​ಗೆ ಬಿಗ್​ ಟ್ವಿಸ್ಟ್​​; ಗಂಡನ ವಿರುದ್ಧವೇ ನಿಕಿತಾ ಗಂಭೀರ ಆರೋಪ

author-image
Ganesh Nachikethu
Updated On
ಹೆಂಡತಿ ಕಾಟಕ್ಕೆ ಜೀವ ಬಿಟ್ಟ ಕೇಸ್​ಗೆ ಬಿಗ್​ ಟ್ವಿಸ್ಟ್​​; ಗಂಡನ ವಿರುದ್ಧವೇ ನಿಕಿತಾ ಗಂಭೀರ ಆರೋಪ
Advertisment
  • ಐಟಿ ಕಂಪನಿ ಮ್ಯಾನೇಜರ್ ಸಾವು ಕೇಸ್​ಗೆ ಬಿಗ್​ ಟ್ವಿಸ್ಟ್​
  • ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ರು!
  • ಈಗ ಗಂಡನ ವಿರುದ್ಧವೇ ಪತ್ನಿಯಿಂದ ಗಂಭೀರ ಆರೋಪ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬಾತ ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನವ್​​ ಶರ್ಮಾ ಲೈವ್​ ಬಂದು ಸೂಸೈಡ್​ ಮಾಡಿಕೊಂಡಿದ್ದು, ಇದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಮಾನವ್ ಶರ್ಮಾ ಟಿಸಿಎಸ್​​ ಐಟಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದರು. ಮೂರು ದಿನಗಳ ಹಿಂದೆ ಫೆ. 24ರಂದು ಮಾನವ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ್ರಾದ ಡಿಫೆನ್ಸ್​ ಕಾಲೊನಿಯಲ್ಲಿ ದುರ್ಘಟನೆ ನಡೆದಿದೆ. ಆತ್ಮಹತ್ಯೆಗೆ ಮುನ್ನ ಒಂದು ವಿಡಿಯೋ ಮಾಡಿದ್ದು, ತನ್ನ ಸಾವಿಗೆ ಪತ್ನಿಯೇ ಕಾರಣ ಎಂದಿದ್ದಾರೆ ಮಾನವ್​ ಶರ್ಮಾ.

publive-image

ಈ ಬಗ್ಗೆ ಪತ್ನಿ ಹೇಳಿದ್ದೇನು?

ಟಿಸಿಎಸ್ ಟೆಕ್ಕಿ ಆತ್ಮಹತ್ಯೆ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದೆ. ಮಾನವ್ ಶರ್ಮಾ ಆತ್ಮಹತ್ಯೆ ಬೆನ್ನಲ್ಲೇ ಪತ್ನಿ ವಿಡಿಯೋ ಮಾಡಿ ಗಂಭೀರ ಆರೋಪ ಮಾಡಿದ್ದಾರೆ. ಮಾನವ್ ಶರ್ಮಾ ನನ್ನನ್ನು ಯಾವಾಗಲೂ ಹೊಡೆಯುತ್ತಿದ್ದ ಎಂದು ಪತ್ನಿ ನಿಕಿತಾ ವಿಡಿಯೋದಲ್ಲಿ ಹೇಳಿದ್ದಾರೆ.

ಆತ ಆತ್ಮಹತ್ಯೆ ಮಾಡಿಕೊಂಡ ದಿನ ನನ್ನನ್ನು ತಾಯಿಯ ಮನೆಗೆ ಕರೆದುಕೊಂಡು ಬಿಟ್ಟರು. ಹಿಂದಿನ ವಿಚಾರಗಳನ್ನೇ ಹಿಟ್ಟುಕೊಂಡು ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಇವು ಯಾವು ಮದುವೆ ಆದ ನಂತರ ಜೀವನಕ್ಕೆ ಸಂಬಂಧಿಸಿಲ್ಲ. ಈ ಹಿಂದೆ ಅವರು ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು 3 ಬಾರಿ ಅವರನ್ನು ತಡೆದಿದ್ದೇನೆ. ಮದ್ಯಪಾನ ಮಾಡಿ ನನ್ನನ್ನು ಹೊಡೆಯುತ್ತಿದ್ದರು ಎಂದು ಗಂಭೀರ ಆರೋಪ ಎಸಗಿದ್ದಾರೆ.

ಇದನ್ನೂ ಓದಿ:ಆರ್​​​ಸಿಬಿ ತಂಡಕ್ಕೆ ಸುರೇಶ್​ ರೈನಾ ಎಂಟ್ರಿ; ಬೆಂಗಳೂರಿಗೆ ಬಂತು ಆನೆಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment