/newsfirstlive-kannada/media/post_attachments/wp-content/uploads/2024/12/BBK11164.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಶೋ ಸೀಸನ್​ 11, 68ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 8 ಮಂದಿ ನಾಮಿನೇಟ್​ ಆಗಿದ್ದರು. ಹೌದು, ಇದೇ ಮೊದಲ ಬಾರಿಗೆ ಸಖತ್ ಸ್ಟ್ರಾಂಗ್​ ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ.
ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಶಿಶಿರ್​, ಹನುಮಂತ, ಧನರಾಜ್​, ಮಂಜು, ಗೌತಮಿ, ಮೋಕ್ಷಿತಾ, ಚೈತ್ರಾ, ಭವ್ಯಾ, ಗೋಲ್ಡ್​, ಐಶ್ವರ್ಯಾ, ರಜತ್ ಹಾಗೂ ತ್ರಿವಿಕ್ರಮ್​​ ಇದ್ದಾರೆ. 12 ಮಂದಿ ಪೈಕಿ ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಮಂಜು, ಗೌತಮಿ, ಮೋಕ್ಷಿತಾ, ಚೈತ್ರಾ, ಭವ್ಯಾ, ಗೋಲ್ಡ್​, ಐಶ್ವರ್ಯಾ ಹಾಗೂ ರಜತ್ ನಾಮಿನೇಟ್​ ಆಗಿದ್ದರು.
ಇವರ ಪೈಕಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಜತ್​ ಹಾಗೂ ಗೌತಮಿ ಅವರನ್ನು ಸೇಫ್​ ಮಾಡಿದ್ದಾರೆ. ಇನ್ನೂ, ನಾಳಿನ ಸಂಚಿಕೆಯಲ್ಲಿ ಮಂಜು, ಮೋಕ್ಷಿತಾ, ಚೈತ್ರಾ, ಭವ್ಯಾ, ಗೋಲ್ಡ್​, ಐಶ್ವರ್ಯಾ ಇವರಲ್ಲಿ ಯಾರು ಸೇಫ್​ ಆಗಲಿದ್ದಾರೆ. ಯಾವ ಸ್ಪರ್ಧಿ 11ನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂಬ ಗೊಂದಲಕ್ಕೆ ತೆರೆ ಬಿಳಲಿದೆ.
ಇದನ್ನೂ ಓದಿ: BBK11: ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ಚೈತ್ರಾ ಕುಂದಾಪುರ; ಮಂಜಣ್ಣನ ಗೇಮ್ ಪ್ಲಾನ್ ವರ್ಕೌಟ್ ಆಯ್ತಾ?
ಆದರೆ ಇದರ ಮಧ್ಯೆ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಇಲ್ವಾ ಅಂತ ವೀಕ್ಷಕರಲ್ಲಿ ಅನುಮಾನ ಮೂಡಿದೆ. ನಾಳೆ ಕಾರ್ಯಕ್ರಮ ಕೊನೆಯಲ್ಲಿ ಬಿಗ್​ಬಾಸ್​ ಟ್ವಿಸ್ಟ್ ಕೊಡ್ತಾರಾ? ಅಥವಾ ಕಳೆದ ಕೆಲವು ಸೀಸನ್‌ಗಳ ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್‌ನಲ್ಲಿ ಇರುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ